ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 3 DECEMBER 2024
ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ (Shakti) ಯೋಜನೆ ಅಡಿ ಶಿವಮೊಗ್ಗ ವಿಭಾಗದಲ್ಲಿ ಈವರೆಗೆ 4 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಒಟ್ಟು ಪ್ರಯಾಣಿಕರ ಪೈಕಿ ಶೇ.60ರಷ್ಟು ಮಹಿಳೆಯರೆ ಪ್ರಯಾಣಿಸಿದ್ದಾರೆ ಎಂದು ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಎಷ್ಟು ಪ್ರಯಾಣಿಕರು?
ಶಿವಮೊಗ್ಗ ಕೆಎಸ್ಆರ್ಟಿಸಿ ವಿಭಾಗದ ಅಡಿ ಐದು ಡಿಪೋಗಳಿವೆ. ಶಿವಮೊಗ್ಗ, ಭದ್ರಾವತಿ, ಸಾಗರ, ಹೊನ್ನಾಳಿ ಮತ್ತು ಶಿಕಾರಿಪುರ ಡಿಪೋಗಳಿವೆ. ಶಿವಮೊಗ್ಗ ಮತ್ತು ಭದ್ರಾವತಿ ಡಿಪೋಗಳಿಂದಲೇ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಲಾಭ ಪಡೆದಿದ್ದಾರೆ. 2023ರ ಜೂನ್ 11 ರಿಂದ 2024ರ ನವೆಂಬರ್ 18ರವರೆಗಿನ ರಿಪೋರ್ಟ್.
ಡಿಪೋ | ಮಹಿಳಾ ಪ್ರಯಾಣಿಕರು | ಇತರೆ ಪ್ರಯಾಣಿಕರು |
ಶಿವಮೊಗ್ಗ | 1,32,04,371 | 88,43,204 |
ಭದ್ರಾವತಿ | 1,02,54,776 | 58,45,828 |
ಸಾಗರ | 69,86,421 | 51,35,933 |
ಹೊನ್ನಾಳಿ | 63,90,139 | 40,42,732 |
ಶಿಕಾರಿಪುರ | 36,95,127 | 21,59,128 |
ಒಟ್ಟು | 4,05,30,834 | 2,60,26,825 |
ಇನ್ನೊಂದೆಡೆ ಶಕ್ತಿ ಯೋಜನೆ ನಡುವೆಯು ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗಕ್ಕೆ ಹೆಚ್ಚು ಆದಾಯ ಲಭಿಸಿದೆ ಎಂದು ಕೆಎಸ್ಆರ್ಟಿಸಿಯ ವರದಿಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ವಿಭಾಗದಲ್ಲಿ ಮಹಿಳಾ ಪ್ರಯಾಣಿಕರಿಂದ 140 ಕೋಟಿ ರೂ. ವೆಚ್ಚವಾಗಿದೆ. ಇತರೆ ಪ್ರಯಾಣಿಕರಿಂದ 172 ಕೋಟಿ ರೂ. ಅದಾಯ ಬಂದಿದೆ.
ಡಿಪೋ | ಶಕ್ತಿ ಯೋಜನೆ ಮಹಿಳೆಯರ ಆದಾಯ | ಇತರೆ ಪ್ರಯಾಣಿಕರ ಆದಾಯ |
ಶಿವಮೊಗ್ಗ | 45,09,47,025 | 82,54,66,424 |
ಭದ್ರಾವತಿ | 25,86,64,346 | 26,47,72,475 |
ಸಾಗರ | 31,60,20,080 | 35,92,79,019 |
ಹೊನ್ನಾಳಿ | 21,08,52,649 | 16,84,73,738 |
ಶಿಕಾರಿಪುರ | 17,09,28,035 | 10,92,65,644 |
ಒಟ್ಟು | 140,74,12,135 | 172,72,57,300 |
ಒಟ್ಟು ಆದಾಯದಲ್ಲಿ ಶೇ.44ರಷ್ಟು ಶಕ್ತಿ ಯೋಜನೆಯ ಪಾಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ಹೊಳೆಹೊನ್ನೂರು ಬಳಿ ಎರಡು ಕಾರು, ಬೈಕ್ ಅಪಘಾತ
KSRTC Shakti Scheme
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422