ಶಿವಮೊಗ್ಗ ಲೈವ್.ಕಾಂ | SHIMOGA NEWS | 24 MAY 2021
ವ್ಯಾಪಕವಾಗಿ ಹರಡುತ್ತಿರುವ ಕರೋನ ಸೋಂಕಿಗೆ ತಡೆಯೊಡ್ಡಲು ಶಿವಮೊಗ್ಗ ನಗರದಲ್ಲಿ ಹೋಂ ಕ್ವಾರಂಟೈನ್‍ಗೆ ನಿರ್ಬಂಧ ವಿಧಿಸಲಾಗಿದೆ. ನಾಳೆಯಿಂದಲೆ ನಗರದಾದ್ಯಂತ ಇರುವ ಸೋಂಕಿತರು ಕೇರ್ ಸೆಂಟರ್‍ಗೆ ವರ್ಗವಾಗಬೇಕಿದೆ. ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾದ್ದು ನಿಶ್ಚಿತ.
![]() |
ಹೋಂ ಕ್ವಾರಂಟೈನ್‍ಗೆ ನಿರ್ಬಂಧವೇಕೆ?
ಸೋಂಕು ಹರಡುವುದನ್ನು ತಡೆಯಲು ಹೋಂ ಕ್ವಾರಂಟೈನ್‍ಗೆ ಒಳಗಾಗಬೇಕು. ಆದರೆ ಹಲವು ಸೋಂಕಿತರು ಹೋಂ ಕ್ವಾರಂಟೈನ್‍ನಲ್ಲಿ ಇರುವ ಬದಲು ಹೊರಗೆ ಅಡ್ಡಾಡುವ ಆರೋಪವಿದೆ. ಇನ್ನು, ಹೋಂ ಕ್ವಾರಂಟೈನ್‍ಗೆ ಒಳಗಾದವರು ತಮ್ಮ ಕುಟುಂಬದವರ ಸಂಪರ್ಕಕ್ಕೆ ಬರುತ್ತಾರೆ.
ಕುಟುಂಬದವರು ನೆರೆಹೊರೆಯವರೊಂದಿಗೆ ಸಂಪರ್ಕದಲ್ಲಿರುತ್ತಾರೆ. ದಿನಸಿ ಸೇರಿದಂತೆ ಅಗತ್ಯ ವಸ್ತು ಖರೀದಿ ನೆಪದಲ್ಲಿ ಹೊರಗೆ ಬರುತ್ತಾರೆ. ಇದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂದು ಅಂದಾಜಿಸಲಾಗಿದೆ. ಇದೆ ಕಾರಣಕ್ಕೆ ಹೋಂ ಕ್ವಾರಂಟೈನ್‍ಗೆ ನಿರ್ಬಂಧ ಹೇರಲು ಯೋಜಿಸಲಾಗಿದೆ.
ಪರ್ಯಾಯ ವ್ಯವಸ್ಥೆ ಏನು?
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂಭತ್ತು ಕೋವಿಡ್ ಕೇರ್ ಸೆಂಟರ್‍ಗಳನ್ನು ಓಪನ್ ಮಾಡಲು ಯೋಜಿಸಲಾಗಿದೆ. ನಾಲ್ಕು ವರ್ಡ್‍ಗೆ ಒಂದು ಕೇರ್ ಸೆಂಟರ್ ಸ್ಥಾಪಿಸಲಾಗುತ್ತದೆ. ಆಯಾ ವಾರ್ಡ್‍ನ ಸೋಂಕಿತು ಅಲ್ಲಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಉಳಿಯಬೇಕಾಗುತ್ತದೆ. ಸೋಂಕು ಸಂಪೂರ್ಣ ತಗ್ಗಿದ ಬಳಿಕ ಅವರನ್ನು ಮನೆಗೆ ಕಳುಹಿಸಲು ಯೋಜಿಸಲಾಗಿದೆ.
ಕೇರ್ ಸೆಂಟರ್‍ನಲ್ಲಿ ಏನೇನಿರುತ್ತೆ?
ಕೇರ್ ಸೆಂಟರ್‍ನಲ್ಲಿ ನಿಯಮಿತವಾಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೋವಿಡ್ ಕೇರ್ ಸೆಂಟರ್‍ಗೆ ವೈದ್ಯರು ರೌಂಡ್ಸ್ ಬರಲಿದ್ದಾರೆ. ಸೋಂಕಿತರ ಕುರಿತು ಮಾಹಿತಿ ಪಡೆದು, ಚಿಕಿತ್ಸೆ ನೀಡಲಿದ್ದಾರೆ. ವೈದ್ಯರ ಕಣ್ಗಾವಲಿನಲ್ಲಿ ಇರುವುದರಿಂದ ಸೋಂಕು ಉಲ್ಬಣಗೊಳ್ಳುವ ಭೀತಿ ದೂರಾಗಲಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಇಲ್ಲಿ ದಾಖಲಾಗುವವರಿಗೆ ಊಟ, ತಿಂಡಿ, ಪೌಷ್ಠಿಕಾಂಶವುಳ್ಳ ಆಹಾರ ನೀಡಲು ಯೋಜಿಸಲಾಗಿದೆ. ಅಲ್ಲದೆ ಪ್ರತಿದಿನ ಯೋಗ, ಧ್ಯಾನವನ್ನು ಮಾಡಿಸಲಾಗುತ್ತದೆ.
ಮತ್ತೊಂದೆಡೆ ಹಣ ಪಾವತಿಗೆ ಸಿದ್ಧವಿರುವವರಿಗೆ ಲಾಡ್ಜ್‍ಗಳಲ್ಲಿ ಕ್ವಾರಂಟೈನ್ ಆಗಲು ಅವಕಾಶವಿದೆ.
ಯಾವತ್ತಿಂದ ವ್ಯವಸ್ಥೆ ಶುರು?
ಕರೋನ ನಿಯಂತ್ರಣಕ್ಕೆ ಮಂಗಳವಾರದಿಂದಲೇ ಈ ವ್ಯವಸ್ಥೆ ಜಾರಿಗೊಳಿಸಲು ಯೋಜಿಸಲಾಗಿದೆ. ಮಂಗಳವಾರದ ಬಳಿಕ ಸೋಂಕಿತರು ಹೋಂ ಕ್ವಾರಂಟೈನ್ ಆಗುವಂತಿಲ್ಲ. ಪಾಸಿಟಿವ್ ಬಂದ ಪ್ರತಿ ವ್ಯಕ್ತಿಯು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಲೇಬೇಕಿದೆ. ಇಲ್ಲವಾದಲ್ಲಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಯೋಚನೆಯನ್ನು ಮಾಡಲಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಇಲ್ಲಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200