SHIVAMOGGA LIVE | 19 JULY 2023
ಶಿವಮೊಗ್ಗದಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ
SHIMOGA : ರಸ್ತೆಯಲ್ಲಿ ಡಿವೈಡರ್‌ಗೆ (Road Divider) ಟೊಯೋಟಾ ಫಾರ್ಚುನರ್ ಕಾರು ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಶಿವಮೊಗ್ಗದ ಐಬಿ ಸರ್ಕಲ್‌ನಲ್ಲಿರುವ ಡಿವೈಡರ್‌ಗೆ ಕಳೆದ ರಾತ್ರಿ ಕಾರು ಅಪ್ಪಳಿಸಿದೆ. ಕುವೆಂಪು ರಸ್ತೆಯಿಂದ ವೇಗವಾಗಿ ಬಂದ ಕಾರು ಸಿಗ್ನಲ್ ಬಳಿ ಹಾಕಲಾಗಿದ್ದ ಡಿವೈಡರ್‌ಗೆ ಗುದ್ದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಡಿವೈಡರ್‌ಗೆ ಹಾನಿಯಾಗಿದೆ. ಶಿವಮೊಗ್ಗದ ವೈದ್ಯರೊಬ್ಬರಿಗೆ ಸೇರಿದ ಕಾರು ಎಂದು ಹೇಳಲಾಗುತ್ತಿದೆ. ರಾತ್ರಿ 11 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ನಿಂತಿದ್ದ ಕ್ಯಾಂಟರ್‌ಗೆ ತೀರ್ಥಹಳ್ಳಿಯಲ್ಲಿ ಓಮ್ನಿ ಡಿಕ್ಕಿ | ಭದ್ರಾವತಿಯಲ್ಲಿ ಐವರಿಗೆ ತಲಾ 10 ಸಾವಿರ ರೂ. ದಂಡ
ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಬಾಡಿಗೆ ಸೇವೆಗೆ ಮನವಿ
SHIMOGA : ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ವಾಹನದ ಬಾಡಿಗೆ ಸೇವೆಯನ್ನು ಪ್ರವಾಸಿ ಕಾರು ಚಾಲಕರ ಸಂಘಕ್ಕೆ ನೀಡುವಂತೆ ಒತಾಯಿಸಿ ಪ್ರವಾಸಿ ಕಾರು ಚಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವಿಮಾನ ಪ್ರಯಾಣಿಕರಿಗೆ ಬಾಡಿಗೆ ವಾಹನದ ಸೇವೆ ನೀಡಲು ನಮ್ಮ ಸಂಘಕ್ಕೆ ಅವಕಾಶ ನೀಡಬೇಕು. ಹಲವು ವರ್ಷದಿಂದ ನಮ್ಮ ಸಂಘ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುತ್ತಿದೆ. ಇದನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು. ಸಂಘದ ಅಧ್ಯಕ್ಷ ಬಿ.ಡಿ.ಗಣೇಶ್, ಎನ್.ರಾಘವೇಂದ್ರ, ಎಸ್.ಜಿ.ನರಸಿಂಹಮೂರ್ತಿ, ರವಿ, ಕೇಶವಮೂರ್ತಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾತ್ರಿ ಗಸ್ತು ವೇಳೆ ವ್ಯಕ್ತಿಯ ಬೆರಳಚ್ಚು ಪಡೆದ ಪೊಲೀಸ್, ಕೆಲವೇ ಕ್ಷಣದಲ್ಲಿ ಆತ ಅರೆಸ್ಟ್, ಯಾಕೆ?
ಯುವತಿ ಮಾನಭಂಗಕ್ಕೆ ಯತ್ನ ಆರೋಪ
HOLEHONNURU : ಯಾರೂ ಇಲ್ಲದ ವೇಳೆ ಯುವತಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಗ್ರಾಮವೊಂದರ ಮನೆಯಲ್ಲಿ ಘಟನೆ ಸಂಭವಿಸಿದೆ. ಯುವತಿಯ ತಂದೆ, ತಾಯಿ ಹೊರಗೆ ಹೋಗಿದ್ದರು. ಈ ವೇಳೆ ಯುವಕನೊಬ್ಬ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಮಾನಭಂಗ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ಥೆಯ ಹೆಸರು, ಊರು, ವಿಳಾಸ ಬಹಿರಂಗಪಡಿಸುವು ಶಿಕ್ಷಾರ್ಹ ಅಪರಾಧ. ಮಾಹಿತಿಗಾಗಿ ಮಾತ್ರ ಈ ಸುದ್ದಿ ಪ್ರಕಟಿಸಲಾಗಿದೆ.)
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200