ಹಾಲು ಉತ್ಪಾದಕರಿಗೆ ಶಾಕ್‌ ನೀಡಿದ ಶಿಮುಲ್‌, ಖರೀದಿ ದರ ಕಡಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIMOGA NEWS, 2 OCTOBER 2024 : ನಷ್ಟದ ಸುಳಿಗೆ ಸಿಲುಕಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟವು (ಶಿಮುಲ್), ರೈತರಿಂದ ಖರೀದಿಸುವ ಹಾಲಿನ (Milk) ದರವನ್ನು 90 ಪೈಸೆ ಇಳಿಸಿದೆ. ಈ ಕುರಿತು ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಸ್ತುತ ಶಿಮುಲ್ 7 ಕೋಟಿ ರೂ. ನಷ್ಟದಲ್ಲಿದೆ. ಅದರಿಂದ ಹೊರಬರಲು ಹಾಲು ಖರೀದಿ ದರ ಇಳಿಸಿದೆ.

ನಷ್ಟದಿಂದ ಪಾರಾಗಲು ಹರ ಸಾಹಸ

2023ರಲ್ಲಿ ಹಾಲು ಮಾರಾಟದ ದರವನ್ನು ಮೂರು ರೂಪಾಯಿ ಏರಿಕೆ ಮಾಡಿದ್ದರಿಂದ 27 ಕೋಟಿ ರೂ.ಗು ಅಧಿಕ ನಷ್ಟದಲ್ಲಿದ್ದ ಶಿಮುಲ್ ನಷ್ಟದಿಂದ ಹೊರಬರಲು ಹರಸಾಹಸ ಪಟ್ಟಿತ್ತು. ಈ ನಡುವೆ ಸರ್ಕಾರ ಮತ್ತೊಮ್ಮೆ 2 ರೂ.ಹೆಚ್ಚಳ ಮಾಡಿ ಅಷ್ಟು ಹಣವನ್ನು ರೈತರಿಗೆ ವರ್ಗಾಯಿಸಿದ್ದರಿಂದ ಹಾಲು ಒಕ್ಕೂಟಗಳಿಗೆ ಮತ್ತೊಮ್ಮೆ ಬರೆ ಬಿದ್ದಂತಾಗಿತ್ತು.

» ಅಧ್ಯಕ್ಷರು ಹೇಳಿದ್ದೇನು?

ಕೆಲ ತಿಂಗಳು ಆಡಳಿತ ಮಂಡಳಿ ಇರಲಿಲ್ಲ. ಹಾಲಿನ ದರ ಪರಿಷ್ಕರಣೆ ಸಂಬಂಧ ಯಾವುದೇ ತೀರ್ಮಾನ ಆಗಿರಲಿಲ್ಲ. ನಮ್ಮ ಆಡಳಿತ ಮಂಡಳಿ ಬರುವ ಹೊತ್ತಿಗೆ 7 ಕೋಟಿ ರೂ. ನಷ್ಟದಲ್ಲಿತ್ತು. ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಖರೀದಿ ದರ ಇಳಿಸಲಾಗಿದೆ.ವಿದ್ಯಾಧರ್, ಶಿಮುಲ್ ಅಧ್ಯಕ್ಷ

Nandini-Milk-In-Shimoga-Shimul

ಪರಿಷ್ಕೃತ ದರ ಎಷ್ಟು?

ಈವರೆಗೂ ಸಂಘಗಳಿಂದ ಪ್ರತಿ ಕೆ.ಜಿ ಹಾಲಿಗೆ 33.03 ರೂ.ನಂತೆ ಖರೀದಿಸಲಾಗುತ್ತಿತ್ತು. ಪ್ರಸ್ತುತ ಶಿಮುಲ್ ಏಳು ಕೋಟಿ ರೂ. ನಷ್ಟದಲ್ಲಿದೆ. ಅದರಿಂದ ಹೊರಬರಲು ರೈತರಿಂದ ಖರೀದಿಸುವ ದರ ಇಳಿಸಿದೆ. ಪರಿಷ್ಕೃತ ದರ ಅಕ್ಟೋಬರ್ ಒಂದರಿಂದಲೇ ಅನ್ವಯವಾಗಲಿದೆ.

ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಕೆ.ಜಿಗೆ 32.09 ರೂ. ನೀಡಲಾಗುತ್ತದೆ. ಸಂಘಗಳಿಂದ ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 30.13 ರೂ. ನೀಡಲಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯಿಸಿ ಸುತ್ತೋಲೆ ಹೊರಡಿಸಲಾಗಿದೆ.

ನಿತ್ಯ 7 ಲಕ್ಷ ಲೀಟರ್‌ ಉತ್ಪಾದನೆ

ಶಿಮುಲ್‌ ವ್ಯಾಪ್ತಿಯಲ್ಲಿ ಪ್ರತಿದಿನ 7.17 ಲಕ್ಷ ಲೀಟರ್‌ಗು ಹೆಚ್ಚು ಹಾಲು ಶೇಖರಣೆ ಆಗುತ್ತಿದೆ. ಈ ಪೈಕಿ 3.49 ಲಕ್ಷ ಲೀಟರ್‌ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟವಾಗತ್ತಿದೆ. ಅಂತಾರಾಜ್ಯ ಡೈರಿಗಳಿಗೆ 1.34 ಲಕ್ಷ ಲೀಟರ್‌ ಹಾಲು ಪೂರೈಕೆಯಾಗುತ್ತಿದೆ. ಉಳಿದ 2.20 ಲಕ್ಷ ಲೀಟರ್‌ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆ ಪರಿವರ್ತನೆಗೆ ಕಳುಹಿಸಲಾಗುತ್ತಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ಅಂಬಾರಿ ಹೊರಲು ಶಿವಮೊಗ್ಗಕ್ಕೆ ಮೂರು ಗಂಡಾನೆ, ಯಾವಾಗ ಬರ್ತವೆ?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment