ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019
ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಭದ್ರಾವತಿ ಶಾಸಕ ಸಂಗಮೇಶ್ವರ್ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ರಾಮಣ್ಣಶ್ರೇಷ್ಠಿ ಪಾರ್ಕ್’ನಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಗಾಂಧಿ ಬಜಾರ್, ಅಮೀರ್ ಅಹಮ್ಮದ್ ಸರ್ಕಲ್, ನೆಹರೂ ರಸ್ತೆ, ಬಾಲರಾಜ್ ಅರಸ್ ರಸ್ತೆ ಮೂಲಕ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಅಲ್ಲಿ ನಾಮಪತ್ರ ಸಲ್ಲಿಸಲಾಯಿತು.

ಗೋಪಿ ಸರ್ಕಲ್’ನಲ್ಲಿ ಕಿರು ಸಭೆ ನಡೆಸಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಅವರು ಮಧು ಬಂಗಾರಪ್ಪ ಪರವಾಗಿ ಮತಯಾಚನೆ ಮಾಡಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
ಯಾಕ್ ಸರ್ ಪದೇ ಪದೇ ತಪ್ಪು ಮಾಡ್ತಿರಾ ಕಿಮ್ಮನೆ ಸಾಹಿಬರು ಸಚಿವರು ಆಗಿರ್ಲಿಲ್ಲವ ಅವರ ಹೆಸರು ಎಲ್ಲೂ ಇಲ್ಲ ಈ ಬಾರಿ ನನ್ನ ಸಾಹಿಬರ ಅಭಿಮಾನಿಗಳು ಮತ ಹಾಕುವುದಿಲ್ಲ ಸಿಎಂ ಹಾಗು dks ಅವ್ರ ಮತ ಮಾತ್ರ ಇರ್ಲಿ…. ನಮಗೆ ನಾಚಿಕೆ ಪಡುವ ವಿಚಾರ ಕಿಮ್ಮನೆ ಅಭಿಮಾನಿಗಳಿಗೆಯೇ ಶಿವಮೊಗ್ಗ ಲೈವ್ ನಿಂದ ಬಹಳಷ್ಟು ಮುಖ ಬಾಂಗ್ಗ ಆಗುತ ಇದೆ….