ಶಿವಮೊಗ್ಗ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಮಂದಿಗೆ ಕರೋನಾ, ಶಿವಮೊಗ್ಗ, ಭದ್ರಾವತಿ, ಸಾಗರದಲ್ಲೇ ಹೆಚ್ಚು ಕೇಸ್

Published On : ಜನವರಿ 20, 2022

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗದ ಲೈವ್.ಕಾಂ | SHIMOGA NEWS | 20 ಜನವರಿ 2022

ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಜನರಿಗೆ ಕರೋನ ಸೋಂಕು ತಗುಲಿದೆ. ಒಂದೇ ದಿನ 635 ಜನರಿಗೆ ಕರೋನ ಪಾಸಿಟಿವ್ ಬಂದಿದೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಇವತ್ತು ಶಿವಮೊಗ್ಗ, ಭದ್ರಾವತಿ ಮತ್ತು ಸಾಗರ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ತಾಲೂಕು 260 ಮಂದಿಗೆ ಪಾಸಿಟಿವ್ ಬಂದಿದೆ.

ಭದ್ರಾವತಿಯಲ್ಲಿ 125, ಸಾಗರ 111 ಮಂದಿಗೆ ಸೋಂಕು ತಗುಲಿದೆ. ತೀರ್ಥಹಳ್ಳಿಯಲ್ಲಿ 42, ಶಿಕಾರಿಪುರದಲ್ಲಿ 24, ಹೊಸನಗರದಲ್ಲಿ 28, ಸೊರಬ 29, ಹೊರ ಜಿಲ್ಲೆಯಿಂದ ಬಂದಿರುವ 16 ಮಂದಿಗೆ ಸೋಂಕು ತಗುಲಿದೆ.

ಎರಡು ಸಾವಿರ ಸಕ್ರಿಯ ಪ್ರಕರಣ

ಇವತ್ತು ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರಕ್ಕಿಂತಲೂ ಹೆಚ್ಚಿದೆ. ಇವತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 2028 ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಕ್ರಿಯ ಪ್ರಕರಣಗಳ ಪೈಕಿ 39 ಮಂದಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 24 ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18 ಮಂದಿ ಡಿಸಿಹೆಚ್’ಸಿ, 14 ಮಂದಿ ಟ್ರಯೇಜ್’ನಲ್ಲಿದ್ದಾರೆ. 1933 ಸೋಂಕಿತರು ಹೋಮ್ ಐಸೊಲೇಷನ್’ನಲ್ಲಿದ್ದಾರೆ.

ಮೂರನೆ ಅಲೆಗೆ ಮೂರನೆ ಬಲಿ

ಕರೋನ ಮೂರನೆ ಅಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮೂರನೆ ಸಾವು ಸಂಭವಿಸಿದೆ. ಇವತ್ತು ಕೂಡ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಕರೋನಾಗೆ ಮೃತರಾದವರ ಸಂಖ್ಯೆ 1075ಕ್ಕೆ ಏರಿಕೆಯಾಗಿದೆ.

ಇನ್ನು, ಜಿಲ್ಲೆಯಲ್ಲಿ ಇವತ್ತು ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಗುಣವಾಗಿದ್ದಾರೆ. 295 ಮಂದಿ ಕರೋನಾದಿಂದ ಗುಣವಾಗಿದ್ದಾರೆ. ಇದು ತುಸು ನೆಮ್ಮದಿ ಮೂಡಿಸಿದೆ.

ABOUT NEW DEC 2021 REPORT

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 20, 2022

Leave a Comment