ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ನವೆಂಬರ್ 2021
ದೀಪಾವಳಿ ಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ತಾಂಡಾಗಳಲ್ಲಿ ಮೇರಾ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು. ಕರೋನ ಹಿನ್ನೆಲೆ ಕಳೆದ ವರ್ಷ ಆಚರಣೆಗೆ ಅಡ್ಡಿಯುಂಟಾಗಿತ್ತು. ಈ ಭಾರಿ ಸಾಂಪ್ರದಾಯಿಕವಾಗಿ ಮೇರಾ ಆಚರಿಣೆ ಮಾಡಲಾಯಿತು.
ಆಯನೂರಿನಲ್ಲಿ ಲಂಬಾಣಿ ಸಮುದಾಯದವರ ಮೇರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಸಂಪ್ರದಾಯ, ಆಚರಣೆಗಳೆಂದರೆ ಮೂಗು ಮುರಿಯುವವರ ಮಧ್ಯೆ, ಲಂಬಾಣಿ ಸಮುದಾಯದವರು ಮೇರಾ ಅಚರಣೆಯನ್ನು ಮುಂದುವರೆಸುತ್ತಿದ್ದಾರೆ. ಇದು ಸಮುದಾಯವನ್ನು ಸಾಂಪ್ರದಾಯಿಕವಾಗಿ ಗಟ್ಟಿಗೊಳಿಸುತ್ತಿದೆ.
ಮೇರಾ ಹಬ್ಬ ಅಂದರೇನು? ಹೇಗಿರುತ್ತೆ?
ದೀಪಾವಳಿ ಸಂದರ್ಭ ಮೇರಾ ಹಬ್ಬವನ್ನು ಆಚರಿಸಲಾಗುತ್ತದೆ. ಮೇರಾ ಅಂದರೆ ಕತ್ತೆಲಯಿಂದ ಬೆಳಕಿನೆಡೆಗೆ ಸಾಗುವ ಪ್ರಕ್ರಿಯ. ಮೊದಲ ದಿನ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಎರಡನೇ ದಿನ ಹೂವು ಕೀಳುವ ಸಂಪ್ರದಾಯ ನಡೆಯಲಿದೆ. ಬಂಜಾರ ಸಮುದಾಯದ ಯುವತಿಯರು ಕಾಡಿಗೆ ಹೋಗಿ ಹೂವು ಕೀಳಬೇಕು. ಬುಟ್ಟಿಯಲ್ಲಿ ಹೂವು ತುಂಬಿಕೊಂಡು ಜಾನಪದ ಗೀತೆಗಳನ್ನು ಹೇಳುತ್ತ, ಸಾಂಪ್ರದಾಯಿಕ ನೃತ್ಯ ಮಾಡುತ್ತ ತಾಂಡಾಗೆ ಮರಳುತ್ತಾರೆ.
ಹಬ್ಬದ ದಿನ ಮೇರಾ ಅಚರಣೆ ನಡೆಸಲಾಗುತ್ತದೆ. ಅವಿವಾಹಿತೆಯರು ದೀಪಾಗಳನ್ನು ಹಿಡಿದು ತಾಂಡಾದ ಪ್ರತಿ ಮನೆಗೂ ಹೋಗಿ ದೀಪ ಬೆಳಗುತ್ತಾರೆ. ತಾಂಡಾದ ಪ್ರತಿ ಮನೆಯಲ್ಲೂ ಕತ್ತಲು ದೂರಾಗಿ ಬೆಳಕು ಹರಿಯಲಿ ಎಂದು ಹಾಡಿ, ದೀಪ ಬೆಳಗಿ ಬರುತ್ತಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ತಾಂಡಾಗಳಲ್ಲೂ ಈ ಭಾರಿ ಮೇರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಹಬ್ಬ ಅಂದ್ಮೇಲೆ ಸಿಹಿ ಇರಲೇಬೇಕು. ಶಿವಮೊಗ್ಗ ನಗರದಲ್ಲಿ ಕೇವಲ ಏಳು ನಿಮಿಷದಲ್ಲಿ ರೆಡಿಯಾಗುತ್ತೆ ನೀವು ಕೇಳಿದ ಕೇಕ್. ಮೊದಲ ಮೂರು ದಿನ ಭರ್ಜರಿ ಆಫರ್. ಕರೆ ಮಾಡಿ.. ಆರ್ಡರ್ ಮಾಡಿ..
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200