ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 21 NOVEMBER 2024 : ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗು 2295 ಬಿಪಿಎಲ್ ಪಡಿತರ (BPL Card) ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿ ಮಾಡುವವರು ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ಪರಿಶೀಲಿಸಿ ಎಪಿಎಲ್‌ಗೆ ಬದಲಿಸಲಾಗಿದೆ.
ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ?
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 4.9 ಲಕ್ಷ ಪಡಿತರ ಚೀಟಿಗಳಿವೆ. ಇದರಲ್ಲಿ 1.2 ಲಕ್ಷ ಎಪಿಎಲ್, 3.52 ಲಕ್ಷ ಬಿಪಿಎಲ್, 36 ಸಾವಿರ ಅಂತ್ಯೋದಯ ಕಾರ್ಡುಗಳಿವೆ. ಈ ಪೈಕಿ ಏಪ್ರಿಲ್ 1 ರಿಂದ ಅಕ್ಟೋಬರ್ 31ರವರೆಗೆ 53,342 ಕಾರ್ಡುಗಳನ್ನು ಪರಿಶೀಲಿಸಲಾಗಿದೆ. ಇವುಗಳಲ್ಲಿ 2295 ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಿಗೆ ಪರಿವರ್ತಿಸಲಾಗಿದೆ.
ಭದ್ರಾವತಿ ತಾಲೂಕಿನ 556, ಹೊಸನಗರದ 53, ಸಾಗರದ 362, ಶಿಕಾರಿಪುರದ 83, ಶಿವಮೊಗ್ಗದ 1018, ಸೊರಬದ 148 ಮತ್ತು ತೀರ್ಥಹಳ್ಳಿಯ 75 ಕಾರ್ಡುಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಇನ್ನು, ಮರಣ ಹೊಂದಿದ 70 ಬಿಪಿಎಲ್ ಕಾರ್ಡುದಾರರ ಹೆಸರನ್ನು ರದ್ದುಗೊಳಿಸಲಾಗಿದೆ.
ಮುಂದುವರೆದ ಪರಿಶೀಲನೆ ಕಾರ್ಯ
ಮತ್ತಷ್ಟು ಬಿಪಿಎಲ್ ಕಾರ್ಡುದಾರರ ಪರಿಶೀಲನೆ ಆರಂಭವಾಗಿದೆ. ಪ್ರಸ್ತುತ 44 ಸಾವಿರ ಕಾರ್ಡುಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಪೈಕಿ 9940 ಕಾರ್ಡುಗಳ ಪರಿಶೀಲನೆ ಚಾಲ್ತಿಯಲ್ಲಿದೆ.
ಇದನ್ನೂ ಓದಿ » ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ನಾಳೆ ಇಡೀ ದಿನ ಕರೆಂಟ್ ಇರಲ್ಲ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422