ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 AUGUST 2023
ಬೈಕ್ ಕೀಯಿಂದ ಮೂವರ ಮೇಲೆ ಹಲ್ಲೆ
SHIMOGA : ಅಡ್ಡ ನಿಲ್ಲಿಸಿದ್ದ ಬೈಕ್ (Bike) ತಗಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಬೈಕ್ ಕೀಯಿಂದ (Bike Key) ಮೂವರ ಮೇಲೆ ಹಲ್ಲೆ ಮಾಡಿದ್ದಾನೆ. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಘಟನೆ ಸಂಭವಿಸಿದೆ. ಮಂಜ ಎಂಬಾತ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಡ್ಡ ನಿಲ್ಲಿಸಿದ್ದ ಬೈಕ್ ತೆಗೆಯುವಂತೆ ಆಸ್ಪತ್ರೆ ಸಿಬ್ಬಂದಿ ಮತ್ತು ಮನೋಜ್ ಎಂಬುವವರು ಮಂಜ ಎಂಬಾತನಿಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮಂಜ ಮೂವರ ಮೇಲೆ ಬೈಕ್ ಕೀಯಿಂದ ಹೊಡೆದಿದ್ದಾನೆ. ಗಾಯಗೊಂಡಿದ್ದ ಮೂವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ವಾಹನ ಸವಾರರ ಎಚ್ಚರ, ಇನ್ಮುಂದೆ ಕಂಡಲ್ಲೆಲ್ಲ ಪಾರ್ಕಿಂಗ್ ಮಾಡುವಂತಿಲ್ಲ, ಕಾರಣವೇನು?
ಬೇಕರಿಯಿಂದ ಪಾರ್ಕಿಂಗ್ ಸ್ಥಳಕ್ಕೆ ಮರಳಿದ ವ್ಯಕ್ತಿಗೆ ಕಾದಿತ್ತು ಶಾಕ್
SHIMOGA : ಬೇಕರಿಗೆ ಹೋಗಿ ಮರಳಿ ಬರುವಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗದ ಎನ್.ಟಿ.ರಸ್ತೆಯ ಕೇಕ್ ಕೆಫೆ ಮುಂಭಾಗ ಘಟನೆ ಸಂಭವಿಸಿದೆ. ಹನುಮಂತಪ್ಪ ಎಂಬುವವರಿಗೆ ಸೇರಿದ ಸುಜೂಕಿ ಆಕ್ಸಿಸ್ 125 ಬೈಕ್ ಅನ್ನು ಕೇಕ್ ಕೆಫೆ ಮುಂದೆ ನಿಲ್ಲಸಿ, ಬೇಕರಿಗೆ ಹೋಗಿದ್ದರು. ಹತ್ತು ನಿಮಿಷದಲ್ಲಿ ಹೊರ ಬಂದು ನೋಡಿದಾಗ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದ ಬಳಿದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನವಾಗಿರುವ ಕುರಿತು ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋಗಳ ದಿಢೀರ್ ತಪಾಸಣೆ, ಖುದ್ದು ಫೀಲ್ಡಿಗಿಳಿದ ರಕ್ಷಣಾಧಿಕಾರಿ
ಕಸದ ವಿಚಾರಕ್ಕೆ ನೆರೆಹೊರೆಯವರು
SHIMOGA : ಕಸದ ವಿಚಾರವಾಗಿ ನೆರೆಹೊರೆಯವರು ಗಲಾಟೆ ಮಾಡಿಕೊಂಡಿದ್ದು ಕೈ ಕೈ ಮಿಲಾಯಿಸಿದ್ದಾರೆ. ಘಟನೆ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ. ಅಶೋಕ ನಗರದಲ್ಲಿ ಘಟನೆ ಸಂಭವಿಸಿದೆ. ಮನೆಯೊಂದರ ಮುಂದಿದ್ದ ಕಸವನ್ನು ಪಕ್ಕಕ್ಕೆ ತಳ್ಳುತ್ತಿದ್ದಾಗ ನೆರೆ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ನೊಟೀಸ್, ಯೋಜನೆ ಜಾರಿಗೆ ದಿನಾಂಕ ಫಿಕ್ಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422