ಶಿವಮೊಗ್ಗ ಲೈವ್.ಕಾಂ |SHIMOGA NEWS | 4 ಸೆಪ್ಟೆಂಬರ್ 2021
ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕರ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ?
ಪ್ರಾಥಮಿಕ ಶಾಲಾ ವಿಭಾಗ
ಶಿವಮೊಗ್ಗ ಅನುಪಿನಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ಮಾಲತಿ ಹೆಚ್.ಇ., ಭದ್ರಾವತಿ ಕಲ್ಲಿಹಾಳ್ ಕಿ.ಪ್ರಾ. ಮಾರ್ಗರೇಟ್ ಸುಶೀಲ, ಶಿಕಾರಿಪುರದ ಚಿಕ್ಕಮಾಗಡಿತಾಂಡ ಕಿ.ಪ್ರಾ. ಕುಮಾರನಾಯ್ಕ, ಸೊರಬದ ತುಡಿನೀರು ಕಿ.ಪ್ರಾ. ಶಂಕರಪ್ಪ, ತೀರ್ಥಹಳ್ಳಿಯ ಕಲ್ಗುಡ್ಡ ಕಿ.ಪ್ರಾ. ಪೌಜಿಯಾ ಸರಾವತ್, ಹೊಸನಗರದ ಬಿಲ್ಪತ್ರೆ ಪುರಪ್ಪೆಮನೆ ಕಿ.ಪ್ರಾ. ಪ್ರಸನ್ನಕುಮಾರ್ ಹಾಗೂ ಸಾಗರದ ಹಕ್ರೆ ಕಿ.ಪ್ರಾ. ಕೃಷ್ಣಮೂರ್ತಿ ಎಂ.ಪಿ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ
ಶಿವಮೊಗ್ಗದ ಹಾಡೋನಹಳ್ಳಿ ಕಿ.ಪ್ರಾ. ರಂಗಮ್ಮ, ಕೇಂದ್ರ ಕಾರಾಗೃಹದ ಗೋಪಾಲಕೃಷ್ಣ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ತೀರ್ಥಹಳ್ಳಿ ತಾಲೂಕಿನ ವಾಟಗಾರು ಶಾಲೆಯ ಯಶೋಧ ವಿ, ಸಾಗರ ತಾಲೂಕಿನ ಈಳಿ ಶಾಲೆಯ ಸೀತಾಬಾಯಿ ಭಟ್, ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಶಾಲೆಯ ಅನಿತಾಮೇರಿ, ಹೊಸನಗರ ತಾಲೂಕಿನ ಆನೇಗದ್ದೆ ರಸ್ತೆ ಹುಂಚ ಶಾಲೆಯ ಅವಿನಾಶ್ ಕೆ.ಜಿ., ಶಿವಮೊಗ್ಗ ತಾಲೂಕಿನ ಆಲದಹಳ್ಳಿ ಶಾಲೆಯ ಮಲ್ಲಪ್ಪ ಹೆಚ್.ಬಿ., ಸೊರಬ ತಾಲೂಕಿನ ಗುಡವಿ ಶಾಲೆಯ ರೆಜಿನಾಡಯಾಸ್ ಮತ್ತು ಶಿಕಾರಿಪುರ ತಾಲೂಕಿನ ಮುಡಬಸಿದ್ದಾಪುರ ಶಾಲೆಯ ಬಸವಣ್ಯಪ್ಪ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ
ಭದ್ರಾವತಿ ತಾ. ಕಲ್ಲಹಳ್ಳಿಯ ಹಿ.ಪ್ರಾ. ವಿರುಪಾಕ್ಷಯ್ಯ ಹಿರೇಮಠ, ಶಿಕಾರಿಪುರ ತಿಮಲಾಪುರ ಹಿ.ಪ್ರಾ. ನಾಗರಾಜಚಾರ್, ಶಿವಮೊಗ್ಗದ ಲಷ್ಕರ್‍ಮೊಹಲ್ಲ ಹಿ.ಪ್ರಾ. ಸಫೂರ್ ಉನ್ನಿಸಾ.ಎಂ., ಮತ್ತು ಹೊಸಮನೆ ಹಿ.ಪ್ರಾ. ರವಿಕುಮಾರ್ ಎನ್.ಟಿ., ಸೊರಬದ ಚಿಕ್ಕಮಾಕೊಪ್ಪ ಹಿ.ಪ್ರಾ. ದಿವಾಕರ್ ಎನ್. ನಾಯಕ್ ಹಾಗೂ ಶಿಕಾರಿಪುರ ಬೇಗೂರು ಹಿ.ಪ್ರಾ. ಗೀತಾ ಜೆ.ಬಿ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗ
ಶಿಕಾರಿಪುರ ತಾಲೂಕು ಕಲ್ಮನೆ ಶಾಲೆಯ ಕರಿಬಸಪ್ಪ, ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ವಿಶ್ವತೀರ್ಥ ಶಾಲೆಯ ಸುರೇಶ ಎನ್.ಟಿ., ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಶಾಲೆಯ ಬಸವರಾಜ್ ಆರ್., ಹೊಸನಗರ ತಾಲೂಕಿನ ಮಸಗಲ್ಲಿ ಬೀಮನಕೆರೆ ಶಾಲೆಯ ಮಂಜಪ್ಪ ಲಮಾಣಿ, ಶಿವಮೊಗ್ಗ ಪಿಳ್ಳಂಗೇರಿ ಪ್ರೌಢಶಾಲೆಯ ಸರೋಜಮ್ಮ, ಸೊರಬ ಪ್ರೌಢಶಾಲೆಯ ವಿರುಪಾಕ್ಷಪ್ಪ ಎಂ., ಸಾಗರ ಪ್ರೌ.ಶಾ. ದತ್ತಾತ್ರೇಯ ರಾಮ ಹೆಗಡೆ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ
ಸಾಗರ ತಾ. ಆನಂದಪುರ ಪ್ರೌ.ಶಾ. ಶಾಂತಕುಮಾರಿ ಹಾಗೂ ಶಿವಮೊಗ್ಗದ ತಾ. ಸೂಗೂರು ತುಂಗಾಭದ್ರಾ ಪ್ರೌ.ಶಾ. ಅಶೋಕ್ ವಾಲಿಕಾರ್.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200