ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 18 OCTOBER 2024 : ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಕ್ಕೆ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ (Election) ನಡೆಸಲು ರಾಜ್ಯ ಚುನಾವಣ ಆಯೋಗ ದಿನಾಂಕ ಪ್ರಕಟಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಾಜ್ಯಾದ್ಯಂತ ಒಟ್ಟು 531 ಗ್ರಾಮ ಪಂಚಾಯಿತಿಗಳ 641 ಸ್ಥಾನಗಳಿಗೆ ಚುನಾವಣಡೆ ನಡೆಯಲಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ 15 ಗ್ರಾಮ ಪಂಚಾಯಿತಿಗಳ 19 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಯಾವಾಗ ಮತದಾನ?
ಉಪ ಚುನಾವಣೆಗೆ ನ.6ರಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದಾರೆ. ನ.12ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನ.15 ನಾಮಪತ್ರ ಹಿಂಪಡೆಯಲು ಅವಕಾಶ. ನ.23ರಂದು ಮತದಾನ ನಡೆಯಲಿದೆ. ನ.26ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ » ಕೃಷಿ ಮೇಳ, ಈ ಬಾರಿ ಮೇಳದಲ್ಲಿ ಏನೆಲ್ಲ ಇದೆ? ಇಲ್ಲಿದೆ ಡಿಟೇಲ್ಸ್
ಶಿವಮೊಗ್ಗ ಜಿಲ್ಲೆಯ 19 ಸ್ಥಾನಕ್ಕೆ ಚುನಾವಣೆ
ಶಿವಮೊಗ್ಗ ತಾಲೂಕಿನ ಕೋಟೆಗಂಗೂರು, ಸಾಗರದ ಕುದರೂರು, ಭದ್ರಾವತಿಯ ಬಾರಂದೂರು, ಅರಕೆರೆ, ತೀರ್ಥಹಳ್ಳಿಯ ತೀರ್ಥಮತ್ತೂರು, ಹೊಸನಗರದ ಎಂ.ಗುಡ್ಡೆಕೊಪ್ಪ, ಶಿಕಾರಿಪುರದ ಮಾರವಳ್ಳಿ, ಹಿತ್ತಲ, ಸುಣ್ಣದಕೊಪ್ಪ, ತರಲಘಟ್ಟ, ಸೊರಬ ತಾಲೂಕಿನ ಹೊಸಬಾಳೆ, ಜಡೆ, ಭಾರಂಗಿ ಗ್ರಾಮ ಪಂಚಾಯಿತಿಗಳ ತಲಾ ಒಂದು ಸ್ಥಾನ, ಭದ್ರಾವತಿಯ ಮೈದೊಳಲು, ಅರಹತೊಳಲು ಗ್ರಾಮ ಪಂಚಾಯಿತಿಗಳ ತಲಾ ಮೂರು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ಇದನ್ನೂ ಓದಿ » ಜಾನುವಾರು ಮೈ ತೊಳೆಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಕೊನೆಯುಸಿರು