ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018
ಆರು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಶಾಸಕ ಕರಿಯಣ್ಣ (74), ಇವತ್ತು ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕರಿಯಣ್ಣ ಚಿಕಿತ್ಸೆ ಪಡೆಯುತ್ತಿದ್ದರು.
![]() |
ಅನಾರೋಗ್ಯದ ನಡುವೆಯೂ ಬಿರುಸಿನ ಪ್ರಚಾರ
ಆರೋಗ್ಯದಲ್ಲಿ ಸಮಸ್ಯೆಯಿದ್ದರೂ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭ, ಕರಿಯಣ್ಣ, ಬಿರುಸಿನ ಪ್ರಚಾರ ನಡೆಸಿದ್ದರು. ತಮ್ಮ ಮಗ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ತಿ ಡಾ.ಶ್ರೀನಿವಾಸ್ ಪರವಾಗಿ ಹಗಲು ರಾತ್ರಿಯನ್ನದೆ ಪ್ರಚಾರ ನಡೆಸಿದ್ದರು. ಆ ಬಳಿಕ ಕರಿಯಣ್ಣ ಹೊರಗೆ ಕಾಣಿಸಿಕೊಂಡಿದ್ದು ವಿರಳ.

ಮಾಜಿ ಶಾಸಕ ಕರಿಯಣ್ಣ ಕುರಿತ ಹತ್ತು ಪ್ರಮುಖಸಂಗತಿ
- ಲೆಕ್ಕಪರಿಶೋಧಕ ಇಲಾಖೆಯಲ್ಲಿ ಕರಿಯಣ್ಣ ಅವರುಗುಮಾಸ್ತರಾಗಿ ಕೆಲಸ ಮಾಡಿದ್ದರು.
- ಕಾಂಗ್ರೆಸ್ಪಕ್ಷದ ಹಿರಿಯ ಮುಖಂಡ ಕೆ.ಹೆಚ್.ಶ್ರೀನಿವಾಸ್ ಅವರು ಕರಿಯಣ್ಣ ಅವರನ್ನ ಕಾಂಗ್ರೆಸ್ ಪಕ್ಷಕ್ಕೆಕರೆತಂದು, ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ನಾಯಕನಾಗಿ ಗುರುತಿಸಿದರು.
- 1978ರಲ್ಲಿ ಕರಿಯಣ್ಣ ಅವರನ್ನು ಶಿವಮೊಗ್ಗ ನಗರಾಭಿವೃದ್ದಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.ಅಲ್ಲಿಂದ ಸಕ್ರಿಯ ರಾಜಕಾರಣ ಆರಂಭವಾಯಿತು.
- 1983ರಲ್ಲಿಕರಿಯಣ್ಣ, ಶಿವಮೊಗ್ಗ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.
- 1989ಮತ್ತು 1999ರಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ (ಅಂದಿನ ಹೊಳೆಹೊನ್ನೂರು) ಕಾಂಗ್ರೆಸ್ಅಭ್ಯರ್ಥಿ ಯಾಗಿ ಗೆಲುವು ಸಾಧಿಸಿದ್ದರು.

- ಎಸ್.ಎಂಕೃಷ್ಣ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಒದಗಿ ಬಂದಿತ್ತಾದರೂ ಕೊನೆ ಕ್ಷಣದಲ್ಲಿ ಕೈತಪ್ಪಿತ್ತು.
- ಅನುಸೂಚಿತಜಾತಿ/ ಪಂಗಡಗಳ ಅನುದಾನ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
- ಮಲ್ಲಿಕಾರ್ಜುನಖರ್ಗೆ ಅವರ ಆಪ್ತರಾಗಿದ್ದ ಕರಿಯಣ್ಣ ಅವರು ರಾಜ್ಯ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿದ್ದರು.ಈಮೊದಲು ಜಿಲ್ಲಾ ಕಾಂಗ್ರೆಸ್’ನ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.
- ಶಿವಮೊಗ್ಗದಸಿಟಿ ಕೋ-ಆಪರೇಟೀವ್ ಬ್ಯಾಂಕ್, ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ, ಕೋಟೆ ಶ್ರೀ ಮಾರಿಕಾಂಬದೇವಸ್ಥಾನ ಸಮಿತಿ, ರವೀಂದ್ರನಗರ ಗಣಪತಿ ದೇವಸ್ಥಾನ ಸಮಿತಿಗಳ ಅಧ್ಯಕ್ಷರಾಗಿ, ಸಕ್ರಿಯಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
- ಹರಿಜನ – ಗಿರಿಜನ ಅಭಿವೃದ್ದಿ ವಿದ್ಯಾಸಂಸ್ಥೆ ಸ್ಥಾಪಿಸುವಮೂಲಕ ಕರಿಯಣ್ಣ ಅವರು ನಗರದಲ್ಲಿ ಎರಡು ಹೈಸ್ಕೂಲ್ ನಡೆಸುತ್ತಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200