ಶಿವಮೊಗ್ಗ ಲೈವ್.ಕಾಂ | SHIMOGA | 13 ಫೆಬ್ರವರಿ 2020

ನನ್ನ ಜೀವನದ ಪ್ರಮುಖ ವಯಸ್ಸನ್ನು ನಾನು ಶಿವಮೊಗ್ಗದಲ್ಲಿ ಕಳೆದಿದ್ದೇನೆ. ಶಿವಮೊಗ್ಗದ ಜೊತೆಗೆ ನನ್ನ ಸಂಬಂಧ ಉಳಿಸಿಕೊಂಡು ಹೋಗುತ್ತಿದ್ದೇನೆ. ಈ ಭಾಗದ ಇನ್ನಷ್ಟು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಿದೆ. ಇದು ಉಪ ಮುಖ್ಯಮಂತ್ರಿ ಸಿ.ಎಸ್.ಅಶ್ವಥನಾರಾಯಣ ಅವರು ಶಿವಮೊಗ್ಗದ ದಿನಗಳ ನೆನಪು.
ಶಿವಮೊಗ್ಗ ಭೇಟಿ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ ಅವರು, ಹೈಸ್ಕೂಲ್ ಮತ್ತು ಪಿಯುಸಿಯನ್ನು ನಾನು ಶಿವಮೊಗ್ಗದಲ್ಲಿ ಓದಿದ್ದೇನೆ. ಇಲ್ಲಿನ ಡಿವಿಎಸ್ ಸಂಸ್ಥೆಯಲ್ಲಿ ಹೈಸ್ಕೂಲ್ ವಿದ್ಯಭ್ಯಾಸ ಮಾಡಿದೆ. ಎನ್ಇಎಸ್ ಸಂಸ್ಥೆಯ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಓದಿದ್ದೇನೆ ಎಂದು ಸ್ಮರಿಸಿಕೊಂಡರು.
ಶಿಕ್ಷಣ ಇಲಾಖೆಯಲ್ಲಿಕಾರ್ಯನಿರ್ವಹಿಸುತ್ತಿದ್ದ ತಮ್ಮ ತಂದೆಗೆ ಶಿವಮೊಗ್ಗಕ್ಕೆ ವರ್ಗಾವಣೆಯಾಗಿತ್ತು. ಸುಮಾರು ಐದು ವರ್ಷ ಶಿವಮೊಗ್ಗದಲ್ಲಿದ್ದೆವು. ಆಗಾಗ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದೆವು. ಸ್ನೇಹಿತರು, ಹಿತೈಷಿಗಳು ಇಲ್ಲಿದ್ದಾರೆ. ತಮ್ಮೊಂದಿಗೆ ತಂದೆಯು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಸ್ನೇಹಿತರ ಭೇಟಿಗೆ ತೆರಳಿದ್ದಾರೆ ಎಂದು ಅಶ್ವಥನಾರಾಯಣ ತಿಳಿಸಿದರು.
ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಬಿಜೆಪಿ ಮುಖಂಡ ದಿನೇಶ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]