ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | UNIVERSITY | 17 ಜೂನ್ 2022
ಕುವೆಂಪು ವಿಶ್ವ ವಿದ್ಯಾನಿಲಯದ 31 ಮತ್ತು 32ನೇ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ವಿದ್ಯಾರ್ಥಿನಿಯರು ಅತಿ ಹೆಚ್ಚು ಅಂಕ ಪಡೆದು ಚಿನ್ನದ ಬೇಟೆಯಾಡಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಅತ್ಯಧಿಕ ಸ್ವರ್ಣ ಪದಕ ಬಹುಮಾನಗಳಿಗೆ ಪಾತ್ರವಾಗಿರುವುದು ವಿಶೇಷವಾಗಿದೆ.
2019-20 ಸಾಲಿನ ಶೈಕ್ಷಣಿಕ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ಪ್ರಣೀತಾ ಎಂ. ಟಿ. ಅವರು ಒಟ್ಟು 8 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದ್ದಾರೆ. ಇನ್ನು 2020-21 ನೇ ಸಾಲಿನ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್. ಎನ್. ಒಟ್ಟು 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದ್ದಾರೆ.
11 ಚಿನ್ನದ ಪದಕ, ಕೆಎಎಸ್ ಕನಸು
ಸರ್ಕಾರಿ ಶಾಲೆಯಲ್ಲಿ ಓದಿದ ದಿವ್ಯಾ ಕುವೆಂಪು ವಿವಿಯ 32ನೇ ಘಟಿಕೋತ್ಸವದಲ್ಲಿ 11 ಸ್ವರ್ಣ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಮನೆಯವರ ಮತ್ತು ಗುರುಗಳ ಸಹಕಾರವೇ ನನ್ನ ಸಾಧನೆಗೆ ಕಾರಣ ಎಂದು ಕನ್ನಡ ಅಧ್ಯಯನ ವಿಭಾಗದ ಎಂ.ಎ. ಪದವೀಧರೆ ದಿವ್ಯಾ ಹೆಚ್.ಎನ್. ಅನಿಸಿಕೆ ಹಂಚಿಕೊಂಡಿದ್ದಾರೆ.
‘ನಮ್ಮ ತಂದೆ ನಾಗರಾಜ್, ಅಮ್ಮ ಭವಾನಿ. ನಮ್ಮೂರು ಹಣಗೆರೆಕಟ್ಟೆ. ಮುಕ್ಕಾಲು ಎಕರೆ ಜಮೀನಿದೆ. ಅದರಲ್ಲಿ ಅಡಕೆ ಬೆಳೆಯುತ್ತಾರೆ. ನನಗೆ ಇಷ್ಟೊಂದು ಪದಕಗಳು ಬರುತ್ತವೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ಸಾಧನೆಗೆ ಪ್ರತಿಫಲ ಸಿಕ್ಕಿದೆ. ಮುಂದೆ ಪಿಹೆಚ್’ಡಿ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ. ಪೊಲೀಸ್ ಹುದ್ದೆಗೂ ಅರ್ಜಿ ಹಾಕಿದ್ದೇನೆ. ಕೆಎಎಸ್ ಮಾಡಬೇಕೆಂಬ ಬಯಕೆಯೂ ಇದೆ’ ಎಂದು ದಿವ್ಯಾ ತಿಳಿಸಿದರು.
‘ನನ್ನ ಸಾಧನೆಗೆ ನಮ್ಮ ತಂದೆ, ತಾಯಿ ಹಾಗೂ ವಿವಿಯ ಅಧ್ಯಾಪಕ ವರ್ಗದವರು ಕಾರಣರಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು’ ಎಂದರು.
ದಿವ್ಯಾ ಪ್ರಾಥಮಿಕ ಶಿಕ್ಷಣವನ್ನು ಹಣಗೆರೆಯಲ್ಲಿ ಪೂರೈಸಿದರು. ಮಾಳೂರು ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಪಿಯುಸಿ ಮತ್ತು ಪದವಿಯನ್ನು ತೀರ್ಥಹಳ್ಳಿಯಲ್ಲಿ ಪಡೆದಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಎಂಎ ಪದವಿಯಲ್ಲಿ ಅತಿ ಹೆಚ್ಚು ಅಂಕದೊಂದಿಗೆ 11 ಚಿನ್ನದ ಪದಕ ಪಡೆದಿದ್ದಾರೆ.
‘ಸ್ವರ್ಣ ಪದಕ ಸಿಗುತ್ತೆ ಎಂಬ ನಂಬಿಕೆ ಇರಲಿಲ್ಲ’
31ನೇ ಘಟಿಕೋತ್ಸವದಲ್ಲಿ ಕನ್ನಡ ವಿಭಾಗದ ಪ್ರಣೀತಾ.ಎನ್.ಪಿ 8 ಚಿನ್ನದ ಪದಕ ಗಳಿಸಿದ್ದಾರೆ.
‘ತಾವು 8 ಸ್ವರ್ಣ ಪದಕ ಪಡೆಯಲು ಮನೆಯವರು, ಗುರುಗಳ ಸಹಕಾರ ಕಾರಣ. ಇದಕ್ಕಿಂತ ಹೆಚ್ಚಾಗಿ ಕುವೆಂಪು ವಿವಿಯಲ್ಲಿ ಅತ್ಯುತ್ತಮ ಗ್ರಂಥಾಲಯವಿದೆ. ಈ ಗ್ರಂಥಾಲಯ ನನ್ನ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಧ್ಯಯನ ಸಾಮಗ್ರಿಗಳು ಸಾಕಷ್ಟಿದ್ದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಷ್ಟು ವಿಷಯ ಈ ಗ್ರಂಥಾಲಯದಲ್ಲಿ ಸಿಗುತ್ತದೆ’ ಎಂದು ಪ್ರಣೀತಾ ಹೇಳಿದರು.
‘ನಮ್ಮ ತಂದೆ ತಾಯಿ ಓದು ಎಂದು ಎಂದೂ ಹೇಳಲಿಲ್ಲ. ಒತ್ತಡವೂ ಇರಲಿಲ್ಲ. ಸ್ವರ್ಣ ಪದಕ ಸಿಗುತ್ತೆ ಎಂಬ ನಂಬಿಕೆಯೂ ಇರಲಿಲ್ಲ. ಆದರೆ, ಆಸಕ್ತಿ ಮತ್ತು ಆತ್ಮಸ್ಥೈರ್ಯದಿಂದ ಅಧ್ಯಯನ ನಡೆಸಿದ್ದೆ. ಅದು ಫಲ ಕೊಟ್ಟಿದೆ’ ಎಂದರು.
‘ರಾಂಕ್ ಪಡೆದವರಿಗೆ ಉದ್ಯೋಗ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಬೇಡ. ಸರ್ಕಾರಿ ಉದ್ಯೋಗವಲ್ಲದೇ ಬೇರೆ ಬೇರೆ ಕಡೆ ವಿಫುಲವಾದ ಅವಕಾಶಗಳು ನನಗಿವೆ. ಅಂಕಗಳಿಗಿಂತ ನಮ್ಮ ಕ್ರಿಯಾಶೀಲತೆ ಮತ್ತು ತಿಳಿವಳಿಕೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಸಹಾಯ ಮಾಡುತ್ತವೆ. ಹಾಗಾಗಿಯೇ ಯುವಕರು ಕೇವಲ ಅಂಕಗಳ ಹಿಂದೆ ಬೀಳದೆ, ಕ್ರೀಡೆ, ಕರಕುಶಲ, ಮಾತಿನ ಜಾಣ್ಮೆ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಪ್ರಣೀತಾ ಕಿವಿಮಾತು ಹೇಳಿದರು.
‘ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಖಂಡಿತ ಬೇಡ. ನಾನು ಕನ್ನಡ ಭಾಷೆಯನ್ನೇ ತೆಗೆದುಕೊಂಡು ಓದಿದ್ದೇನೆ. ಪದವಿಯಲ್ಲೂ ಕನ್ನಡವನ್ನೇ ಮುಖ್ಯ ಭಾಷೆಯನ್ನಾಗಿ ಓದಿದ್ದೇನೆ. ಕನ್ನಡ ನನಗೆ ಬದುಕನ್ನು ಪ್ರೀತಿಸಲು ಕಲಿಸುತ್ತದೆ. ನಾನು ಕನ್ನಡ ಅಧ್ಯಾಪಕಿ ಆಗಬೇಕು ಎಂಬ ಆಸೆ ಹೊಂದಿದ್ದೇನೆ’ ಎಂದು ಪ್ರಣೀತಾ ತಿಳಿಸಿದರು.
ಇದನ್ನೂ ಓದಿ – ಕುವೆಂಪು ವಿವಿಯಲ್ಲಿ ಚಿನ್ನದ ಬೇಟೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422