ಶಿವಮೊಗ್ಗ ಜಿಲ್ಲೆಯಲ್ಲಿ 26 ಮಂದಿಗೆ ಕರೋನ, ಯಾವ್ಯಾವ ತಾಲೂಕಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

NAMMUR NEWS NEW PROMO 1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MARCH 2021

ಶಿವಮೊಗ್ಗದಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಾವಿರ ಜನರಿಗೆ ಐದಾರು ಮಂದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕು, ಈಗ ದುಪ್ಪಟ್ಟಾಗಿದೆ.

ಮಾರ್ಚ್‌ 27ರಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ ಪ್ರಕಾರ, ಜಿಲ್ಲೆಯಲ್ಲಿ 26 ಮಂದಿಗೆ ಕರೋನ ಸೋಂಕು ತಗುಲಿದೆ.

26 ಮಂದಿಗೆ ಪಾಸಿಟಿವ್

ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ 27ರಂದು 1941 ಸ್ಯಾಂಪಲ್‍ಗಳನ್ನ ಪಡೆಯಲಾಗಿದೆ. 1976 ಸ್ಯಾಂಪಲ್‍ಗಳು ಕರೋನ ನೆಗೆಟಿವ್ ಬಂದಿದೆ. ನಾಲ್ವರು ಕಾಲೇಜು ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 26 ಮಂದಿಯ ವರದಿ ಪಾಸಿಟಿವ್ ಬಂದಿದೆ.

ಯಾವ್ಯಾವ ತಾಲೂಕಲ್ಲಿ ಎಷ್ಟು ಪಾಸಿಟಿವ್?

ಮಾರ್ಚ್ 27ರಂದು 26 ಮಂದಿಗೆ ಪಾಸಿಟವ್ ಬಂದಿದ್ದು, ಶಿವಮೊಗ್ಗ ತಾಲೂಕಿನ 12, ಭದ್ರಾವತಿಯ 1, ಶಿಕಾರಿಪುರದ 2, ತೀರ್ಥಹಳ್ಳಿಯ 1, ಸೊರಬದ 7, ಸಾಗರ 3 ಮಂದಿಗೆ ಸೋಂಕು ತಗುಲಿದೆ.

ಎಲ್ಲೆಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ?

ಜಿಲ್ಲೆಯಲ್ಲಿ ಸದ್ಯ 144 ಮಂದಿ ಕರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 62 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 30, ಮನೆಯಲ್ಲಿ ಐಸೊಲೇಷನ್‍ಗೆ ಒಳಗಾದವರ ಸಂಖ್ಯೆ 52 ಇದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಈತನಕ 349 ಮಂದಿ ಕರೋನಾದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment