ಶಿವಮೊಗ್ಗ ಜಿಲ್ಲೆಯ ಟಾಪ್‌ 5 ಸುದ್ದಿಗಳು, ಫಟಾಫಟ್‌ ನ್ಯೂಸ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS, 2 JANUARY 2025

ಫಟಾಫಟ್‌ ಸುದ್ದಿ : ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಫಟಾಪಟ್‌ (Fatafat) ಸುದ್ದಿಗಳು.

ತುಂಗಾ ನದಿಯಲ್ಲಿ ವೈಭವದ ತೆಪ್ಪೋತ್ಸವ

ತೀರ್ಥಹಳ್ಳಿ : ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ತುಂಗಾ ನದಿಯಲ್ಲಿ ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವ ನಡೆಯಿತು. ಸಾವಿರಾರು ಭಕ್ತರು ತುಂಗಾ ನದಿ ದಂಡೆಯಲ್ಲಿ ನಿಂತು ತೆಪ್ಪೋತ್ಸವ ಕಣ್ತುಂಬಿಕೊಂಡರು. ಸಿಡಿಮದ್ದು ಪ್ರದರ್ಶನ ಜನರ ಕಣ್ಸೆಳೆಯಿತು. ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

Thirthahalli-teppotsava-at-tunga-river.

ಇದನ್ನೂ ಓದಿ » ತೀರ್ಥಹಳ್ಳಿಯಲ್ಲಿ ವೈಭವದ ತೆಪ್ಪೋತ್ಸವ, ಕಣ್ತುಂಬಿಕೊಂಡರು ಸಾವಿರ ಸಾವಿರ ಜನ

RED-LINE

 Shivamogga Live 

ಪತಿಯ ಸಾವಿನ ವಿಚಾರ ತಿಳಿದು ಪತ್ನಿ ಆತ್ಮಹತ್ಯೆ

ಹೊಸನಗರ : ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪತಿ ಮೃತಪಟ್ಟ ವಿಷಯ ತಿಳಿದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಾ ಕಾಲೊನಿ ವಾಸಿ ಮಂಜುನಾಥ್‌ (25) ಶಿಕಾರಿಪರಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವಿಷಯ ತಿಳಿದ ಪತ್ನಿ ಅಮೃತಾ (21) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hosanagara-husband-and-wife-incident-hosanagara

ಇದನ್ನೂ ಓದಿ » ಗಂಡನ ಸಾವಿನ ವಿಚಾರ ತಿಳಿದು ನೇಣು ಬಿಗಿದುಕೊಂಡ ಪತ್ನಿ

RED-LINE

 Shivamogga Live 

Web-Design-by-New-Web-techy

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಸಾಗರ : ತಾಲ್ಲೂಕು ಕಚೇರಿಯಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಉಪ ತಹಶೀಲ್ದಾರ್ ಚಂದ್ರಶೇಖರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಂಜುನಾಥ ಆಚಾರಿ, ರಂಗಕರ್ಮಿ ಸಿ.ಟಿ.ಬ್ರಹ್ಮಾಚಾರ್, ಶಾಂತಾಮೂರ್ತಿ ಇದ್ದರು.

jakanachari jayanti in sagara

ಆದರ್ಶ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದಕ್ಕೆ ಜಕಣಾಚಾರಿಯ ಜೀವನ ಒಂದು ಮಾದರಿಯಾಗಿದೆ. ತಮ್ಮ ಕೆಲಸಗಳ ಮೂಲಕ ನಾವು ಮಾತನಾಡಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಜಕಣಾಚಾರಿ.

–  ಚಂದ್ರಶೇಖರ್ ನಾಯ್ಕ, ತಹಶೀಲ್ದಾರ್

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಫಟಾಫಟ್‌ ನ್ಯೂಸ್‌

RED-LINE

 Shivamogga Live 

ವಿಜೃಂಭಣೆಯ ಮಾರಿಕಾಂಬ ದೇವಿ ಜಾತ್ರೆ

ಹಾರನಹಳ್ಳಿ : ಇಲ್ಲಿನ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಂಗಳವಾರ ಗಂಗೆಪೂಜೆಯೊಂದಿಗೆ ಆಚಾರ್ಯರ ಮನೆಯಿಂದ ಉತ್ಸವ ಮೂರ್ತಿಯನ್ನು ತವರು ಮನೆಯಾದ ಬ್ರಾಹ್ಮಣರ ಬೀದಿಯ ಗದ್ದುಗೆಗೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಬುಧವಾರ ದೇವಿಯ ಮೂಲ ಗದ್ದುಗೆಗೆ ತಂದು ಪ್ರತಿಷ್ಠಾಪಿಸಲಾಯಿತು. ದೊಡ್ಡ ಸಂಖ್ಯೆ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು.

haranahalli marikamba jathre

ಇದನ್ನೂ ಓದಿ » ವರ್ಷದ ಮೊದಲ ದಿನವೇ 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ಅಧಿಕಾರಿ ಅರೆಸ್ಟ್‌, ಸಿಕ್ಕಿಬಿದ್ದಿದ್ದು ಹೇಗೆ?

RED-LINE

 Shivamogga Live 

ಬೇಳೂರಿಗೆ ಹಾಲಪ್ಪ ಸವಾಲು

ತ್ಯಾಗರ್ತಿ : ಮೂರು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ತಾಲೂಕಿನಲ್ಲಿ ಏನೇನೆಲ್ಲ ಅಭಿವೃದ್ಧಿ ಮಾಡಿದ್ದಾರೆ ಎಂಬುದಕ್ಕೆ ದಾಖಲೆ ಒದಗಿಸಲಿ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಸವಾಲು ಹಾಕಿದ್ದಾರೆ. ತ್ಯಾಗರ್ತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿನ ಅಭಿವೃದ್ಧಿಗೆ ದಾಖಲೆ ಒದಗಿಸಲು ಸಿದ್ಧ. ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ದಾಖಲೆ ಒದಗಿಸಲಿ ಎಂದರು.

Former-Minister-Haratalu-Halappa-BJP

ಬಿಜೆಪಿ ಸರ್ಕಾರದ ಅವಧಿಯಲ್ಲಿ ತ್ಯಾಗರ್ತಿಯ ಮುಖ್ಯರಸ್ತೆಯ ದ್ವಿಪಥವಾಗಿಸಲು 3 ಕೋಟಿ ರೂ. ವೆಚ್ಚದ ಅನುಮೋದನೆ ಪಡೆದು ಟೆಂಡರ್ ಆಗಿತ್ತು. ಈಗಿನ ಶಾಸಕರು ಇದಕ್ಕೆ ಚಾಲನೆ ನೀಡಿ, ತಾವೇ ಮಂಜೂರು ಮಾಡಿಸಿದ್ದಾಗಿ ತಪ್ಪು ಮಾಹಿತಿ ನೀಡುತ್ತಿದ್ದಾರೆ

– ಹರತಾಳು ಹಾಲಪ್ಪ, ಮಾಜಿ ಸಚಿವ

RED-LINE

 Shivamogga Live 

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment