ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 AUGUST 2023
ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮಹಿಳೆ ದೂರು
SHIMOGA : ಫೇಸ್‌ಬುಕ್‌ನಲ್ಲಿ (Facebook) ಅವಹೇಳನ ಮಾಡಿದ ಆರೋಪ ಸಂಬಂಧ ಚಕ್ರವರ್ತಿ ಸೂಲಿಬೆಲೆ (Chakravathi Sulibele) ವಿರುದ್ಧ ಮಹಿಳೆಯೊಬ್ಬರು (Woman) ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಪಿಸಿಸಿ ಸಾಮಾಜಿಕ ಜಲಾತಾಣ ವಿಭಾಗದ ಸೌಗಂಧಿಕಾ.ಎಸ್.ಆರ್ ಅವರಿಗೆ ವೈಯಕ್ತಿಕ ತೇಜೋವಧೆ ಮಾಡಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯರೊಂದಿಗೆ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ – ನಿಧಿ ಆಸೆ, ಬೆಂಗಳೂರಿನ ವ್ಯಕ್ತಿಗೆ ಶಿವಮೊಗ್ಗದಲ್ಲಿ ಲಕ್ಷ ಲಕ್ಷ ರೂ. ವಂಚನೆ, ಹೇಗಾಯ್ತು ಮೋಸ?
ಎನ್‌ಇಪಿ ರದ್ದು ವಿರುದ್ಧ ಪ್ರತಿಭಟನೆ
SHIMOGA : ಹೊಸ ಶಿಕ್ಷಣ ನೀತಿ (NEP) ರದ್ದುಗೊಳಿಸಿ ರಾಜ್ಯ ಸರ್ಕಾರ ಕರ್ನಾಟಕದ ವಿದ್ಯಾರ್ಥಿಗಳನ್ನು ಕತ್ತಲೆಗೆ ದೂಡುತ್ತಿದೆ ಎಂದು ಆರೋಪಿಸಿ ABVP ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಮುಂದೆ ದೇಶಾದ್ಯಂತ ಎನ್‌ಇಪಿ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದೆ. ಎನ್‌ಇಪಿ ರದ್ದುಗೊಳಿಸಿದರೆ, ಐಐಟಿ, ಐಐಎಂ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನಕ್ಕೆ ತೆರಳಲು ರಾಜ್ಯದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಎನ್‌ಇಪಿಯನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳುವುದು ಸರಿಯಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ – ಹೊಳೆಹೊನ್ನೂರು ಗಾಂಧಿ ಪ್ರತಿಮೆ ಧ್ವಂಸ ಕೇಸ್, ಚಿತ್ರದುರ್ಗದ ಇಬ್ಬರು ಅರೆಸ್ಟ್, ಆರೋಪಿಗಳ ಹಿನ್ನೆಲೆ ಏನು?
ಪಾಲಿಕೆ ವತಿಯಿಂದ ಕೊಟ್ಟಿಗೆ ತೆರವು ಕಾರ್ಯಾಚರಣೆ
SHIMOGA : ಮಹಾನಗರ ಪಾಲಿಕೆ (Mahanagara Palike) ಜಾಗದಲ್ಲಿ ಅರಣ್ಯ ಇಲಾಖೆ ನಿವೃತ್ತ ನೌಕರರೊಬ್ಬರು ನಿರ್ಮಿಸಿಕೊಂಡಿದ್ದ ಕೊಟ್ಟಿಗೆಯನ್ನು ತೆರವು ಮಾಡಲಾಯಿತು. ವಿನೋಬನಗರ (Vinobanagara) 60 ಅಡಿ ರೆಸ್ತೆಯ 8ನೇ ತಿರುವಿನಲ್ಲಿ ಪೊಲೀಸರ ರಕ್ಷಣೆಯಲ್ಲಿ ಜೆಸಿಬಿ ಮೂಲಕ ಕೊಟ್ಟಿಗೆ ತೆರವುಗೊಳಿಸಲಾಯಿತು. ಅರಣ್ಯ ಇಲಾಖೆ ನಿವೃತ್ತ ನೌಕರ ಬೀರಪ್ಪ ಎಂಬುವವರು ಕೊಟ್ಟಿಗೆ ನಿರ್ಮಿಸಿಕೊಂಡಿದ್ದರು. ಇದರಲ್ಲಿ ಮೂರು ಹಸುಗಳನ್ನು ಸಾಕಿಕೊಂಡಿದ್ದರು. ಪಾಲಿಕೆ ಹಲವು ಬಾರಿ ನೊಟೀಸ್ ನೀಡಿದ್ದರು ಕೊಟ್ಟಿಗೆ ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಇವತ್ತು ತೆರವು ಕಾರ್ಯಾಚರಣೆ ಮಾಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422