ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
GOOD MORNING SHIMOGA, 3 OCTOBER 2024
ವೈರಿಗಳು ಹೊರಗಿಲ್ಲ. ನಮ್ಮೊಳಗೇ ಇದ್ದಾರೆ. ಸಿಟ್ಟು, ಅಹಂ, ಮೋಹ, ದ್ವೇಷಗಳೆ ನಿಜವಾದ ಶತ್ರುಗಳು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲ ಧಗೆ, ಒಣ ಹವೆ, ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?
ಶಿವಮೊಗ್ಗ ಸಿಟಿ ಸುದ್ದಿ
ಮಹಾನಗರ ಪಾಲಿಕೆ : ಶಿವಮೊಗ್ಗದಲ್ಲಿ ಇವತ್ತಿನಿಂದ ಶರನ್ನವರಾತ್ರಿ. 68 ವಿವಿಧ ಕಾರ್ಯಕ್ರಮ ಆಯೋಜನೆ. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಚನ್ನಬಸಪ್ಪ ಹೇಳಿಕೆ.
ಶಿವಮೊಗ್ಗ ಸಿಟಿ : ನಗರದ ವಿವಿಧ ದೇಗುಲಗಳಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ. ಬೆಳಗ್ಗೆಯಿಂದಲೆ ಪೂಜೆಗಳು ಆರಂಭ.
ಕುವೆಂಪು ರಂಗಮಂದಿರ : ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ. ಗಾಂಧೀಜಿ ಸೇರಿದಂತೆ ಅನೇಕರ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ.
ಶಿವಮೊಗ್ಗ ಸಿಟಿ : ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಗರದಲ್ಲಿ ಪಾದಯಾತ್ರೆ ನಡೆಸಲಾಯಿತು. ಗಾಂಧಿ ಟೋಪಿ ಧರಿಸಿ, ಗಾಂಧೀಜಿ ಪರ ಘೋಷಣೆ ಮೊಳಗಿಸುತ್ತ ಪಾದಯಾತ್ರೆ ನಡೆಸಲಾಯಿತು.
ಗೋಪಿ ಸರ್ಕಲ್ : ಬಿಜೆಪಿ ನಗರ ಘಟಕದ ವತಿಯಿಂದ ಖಾದಿ ಉತ್ಸವ. ಖಾದಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸಂಸದ ರಾಘವೇಂದ್ರ ಚಾಲನೆ.
ಶಿವಮೊಗ್ಗ ಸಿಟಿ : ಮೂಡ ಹಗರಣದಲ್ಲಿ ಆಗಿರುವ ತಪ್ಪು ಮರೆಮಾಚಲು ಸಾಧ್ಯವಿಲ್ಲ. ಯಾರೆ ತಪ್ಪು ಮಾಡಿದ್ದರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ರಾಘವೇಂದ್ರ ಹೇಳಿಕೆ.
ಶಿವಮೊಗ್ಗ ಸಿಟಿ : ಮೂಡ ಹಗರಣದ ವಿರುದ್ಧ ಬಿಜೆಪಿಯ ಹೋರಾಟವನ್ನು ಲಘುವಾಗಿ ಪರಿಗಣಿಸಲಾಗಿತ್ತು. ಈಗ ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಹಿಂತಿರುಗಿಸಿದ್ದಾರೆ. ಇನ್ನಾದರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಆಗ್ರಹ.
ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಈ ರಾಶಿಯವರಿಗೆ ಸ್ತ್ರೀ ದೋಷ, ಹಣಕಾಸು ಸಮಸ್ಯೆ
ತಾಲೂಕು ಸುದ್ದಿಗಳು
ಸಕ್ರೆಬೈಲು : ಶಿವಮೊಗ್ಗ ದಸರಾಗೆ ಬಿಡಾರದ ಆನೆಗಳಿಗೆ ಆಹ್ವಾನ. ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು.
ಹೊಳೆಹೊನ್ನೂರು : ಆನವೇರಿಯಲ್ಲಿ ತಗಡಿನ ಶೆಡ್ ನಿರ್ಮಾಣದ ವೇಳೆ ವಿದ್ಯುತ್ ಅವಘಡಕ್ಕೆ ರಕ್ಷಿತ್ (22) ಸಾವು. ಕೂಡ್ಲಿಯಲ್ಲಿ ತುಂಗಭದ್ರ ಸಂಗಮದಲ್ಲಿ ಸ್ನಾನಕ್ಕೆ ಇಳಿದಿದ್ದ ಹರ್ಷಿತ್ (23) ನಾಪತ್ತೆ.
ಸಾಗರ : ಹೆಗ್ಗೋಡಿನ ನೀನಾಸಂನಲ್ಲಿ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮದಲ್ಲಿ ಪರಿಸರ ಅಂಕಣಕಾರ ನಾಗೇಶ್ ಹೆಗಡೆ ಭಾಗಿ. ಚಳವಳಿಗಳ ಸಂದರ್ಭ ಕಲೆಗಳ ಮೂಲಕ ಕಲಾವಿದರು ಜನರ ಬಳಿ ಸಮಸ್ಯೆ ಕೊಂಡೊಯ್ಯುತ್ತಿದ್ದರು. ಈಗಲೂ ಕಲೆಗಳು ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿವೆ ಎಂದರು.
ರಿಪ್ಪನ್‌ಪೇಟೆ : ಬಿಜೆಪಿಯಿಂದ ಉಚ್ಛಾಟಿತರಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸಲಹೆ ಪಕ್ಷಕ್ಕೆ ಅಗತ್ಯವಿಲ್ಲ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿಕೆ.
ಶಿಮುಲ್ : ಹಾಲು ಉತ್ಪಾದಕರಿಂದ ಖರೀದಿ ದರ 90 ಪೈಸೆ ಇಳಿಸಿದ ಹಾಲು ಒಕ್ಕೂಟ. ಪರಿಷ್ಕೃತ ದರ ಅ.1ರಿಂದಲೇ ಜಾರಿಗೆ ಬಂದಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಯಾವ್ಯಾವ ಗ್ಯಾರಂಟಿ ಯೋಜನೆ ಎಷ್ಟು ಜನರಿಗೆ ತಲುಪುತ್ತಿದೆ? ಇಲ್ಲಿದೆ ಡಿಟೇಲ್ಸ್
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















