SHIVAMOGGA LIVE NEWS | 26 FEBRUARY 2024
ANANDAPURA : ಸಮೀಪದ ಗೌತಮಪುರದಲ್ಲಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿಕಾರಿಪುರದಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ಹಾಗೂ ಆನಂದಪುರದಿಂದ ಶಿಕಾರಿಪುರ ಕಡೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿವೆ.
ಬೈಕ್ ಸವಾರ ಭೀಮೇಶ್ (42) ಮೃತ ವ್ಯಕ್ತಿ. ಮತ್ತೊಬ್ಬ ಸವಾರ ಪ್ರತಾಪ್ (26) ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಕಾರಿಪುರದ ಕಪ್ಪನಹಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಿ ಹಿಂತಿರುಗುವಾಗ ಘಟನೆ ಸಂಭವಿಸಿದೆ. ಆನಂದಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ – ಕೋಟಿ ಕೋಟಿ ವೆಚ್ಚದಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ, ಏನೆಲ್ಲ ಅಭಿವೃದ್ಧಿಯಾಗುತ್ತೆ? ಇಲ್ಲಿದೆ ಲಿಸ್ಟ್