ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 28 NOVEMBER 2024
ಶಿಕಾರಿಪುರ : ಇಲ್ಲಿನ ಕಲ್ಮನೆ ಗ್ರಾಮದಲ್ಲಿ ಪತ್ತೆಯಾದ ಕಲ್ಯಾಣ ಚಾಲುಕ್ಯರ ಕಾಲದ ಎರಡು ಶಾಸನಗಳನ್ನು (inscription) ಅಧ್ಯಯನ ಮಾಡಲಾಗಿದೆ. ಹಂಪಿಯ ಪುರಾತತ್ವ ಇಲಾಖೆ ನಿರ್ದೇಶಕ ಆರ್.ಶೇಜೇಶ್ವರ ನಾಯಕ್ ಮತ್ತು ಮಂಜಪ್ಪ ಕ್ಷೇತ್ರ ಕಾರ್ಯ ನಡೆಸುವ ಸಂದರ್ಭ ಈ ಎರಡು ಶಾಸನಗಳು ದೊರೆತಿವೆ. ಸ್ಥಳೀಯ ಬನ್ನಿಕಾಳಮ್ಮನ ಗುಡಿ ಹತ್ತಿರ ಎರಡು ಕಲ್ಲಿನ ಶಾಸನಗಳು ದೊರೆತಿವೆ.
ಕಲ್ಯಾಣ ಚಾಲುಕ್ಯರ ಅರಸ ಆರನೇ ವಿಕ್ರಮಾದಿತ್ಯನ (8.8.1084-1096) ಕಾಲಕ್ಕೆ ಸೇರಿದವು ಎಂದು ಅಂದಾಜಿಸಲಾಗಿದೆ. ಒಂದನೇ ಶಾಸನದಲ್ಲಿ ಕಲ್ಮನೆಯ ಶ್ರೀ ಮಲ್ಲಿಕಾರ್ಜುನ ದೇವರಿಗೆ ದಾನ ಬಿಟ್ಟ ವಿಷಯವಿದೆ. ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರ, ಲಿಂಗಪೂಜೆ ಮಾಡುತ್ತಿರುವ ಯತಿ, ನೀರಿನ ಕೊಡ, ಹಸು ಮತ್ತು ಕರುವಿನ ಉಬ್ಬು ಶಿಲ್ಪವಿದೆ. ಸಂಕಗೊಣ್ಣನ ಹೆಂಡತಿ ಬೆಳಂಬೆ ಭೂಮಿ ದಾನ ನೀಡಿದ ವಿಷಯವಿದೆ.
ಇನ್ನೊಂದು ಶಾಸನವು ಹದಿನೆಂಟು ಸಾಲುಗಳಿಂದ ಕೂಡಿದೆ. ಇದರ ಮೇಲ್ಬಾಗದಲ್ಲೂ ಶಿವಲಿಂಗ ಮತ್ತು ಹಸು ಚಿತ್ರ ಇವೆ. ಇದು ಬಹಳ ಸವಕಲಾಗಿದೆ. ಇದರಲ್ಲಿ ಇಲ್ಲಿನ ಬೆಟ್ಟೇಶ್ವರ ದೇವರ ನಂದಾದೀಪಕ್ಕೆ 5 ಗದ್ಯಾಣ ದಾನ ಬಿಟ್ಟಿರುವ ವಿಷಯವಿದೆ. ಶಾಸನದಲ್ಲಿ ಕಲ್ಮನೆ ಗ್ರಾಮದ ಹೆಸರು ಕಲ್ಪಲವಾನಿ ಎಂದು ಉಲ್ಲೇಖವಾಗಿದೆ.
ಶಾಸನವನ್ನು ಡಾ. ಜಗದೀಶ್ ಓದಿ ಅರ್ಥೈಸಿದ್ದಾರೆ. ಸ್ಥಳೀಯರಾದ ಪರಶುರಾಮೋಹಿತಾಚಾರ್, ಮಾಯಾಚಾರ್, ಶಿವಮೂರ್ತೆಪ್ಪ ಸಹಕರಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ಹೆದ್ದಾರಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಕಂಬಗಳು ಸುಸ್ಥಿತಿಗೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422