SHIVAMOGGA LIVE NEWS | 23 DECEMBER 2023
EDUCATION NEWS : ಅಲ್ಲಿ ವಿದ್ಯಾರ್ಥಿಗಳೇ ನಿರ್ಮಿಸಿದ್ದ ರೋಬೊಗಳು ರಸ್ತೆಯ ಉಬ್ಬು ತಗ್ಗುಗಳ ಲೆಕ್ಕಿಸದೇ ಮುನ್ನುಗುತ್ತಿತ್ತು. ವಿವಿಧ ಸರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ತಂಡದ ರೋಬೊಗಳ ಪ್ರದರ್ಶನ ನೋಡುಗರನ್ನು ರೋಮಾಂಚನಗೊಳಿಸಿತ್ತು.
![]() |
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ, ಐಇಟಿಇ ವಿದ್ಯಾರ್ಥಿಗಳ ವೇದಿಕೆ ಹಾಗೂ ಐಇಇಇ ವಿದ್ಯಾರ್ಥಿ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ತಾಂತ್ರಿಕ ವಿಚಾರಸಂಕಿರಣ ‘ಪ್ಲಾಸ್ಮಾ – 2023’ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ರೋಬೋಗಳು ತಮ್ಮ ಕಾರ್ಯಕ್ಷಮತೆ ಪ್ರದರ್ಶಿಸಿದವು.
ರೋಬೊ ಲೈನ್ ಫಾಲೊವರ್, ರೋಬೊ ಸಾಸರ್, ರೋಬೊ ರೇಸ್, ಹ್ಯಾಕಥಾನ್, ಸುಮೊ ವಾರ್ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 150 ಕ್ಕು ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ತಾವೇ ನಿರ್ಮಿಸಿದ ರೋಬೊಗಳೊಂದಿಗೆ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಎವನ್ ಲಾಜಿಕ್ಸ್ ಕಂಪನಿ ಸ್ಥಾಪಕರಾದ ಪ್ರವೀಣ್ ಉಡುಪ ಮಾತನಾಡಿ, ಪ್ರಯೋಗಾತ್ಮಕ ಕಲಿಕೆಯಿಂದ ಮಾತ್ರ ನಿಜವಾದ ಜ್ಞಾನದ ವಿಕಸನವಾಗಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಪಕ್ಕದವರೇ ನಮಗೆ ಸ್ಪರ್ಧಿಗಳಾಗಿರುತ್ತಾರೆ ಎಂಬ ಅರಿವು ಬೇಕಿದೆ ಎಂದು ಹೇಳಿದರು.
ಶಿಕ್ಷಣದ ಜೊತೆಗೆ ವಿಶ್ಲೇಷಣಾತ್ಮಕ ಚಿಂತನೆಗಳು ಹಾಗೂ ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಬಗೆಹರಿಸುವ ಕೌಶಲ್ಯತೆಗಳ ಅವಶ್ಯಕತೆಯಿದೆ. ಉದ್ಯೋಗ ನೀಡುವ ಸಂಸ್ಥೆಗಳು ನಮ್ಮಿಂದ ಬಯಸುವುದೇ ಇಂತಹ ಪ್ರಯೋಗಾತ್ಮಕ ಕೌಶಲ್ಯಗಳನ್ನು. ನಾವು ತಲುಪಬೇಕಿರುವ ಗುರಿ ಮತ್ತು ಎದುರಿಸುವ ಸ್ಪರ್ಧಾತ್ಮಕ ವಾತಾವರಣಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ಸಿದ್ದರಾಗಿ. ಕೃತಕ ಬುದ್ಧಿಮತ್ತೆ ಮತ್ತು ರೋಬೊಟಿಕ್ಸ್ ಕ್ಷೇತ್ರ ಅನೇಕ ಉದ್ಯೋಗವಕಾಶಗಳನ್ನು ಹೊಂದಿದೆ. ನಿಮ್ಮ ನಾವೀನ್ಯ ಯೋಜನೆಗಳಿಗೆ ಹೊಸ ತಂತ್ರಜ್ಞಾನಗಳ ಸ್ಪರ್ಶ ನೀಡಿ. ಸಾಧ್ಯವಾದಷ್ಟು ಆರಾಮದಾಯಕ ಮನಸ್ಥಿತಿಗಳಿಂದ ಹೊರಬಂದು ನಿರಂತರ ಕಲಿಕೆಯಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಎಸ್.ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕರಾದ ಅನಿಲ್ ಕುಮಾರ್.ಜೆ, ಪ್ರದೀಪ್. ಎಸ್.ಸಿ, ಪ್ರಶಾಂತ.ಜಿ.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ – ಬಂಗಾರಧಾಮದಲ್ಲಿ ಸ್ಮಾರಕ ರೆಡಿ, ಲೋಕಾರ್ಪಣೆಗೆ ದಿನಾಂಕ ನಿಗದಿ, ಯಾರೆಲ್ಲ ಭಾಗವಹಿಸ್ತಿದ್ದಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200