ಅಡಿಕೆ ಬೆಳೆಗಾರರ ನಿಯೋಗದಿಂದ ಕೇಂದ್ರ ಸಚಿವರ ಭೇಟಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 28 NOVEMBER 2024

ನವದೆಹಲಿ : ಕೇಂದ್ರದ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಅವರನ್ನು ಭೇಟಿ ಮಾಡಿದ ಮಲೆನಾಡು, ಕರಾವಳಿ ಭಾಗದ ಸಂಸದರ ಹಾಗೂ ಬೆಳೆಗಾರರ ನಿಯೋಗ ಅಡಿಕೆ (Adike) ಬೆಳೆಯುವವರು ಎದುರಿಸುತ್ತಿರುವ ಸಮಸ್ಯೆಗಳ ವಿಷಯವಾಗಿ ಚರ್ಚಿಸಿತು. ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಚಿವರಿಗೆ ನಿಯೋಗ ಮನವಿ ಮಾಡಿತು.

ಶಿವಮೊಗ್ಗದಲ್ಲಿ ಮೆಕ್ಕೆಜೋಳ ಸಂಶೋಧನಾ ಕೇಂದ್ರವನ್ನು ಶೀಘ್ರ ಸ್ಥಾಪಿಸಲು ಮನವಿ ಮಾಡಲಾಯಿತು. ಡಿ. 6ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆಯಲಿರುವ ಅಡಿಕೆ ಬೆಳೆಗಾರರ ಸಭೆಗೆ ಸಚಿವರನ್ನು ಆಹ್ವಾನಿಸಲಾಯಿತು.

MP-By-Raghavendra-meets-central-agriculture-minister. Adike

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಬೆಳೆಗಾರರಾದ ಹೆಚ್.ಎಸ್.ಮಂಜಪ್ಪ, ಯು.ಹೆಚ್.ರಾಮಪ್ಪ, ಅನಿಲ್ ವೋಡೆಯಾರ್, ಮಲ್ಲಿಕಾರ್ಜುನ ಗೋಪಾಲಕೃಷ್ಣ ವೈದ್ಯ, ಪ್ರಕಾಶ ಹೆಗಡೆ, ಗಿರೀಶ್ ಹೆಗಡೆ ಮತ್ತು ನರಸಿಂಹ ಹೆಗಡೆ ಈ ಸಂದರ್ಭದಲ್ಲಿ ಇದ್ದರು.

ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ಹೆದ್ದಾರಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಕಂಬಗಳು ಸುಸ್ಥಿತಿಗೆ

Adike Growers

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment