ಶಿವಮೊಗ್ಗ ಲೈವ್.ಕಾಂ | THIRTHAHALLI | 17 ಅಕ್ಟೋಬರ್ 2019

ಆಗುಂಬೆ ಭಾಗದಲ್ಲಿ ಸುಮಾರು 10 ವರ್ಷದಿಂದ ಓಡಾಡುತ್ತಿರುವ ಕಾಡಾನೆಯನ್ನು ಕೂಡಲೆ ಸೆರೆ ಹಿಡಿಯುವಂತೆ ಶಾಸಕ ಆರಗ ಜ್ಞಾನೇಂದ್ರ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.
ಆನೆ ಕಾಡನ್ನು ಬಿಟ್ಟು ಆಗುಂಬೆ ಪಟ್ಟಣ ವ್ಯಾಪ್ತಿಯಲ್ಲಿಯು ಒಡಾಡುತ್ತಿದೆ. ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ. ಹಾಗಾಗಿ ಅದನ್ನು ಕೂಡಲೆ ಸೆರೆ ಹಿಡಿದು, ಬೇರೆಡೆ ಸ್ಥಳಾಂತರ ಮಾಡಬೇಕು ಎಂದರು.
ಭರವಸೆ ಸಾಕು, ಇನ್ನಾದರು ಹಿಡಿಯಿರಿ
ಪ್ರತಿ ಭಾರಿ ಆನೆ ಕಾಣಿಸಿಕೊಂಡಾಗಲು ಅರಣ್ಯ ಇಲಾಖೆ ಅದನ್ನು ಹಿಡಿಯುವುದಾಗಿ ಭರವಸೆ ನೀಡುತ್ತಿದ್ದಾರೆ. ಇನ್ನು ಅದೆ ಭರವಸೆ ನೀಡುತ್ತಿದ್ದರೆ ಆಗುವುದಿಲ್ಲ. ಕೂಡಲೆ ಆನೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು. ಡಿಸಿಎಫ್ ಶಂಕರಪ್ಪ, ಎಸಿಎಫ್ ಶಿವಶಂಕರ್, ವಲಯ ಅರಣ್ಯಾಧಿಕಾರಿ ಉಮಾ, ಆಗುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಸಿರುಮನೆ ನಂದನ್, ಮೇಗರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹೆಗ್ಡೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು.
