ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020
ಕರೋನ ಲಾಕ್’ಡೌನ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರ ಪರದಾಟದ ನಡುವೆ, ಮನೆ ಮುಂದೆ ದೀಪ ಬೆಳಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಸುದ್ದಿಯಿಂದ ಆತಂಕಕ್ಕೀಡಾಗಿದ್ದಾರೆ. ಗುರುವಾರ ರಾತ್ರಿಯಿಂದಲೇ ಹಲವು ಕಡೆಗೆ ಪೂಜೆ ಸಲ್ಲಿಸಲಾಗುತ್ತಿದೆ.
ವಾಟ್ಸಪ್’ನಲ್ಲಿ ಧರ್ಮಸ್ಥಳದ ದೀಪದ ಕಥೆ
ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಮುಂದೆ ಬೆಳಗುತ್ತಿದ್ದ ದೀಪ ನಂದಿ ಹೋಗಿದೆ. ಹಾಗಾಗಿ ಎಲ್ಲರು ಸೇರಿ ಮನೆ ಮುಂದೆ ದೀಪ ಬೆಳಗಬೇಕು ಎಂದು ತಿಳಿಸಲಾಗಿದೆ ಅಂತಾ ವಾಟ್ಸಪ್ ಮೂಲಕ ಹಬ್ಬಿಸಲಾಗಿದೆ. ಈ ಮೆಸೇಜ್ ಜಿಲ್ಲೆಯಾದ್ಯಂತ ವೈರಲ್ ಆಗಿದೆ.

ರಾತ್ರಿಯಿಂದಲೇ ಪೂಜೆ ಶುರು
ವಾಟ್ಸಪ್’ನಲ್ಲಿ ಸಂದೇಶ ಹರಡುತ್ತಿದ್ದಂತೆ ರಾತ್ರಿಯಿಂದಲೇ ಜನರು ಪೂಜೆ ಆರಂಭಿಸಿದ್ದಾರೆ. ಮನೆ ಮುಂದೆ ಸಗಣಿ ಸಾರಿಸಿ, ಹೊಸ್ತಿಲ ಮುಂದೆ ದೀಪ ಬೆಳಗುತ್ತಿದ್ದಾರೆ. ಬೆಳಗ್ಗೆಯು ಜಿಲ್ಲೆಯ ವಿವಿಧೆಡೆ ಪೂಜೆ ನಡೆಯುತ್ತಿದೆ.
ವಾಟ್ಸಪ್ ಸುದ್ದಿ ನಿಜನಾ?
ಶ್ರೀ ಮಂಜನಾಥನ ಸನ್ನಿಧಿಯಲ್ಲಿ ದೀಪ ಆರಿರುವುದು, ಪೂಜೆ ಮಾಡಿ ಅಂತಾ ಜನರಿಗೆ ತಿಳಿಸಿರುವುದೆಲ್ಲ ಸುಳ್ಳು ಅನ್ನುತ್ತಿದೆ ಧರ್ಮಸ್ಥಳ ದೇವಸ್ಥಾನದ ಮೂಲಗಳು. ವಾಟ್ಸಪ್ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ಇದನ್ನು ನಂಬಿಕೊಂಡು ಶಿವಮೊಗ್ಗ ಜಿಲ್ಲೆಯಾದ್ಯಂತ ಪೂಜೆ ನಡೆಸಲಾಗುತ್ತಿದೆ. ಕೆಲವು ಕಡೆ ನಡುರಾತ್ರಿ ಜನರು ಗುಂಪುಗೂಡಿ ಪೂಜೆ ನಡೆಸಿದ ಮಾಹಿತಿಯು ಇದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200