ಶಿವಮೊಗ್ಗ : ನಂದಿನಿ ಹಾಲು (Milk) ಮತ್ತು ಹಾಲಿನ ಉತ್ಪನ್ನಗಳ ದರ ಹೆಚ್ಚಳ ಮಾಡಲಾಗಿದೆ. ಏ.1ರಿಂದ ನೂತನ ದರ ಜಾರಿಗೆ ಬರಲಿದೆ. ಈ ಸಂಬಂಧ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ (ಶಿಮುಲ್) ವ್ಯಾಪ್ತಿಯಲ್ಲಿ ನೂತನ ದರ ಪಟ್ಟಿ ಪ್ರಕಟಿಸಲಾಗಿದೆ.
ಕರ್ನಾಟಕ ಹಾಲು ಮಹಾಮಂಡಳದ ಸಭೆಯಲ್ಲಿ ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಶಿಮುಲ್ ಅಧ್ಯಕ್ಷ ಹೆಚ್.ಎನ್.ವಿದ್ಯಾಧರ ನೇತೃತ್ವದಲ್ಲಿ ನಡೆದ 455ನೇ ಆಡಳಿತ ಮಂಡಳಿಯ ಸಭೆಯಲ್ಲಿ ದರ ಹೆಚ್ಚಳದ ತೀರ್ಮಾನ ಪ್ರಕಟಿಸಲಾಯಿತು.
![]() |
ಹಾಲು ಉತ್ಪಾದಕರಿಗೆ ಪಾಲು
» ಸದ್ಯ ಶಿಮುಲ್ನಿಂದ ಹಾಲು (Milk) ಉತ್ಪಾದಕರ ಸಂಘಗಳಿಗೆ ಪ್ರತಿ ಕೆ.ಜಿ. ಹಾಲಿಗೆ 34.18 ರೂ. ನೀಡಲಾಗುತ್ತಿದೆ. ಸಂಘಗಳು ಹಾಲು ಉತ್ಪಾದಕರಿಗೆ ಪ್ರತಿ ಕೆ.ಜಿ.ಗೆ 32.22 ರೂ. ನೀಡುತ್ತಿವೆ.
ಇದನ್ನೂ ಓದಿ » ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಹಾಸನದಲ್ಲಿ ಉದ್ಯೋಗ, ಯಾವೆಲ್ಲ ಹುದ್ದೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು?
» ಏಪ್ರಿಲ್ 1ರಿಂದ ನೂತನ ದರ ಜಾರಿಗೆ ಬರಲಿದೆ. ಆಗ ಶಿಮುಲ್ನಿಂದ ಹಾಲು ಉತ್ಪಾದಕರ ಸಂಘಗಳಿಗೆ 36.26 ರೂ. ನೀಡಲಾಗುತ್ತದೆ. ಸಂಘಗಳಿಂದ ಹಾಲು ಉತ್ಪಾದಕರಿಗೆ ಪ್ರತಿ ಕೆ.ಜಿಗೆ 34.21 ರೂ. ನೀಡಲು ಆದೇಶಿಸಲಾಗಿದೆ.
ಹಾಲು, ಮೊಸರು, ಮಜ್ಜಿಗೆ ರೇಟ್ ಹೆಚ್ಚಳ
ಏ.1ರಿಂದ ಹಾಲು, ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕೆಟ್ಗಳ ದರ ಹೆಚ್ಚಳವಾಗಲಿದೆ ಎಂದು ಶಿಮುಲ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಒಕ್ಕೂಟದ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಯಾವ್ಯಾವ ಉತ್ಪನ್ನಕ್ಕೆ ದರ ಎಷ್ಟಾಗಿದೆ ಅನ್ನುವುದರ ವಿವರ ಇಲ್ಲಿದೆ.
ಉತ್ಪನ್ನ | ಹಳೆ ದರ | ಹೊಸ ದರ |
ಟೋನ್ಡ್ ಹಾಲು – 1 ಲೀಟರ್ | 42 ರೂ. | 46 ರೂ. |
ಟೋನ್ಡ್ ಹಾಲು – 500 ML | 22 ರೂ. | 24 ರೂ. |
ಶುಭಂ ಸ್ಟಾಂಡರ್ಡ್ ಹಾಲು – 1 ಲೀ. | 48 ರೂ. | 52 ರೂ. |
ಶುಭಂ ಸ್ಟಾಂಡರ್ಡ್ ಹಾಲು – 500 ML | 25 ರೂ. | 27 ರೂ. |
ಹೋಮೊಜೀನೈಸ್ಡ್ ಶುಭಂ ಹಾಲು – 1 ಲೀ. | 49 ರೂ. | 53 ರೂ. |
ಹೋಮೊಜೀನೈಸ್ಡ್ ಶುಭಂ ಹಾಲು – 500 ML | 25 ರೂ. | 27 ರೂ. |
ಹೋಮೊಜೀನೈಸ್ಡ್ ಶುಭಂ ಹಾಲು – 200 ML | 12 ರೂ. | 13 ರೂ. |
ಮೊಸರು – 500 ಗ್ರಾಂ | 26 ರೂ. | 28 ರೂ. |
ಮೊಸರು – 200 ಗ್ರಾಂ | 12 ರೂ. | 13 ರೂ. |
ಮೊಸರು – 5 ಕೆ.ಜಿ ಬಕೆಟ್ | 375 ರೂ. | 395 ರೂ. |
ಮೊಸರು – 10 ಕೆ.ಜಿ ಬಕೆಟ್ | 740 ರೂ. | 780 ರೂ. |
ಮಜ್ಜಿಗೆ – 200 ML | 9 ರೂ. | 10 ರೂ. |
ಸ್ವೀಟ್ ಲಸ್ಸಿ – 200 ML | 13 ರೂ. | 14 ರೂ. |
ನಂದಿನಿಯ ವಿವಿಧ ಶ್ರೇಣಿಯ ಹಾಲಿನ (Milk) 1 ಲೀಟರ್ ಮತ್ತು ಅರ್ಧ ಲೀಟರ್ ಪ್ಯಾಕೆಟ್ಗಳಿಗೆ ನೀಡಲಾಗುತ್ತಿದ್ದ 50 ಎಂ.ಎಲ್ ಹೆಚ್ಚುವರಿ ಪ್ರಮಾಣಕ್ಕೆ ಅನ್ವಯವಾಗುವಂತೆ 2 ರೂ. ಹೆಚ್ಚುವರಿ ದರವನ್ನು ಹಿಂಪಡೆಯಲಿದೆ. ಏ.1ರಿಂದ ಇದು ಜಾರಿಗೆ ಬರಲಿದೆ.
ಇದನ್ನೂ ಓದಿ » ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ದಿಢೀರ್ ದಾಳಿ, 18 ಕೇಸ್ ದಾಖಲು
ಶಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಹೆಚ್.ಎಸ್.ವಿದ್ಯಾಧರ, ಉಪಾಧ್ಯಕ್ಷ ಚೇತನ್ ಎಸ್.ನಾಡಿಗರ, ನಿರ್ದೇಶಕರಾದ ಡಿ.ಆನಂದ್, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಜಿ.ಪಿ. ರೇವಣಸಿದ್ದಪ್ಪ, ಹೆಚ್.ಕೆ.ಬಸಪ್ಪ, ಹೆಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ, ಬಿ.ಆರ್.ರವಿಕುಮಾರ್, ಬಿ.ಸಿ.ಸಂಜೀವ ಮೂರ್ತಿ, ಟಿ.ಎಸ್.ದಯಾನಂದ ಗೌಡ, ಜಿ.ಬಿ.ಶೇಖರಪ್ಪ, ಎಸ್.ಕುಮಾರ್, ಸಹಕಾರ ಸಂಘಗಳ ಜಂಟಿ ನಿಬಂಧಕರ ಪ್ರತಿನಿಧಿ ನಾಗಭೂಷಣ ಕಲ್ಮನೆ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ಬಾಬುರತ್ನ, ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಸಭೆಯಲ್ಲಿದ್ದರು.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200