ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ತುಮಕೂರು ನಡುವೆ ನೂತನ ಪ್ಯಾಸೆಂಜರ್ ರೈಲು ಸೇವೆಯನ್ನು ಆರಂಭಿಸಲಾಗಿದೆ. ಡಿಸೆಂಬರ್ 13ರಿಂದ ನೂತನ ರೈಲಿನ ಸಂಚಾರ ಶುರುವಾಗಲಿದೆ ಎಂದು ರೈಲ್ವೆ ಇಲಾಕೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 06591 – ತಮಕೂರಿನಿಂದ ಶಿವಮೊಗ್ಗ (ಡಿಸೆಂಬರ್ 13ರಿಂದ ಆರಂಭ)
ಪ್ರತಿ ದಿನ ಸಂಜೆ 6.40ಕ್ಕೆ ತುಮಕೂರಿನಿಂದ ರೈಲು ಹೊರಡಲಿದೆ. ಹೆಗ್ಗೆರೆ, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ. ಅರಳಗುಪ್ಪೆ, ಕರಡಿ, ಬನಶಂಕರಿ, ತಿಪಟೂರು, ಹೊನ್ನವಳ್ಳಿ ರೋಡ್, ಆದಿಹಳ್ಳಿ, ಅರಸೀಕೆರೆ, ಬಾಣವರ, ದೇವನೂರು, ಬಳ್ಳೇಕೆರೆ ಹಾಲ್ಟ್, ಕಡೂರು, ಬೀರೂರು, ಶಿವಪುರ, ಕೋರನಹಳ್ಳಿ, ತರೀಕೆರೆ, ಮಸರಹಳ್ಳಿ, ಭದ್ರಾವತಿ, ಶಿವಮೊಗ್ಗ ಮಹಾದೇವಿ ಟಾಕೀಸ್’ಗಳಲ್ಲಿ ನಿಲುಗಡೆ ಇರಲಿದೆ. ರಾತ್ರಿ 11.50ಕ್ಕೆ ಶಿವಮೊಗ್ಗ ಟೌನ್ ತಲುಪಲಿದೆ.
ರೈಲು ಸಂಖ್ಯೆ 06592 – ಶಿವಮೊಗ್ಗದಿಂದ ತುಮಕೂರು (ಡಿಸೆಂಬರ್ 14ರಿಂದ ಆರಂಭ)
ಬೆಳಗ್ಗೆ 4 ಗಂಟೆಗೆ ಶಿವಮೊಗ್ಗದಿಂದ ಹೊರಡಲಿದೆ. ಮೇಲೆ ತಿಳಿಸಿರುವ ನಿಲ್ದಾಣಗಳಲ್ಲಿ ರೈಲು ಸ್ಟಾಪ್ ನೀಡಲಿದೆ. ಬೆಳಗ್ಗೆ 9.25ಕ್ಕೆ ತುಮಕೂರು ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹನ್ನೆರಡು ಬೋಗಿಗಳು
ಪ್ಯಾಸೆಂಜರ್ ರೈಲಿನಲ್ಲಿ ಹನ್ನೆರಡು ಬೋಗಿಗಳು ಇರಲಿವೆ. ಇದರಲ್ಲಿ ಹತ್ತು ಸಾಮಾನ್ಯ ಬೋಗಿಗಳು, ಲಗೇಜ್ ಕಮ್ ಬ್ರೇಕ್ ವ್ಯಾನ್ ಇರಲಿವೆ. ಈ ರೈಲಿನಲ್ಲಿ ಸೀಟುಗಳನ್ನು ಮೊದಲೆ ಕಾಯ್ದಿರಿಸುವ ವ್ಯವಸ್ಥೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.