ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 DECEMBER 2022
ಸುದ್ದಿಯ ಹಿನ್ನೆಲೆಶಿವಮೊಗ್ಗ : ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ನೀಡುವ ವರ್ಷದ ಸೈಬರ್ ಕಾಪ್ (cyber cop award) ಪ್ರಶಸ್ತಿ ಶಿವಮೊಗ್ಗ ಸಿ.ಇ.ಎನ್ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ಕೆ.ಟಿ.ಗುರುರಾಜ್ ಅವರಿಗೆ ಲಭಿಸಿದೆ. ಇದು ಶಿವಮೊಗ್ಗ ಪೊಲೀಸ್ ಇಲಾಖೆಗೆ ಹಿರಿಮೆ ಹೆಚ್ಚಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹರಿಯಾಣದ ಗುರುಗ್ರಾಮದಲ್ಲಿ ನಡೆದ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸಮಾವೇಶದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಪ್ರಶಸ್ತಿ ಸ್ವೀಕರಿಸಿದರು.
(cyber cop award)
ಕೊನೆ ಹಂತದಲ್ಲಿ ಮೂವರು ಪೊಲೀಸರು
ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿಗೆ ದೇಶಾದ್ಯಂತ ಸೈಬರ್ ಪೊಲೀಸರು ಭೇದಿಸಿದ ಪ್ರಕರಣಗಳ ಪರಿಶೀಲನೆ ನಡೆಸಲಾಗುತ್ತದೆ. ಅಂತಿಮ ಹಂತದಲ್ಲಿ ಮೂವರು ಪೊಲೀಸರ ಹೆಸರಿತ್ತು. ಶಿವಮೊಗ್ಗದ ಸಿಇಎನ್ ಕ್ರೈಮ್ ಠಾಣೆ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್, ಮಧ್ಯಪ್ರದೇಶದ ಭೂಪಾಲ್ ಸೈಬರ್ ಅಂಡ್ ಹೈಟೆಕ್ ಠಾಣೆ ಇನ್ಸ್ ಪೆಕ್ಟರ್ ನೀತು ಕುನ್ಸರಿಯಾ, ಮುಂಬೈ ವೆಸ್ಟ್ ರೀಜನ್ ಸೈಬರ್ ಠಾಣೆ ಇನ್ಸ್ ಪೆಕ್ಟರ್ ಸುವರ್ಣಾ ಶಿಂಧೆ ಅವರು ಅಂತಿಮ ಹಂತದ ಪ್ರಶಸ್ತಿ ರೇಸ್ ನಲ್ಲಿದ್ದರು. ಇವರು ಪತ್ತೆ ಹಚ್ಚಿದ ಪ್ರಕರಣಗಳ ಪರಿಶೀಲನೆ ನಡೆಸಿದ ಜ್ಯೂರಿ, ಕೆ.ಟಿ.ಗುರುರಾಜ್ ಅವರಿಗೆ ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿ ಘೋಷಿಸಿದೆ.
(cyber cop award)
ವಿವಿಧ ಕ್ಷೇತ್ರದ ತಜ್ಞರಿಂದ ಪರಿಶೀಲನೆ
ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ವಿವಿಧ ಕ್ಷೇತ್ರದ ಪರಿಣಿತರಿದ್ದರು. ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸುಪ್ರೀಂ ಕೋರ್ಟ್ ನ್ಯಾಯವಾದಿ ವಾಕುಲ್ ಶರ್ಮಾ, NTIPRIT ಟೆಲಿಕಾಂ ಸೆಕ್ಯೂರಿಟಿ ವಿಭಾಗದ ಡಿಪ್ಯೂಟಿ ಡೈರೆಕ್ಟರ್ ಜನರಲ್ ಎಸ್.ಕೆ.ಬಲ್ಲಾ, ಕೇಂದ್ರ ಗೃಹ ಸಚಿವಾಲಯ ಅಧೀನದ ಫಾರೆನ್ಸಿಕ್ ಸೈನ್ಸ್ ಸರ್ವಿಸ್ ಸಂಸ್ಥೆ ಮಾಜಿ ವಿಜ್ಞಾನಿ ಕೃಷ್ಣಶಾಸ್ತ್ರಿ ಪೆಂಡ್ಯಾಲ ಅವರು ಜ್ಯೂರಿ ಪ್ಯಾನಲ್ ನಲ್ಲಿದ್ದರು.
ಇದನ್ನೂ ಓದಿ – ಶಿವಮೊಗ್ಗ ರಿಂಗ್ ರೋಡ್, ಜಿಲ್ಲೆಯ ಹಲವು ಹೆದ್ದಾರಿ ಅಭಿವೃದ್ಧಿಗೆ ಒಪ್ಪಿಗೆ, ಯಾವೆಲ್ಲ ರಸ್ತೆ ಅಭಿವೃದ್ಧಿಯಾಗುತ್ತೆ?
ವೇಗದ ತನಿಖೆ, ಶಿಕ್ಷಕನಿಗಾಯ್ತು ಶಿಕ್ಷೆ
ಮಕ್ಕಳ ಅಶ್ಲೀಲ ಚಿತ್ರಗಳನ್ನು ಇಂಟರ್ ನೆಟ್ ಗೆ ಅಪ್ಲೋಡ್ ಮಾಡುತ್ತಿರುವ ಪ್ರಕರಣವನ್ನು ಶಿವಮೊಗ್ಗ ಸಿ.ಇ.ಎನ್ ಠಾಣೆ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಭೇದಿಸಿದ್ದರು. ಶಿವಮೊಗ್ಗದ ಶಿಕ್ಷಕನೊಬ್ಬ ಈ ಕೃತ್ಯ ಎಸಗಿದ್ದ. ಕೆ.ಟಿ.ಗುರುರಾಜ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಈ ಪ್ರಕರಣದ ಶೀಘ್ರ ತನಿಖೆ, ಆರೋಪಿಗೆ ಶಿಕ್ಷೆ ಕೊಡಿಸಿದ್ದು ಭಾರತದ ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿದೆ.
#DSCIAwards2022 | Congratulations to Shri Gururaj K.T, Police Inspector, CEN Crime Police Station, Shivamogga, Karnataka for winning the India Cyber Cop of the year! Thank you for your service to the nation!#AISS2022 pic.twitter.com/LCBmGUj3KL
— DSCI (@DSCI_Connect) December 22, 2022
ಶಿವಮೊಗ್ಗ ಸಿ.ಇ.ಎನ್ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ಕೆ.ಟಿ.ಗುರುರಾಜ್ ಅವರು ಪ್ರಸ್ತುತ ಕಡೂರಿನ ಪೊಲೀಸ್ ಟ್ರೈನಿಂಗ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.