ಶಿವಮೊಗ್ಗ ಲೈವ್.ಕಾಂ | 2 ಡಿಸೆಂಬರ್ 2018
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ತಾಯಿಯ ಅಗಲಿಕೆಯಿಂದ ಅನಾಥವಾಗಿದ್ದ ಒಂದೂವರೆ ವರ್ಷದ ಆನೆ ಮರಿಯನ್ನು ಇಲ್ಲಿನ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತರಲಾಗಿದೆ.
ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಬಳಿ ಕೆಸರಿನಲ್ಲಿ ಸಿಕ್ಕು ಮೃತಪಟ್ಟ ಕಾರಣ, ಮರಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅರಣ್ಯಾಕಾರಿಗಳು ಶಿವಮೊಗ್ಗದಿಂದ ಗಂಗಾ ಆನೆಯನ್ನು ಕರೆತಂದು ಮರಿಯನ್ನು ಸಕ್ರೆಬೈಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗಾ ಆನೆಯನ್ನೇ ತನ್ನ ತಾಯಿಯೆಂದು ತಿಳಿದು ಮರಿ ಆನೆ, ಸಕ್ರೆಬೈಲಿನತ್ತ ಹೆಜ್ಜೆ ಹಾಕಿದೆ.
ಈವರೆಗೂ ಕಾಡಿನಲ್ಲಿದ್ದ ಕಾರಣ, ಮರಿ ಆನೆ ಮನುಷ್ಯರ ಕಂಡರೆ ತಿವಿಯಲು ಮುಂದಾಗುತ್ತಿದೆ. ಮರಿ ತುಂಬಾ ಗಟ್ಟಿ ಇದೆ. ಚೆನ್ನಾಗಿ ಮೇವು ಕೊಡುತ್ತಿರುವುದರಿಂದ ಗಂಗಾ ಜತೆ ಒಗ್ಗಿಕೊಂಡಿದೆ. ಇನ್ನೊಂದು ವಾರದಲ್ಲಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಿದೆ. ಮುಂದಿನ ವಾರದಲ್ಲಿ ಮರಿ ಆನೆಗೆ ಹೆಸರಿಡಲಾಗುತ್ತದೆ ಅನ್ನುತ್ತಾರೆ ಆರ್’ಎಫ್ಒ ಶಿವಕುಮಾರ್.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






