ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಜುಲೈ 2019
ಚುನಾಯಿತ ಪ್ರತಿನಿಧಿಗಳು ಪಕ್ಷಾತೀತ ಹೋರಾಟ ನಡೆಸಿ, ಸೈಲ್ ಆಡಳಿತದ ಮೇಲೆ ಒತ್ತಹ ತರಬೇಕಿದೆ. ಇನ್ನು, ಈ ಹೋರಾಟ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಬಾರದು. ಇದು ದೇಶವ್ಯಾಪಿ ಹೋರಾಟವಾಗಬೇಕು. ಲಕ್ಷಾಂತರ ಕೋಟಿ ಬೆಲೆಬಾಳುವ ಕಾರ್ಖಾನೆಯ ಆಸ್ತಿಯನ್ನು ರಾಜ್ಯ ಸರಕಾರ ಕೇವಲ ಒಂದು ರುಪಾಯಿಗೆ ಕೇಂದ್ರ ಸರಕಾರಕ್ಕೆ ನೀಡಿತ್ತು. ಆದರೆ ಇದನ್ನು ಅಭಿವೃದ್ದಿ ಪಡಿಸದೆ ಕೇಂದ್ರ ಸರ್ಕಾರ ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಟೌನ್ ಶಾರದಾ ಮಂದಿರದಲ್ಲಿ ವಿಐಎಸ್ಎಲ್ ಕಾರ್ಮಿಕ ಸಂಘ, ಗುತ್ತಿಗೆ ಕಾರ್ಮಿಕ ಸಂಘ ಹಾಗೂ ಯುವ ಬ್ರಿಗೇಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಐಎಸ್ಎಲ್ ಸಂವಾದ ಕಾರ್ಯಕ್ರಮದಲ್ಲಿ ಚಕ್ರಮರ್ತಿ ಸೂಲಿಬೆಲೆ ಸಂವಾದ ನಡೆಸಿ ಮಾತನಾಡಿದರು.
ಮೈಸೂರು ಅರಸರು ಮತ್ತು ಸಂಸ್ಥಾಸನದ ದಿವಾನರಾಗಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪರಿಶ್ರಮದಿಂದ ಸ್ಥಾಪನೆಯಾದ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಲು ಸಂಘಟಿತ ಪ್ರಯತ್ನ ಮಾಡಬೇಕು ಎಂದರು. ಈ ಬೃಹತ್ ಕಾರ್ಖಾನೆಯನ್ನು ರಾಜ್ಯದ ಎಲ್ಲಾ ಸಂಸದರು ಒಗ್ಗೂಡಿ ಉಳಿಸಬೇಕಾಗಿದೆ.
ಖಾಸಗೀಕರಣಕ್ಕೆ ತಪ್ಪು ಮಾಹಿತಿ ಕಾರಣ
700 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಕಾರ್ಖಾನೆ ಮತ್ತು ಕಾರ್ಮಿಕರ ವಸತಿಗೃಹಗಳಿಂದ ವಾರ್ಷಿಕವಾಗಿ ಸುಮಾರು 2 ಸಾವಿರ ಕೋಟಿ ಆದಾಯ ಲಭಿಸುತ್ತಿದೆ. ಕಾರ್ಖಾನೆಗೆ ಬಂಡವಾಳ ತೊಡಗಿಸಿ ಆಧುನಿಕ ಯಂತ್ರೋಪಕರಣ ಅಳವಡಿಸಿದರೆ, ಕಾರ್ಖಾನೆ ಲಾಭದಾಯಕವಾಗಿ ನಡೆಯುವುದರಲ್ಲಿಅನುಮಾನವಿಲ್ಲ.
ಆದರೆ ಇತ್ತೀಚಿಗೆ ಕಾರ್ಖಾನೆಗೆ ಭೇಟಿ ನೀಡಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳು, ಸೈಲ್ ಆಡಳಿತಕ್ಕೆ ಸರಿಯಾದ ಮಾಹಿತಿ ನೀಡಿಲ್ಲ. ಬಹುಶಃ ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ಸತ್ಯದ ಅರಿವಿಲ್ಲದೆ ಕಾರ್ಖಾನೆಯನ್ನು ಮಾರಾಟ ಮಾಡಲು ಮುಂದಾಗಿರುವ ಸಾಧ್ಯತೆ ಇದೆ ಎಂದರು.
ನಿವೃತ್ತ ಕಾರ್ಮಿಕರ ಸಂಘದ ಮುಖಂಡ ಹನುಮಂತರಾವ್, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಿಐಎಸ್ಎಲ್ ಕಾರ್ಮಿಕರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200