ಕೊನೆಗೂ ಎಚ್ಚೆತ್ತ ಅಧಿಕಾರಿಗಳು, ಶಿವಮೊಗ್ಗ ಲೈವ್‌ ನಿರಂತರ ವರದಿ ಬಳಿಕ ರಸ್ತೆ ಗುಂಡಿಗಳು ಬಂದ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಜನರ ನಿತ್ಯ ಶಾಪ, ಸ್ವಂತ ಹಣದಲ್ಲಿ ವಿದ್ಯಾರ್ಥಿಗಳೆ ಗುಂಡಿ ಮುಚ್ಚಿದ್ದು, ಶಿವಮೊಗ್ಗ ಲೈವ್.ಕಾಂ ನಿರಂತರ ವರದಿ ಬೆನ್ನಿಗೆ ಅಧಿಕಾರಿಗಳು ಬಿ.ಹೆಚ್‌.ರಸ್ತೆಯ ಗುಂಡಿಗಳನ್ನು ಮುಚ್ಚಿಸಿದ್ದಾರೆ. ಬಿ.ಹೆಚ್‌.ರಸ್ತೆಯಲ್ಲಿ ಸದ್ಯ ಸವಾರರು ನಿರಾಳವಾಗಿ ವಾಹನ ಚಲಾಯಿಸುತ್ತಿದ್ದಾರೆ.

ಎಂಆರ್‌ಎಸ್‌ ವೃತ್ತದಿಂದ ತುಂಗಾ ನದಿ ಸೇತುವೆವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್‌ ಗುಂಡಿಗಳಾಗಿದ್ದವು. ಇವುಗಳಿಂದಾಗಿ ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸಿ, ವಾಹನ ಸವಾರರು ಗಾಯಗೊಳ್ಳುತ್ತಿದ್ದರು. ಗುಂಡಿ ಮುಚ್ಚಿಸದೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದರು.

ಈಗ ಬಿ.ಹೆಚ್‌.ರಸ್ತೆಯಲ್ಲಿದ್ದ ಬೃಹತ್‌ ಗುಂಡಿಗಳಿಗೆ ಡಾಂಬಾರ್‌ ಹಾಕಿ ಬಂದ್‌ ಮಾಡಲಾಗಿದೆ. ಇದರಿಂದಾಗಿ ಸವಾರರು ನಿರಾತಂಕದಿಂದ ವಾಹನ ಚಲಾಯಿಸಬಹುದಾಗಿದೆ.

Pot-Holes-filled-at-BH-Road-in-shivamogga-city

ಇದನ್ನೂ ಓದಿ » ಶಿಕಾರಿಪುರ ಪುರಸಭೆಯ ಮಹತ್ವದ ಆದೇಶ, ತಪ್ಪಿದಲ್ಲಿ ದಂಡ ಕಟ್ಟಿಸಿಕೊಳ್ಳುವ ಎಚ್ಚರಿಕೆ

ಈ ರಸ್ತೆಯಲ್ಲಿ ಬೃಹತ್‌ ಗುಂಡಿ ಬಿದ್ದಿದ್ದರ ಕುರಿತು ಶಿವಮೊಗ್ಗ ಲೈವ್.ಕಾಂ ನಿರಂತರ ವರದಿ ಪ್ರಕಟಿಸಿತ್ತು. ಇನ್ನು, ಕಳೆದ ವಾರ ಸಹ್ಯಾದ್ರಿ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಸ್ವಂತ ಖರ್ಚಿನಲ್ಲಿ ಸಿಮೆಂಟ್‌ ಹಾಕಿ ಗುಂಡಿ ಮುಚ್ಚಿದ್ದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ ಅಧಿಕಾರಿಗಳ ಉದಾಸೀನಕ್ಕೆ ಜನ ಆಕ್ರೋಶಗೊಂಡಿದ್ದರು.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment