ಶಿವಮೊಗ್ಗದಲ್ಲಿ ಮಳೆ ಜೋರು, ಅಡಕೆ, ತೆಂಗಿನ ಮರಗಳು ಬುಡಮೇಲು, ಗೋಪಿ ಸರ್ಕಲ್ನಲ್ಲಿ ಭಾರಿ ಅವಘಡ ತಪ್ಪಿತು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 MAY 2021

ಗಾಳಿ, ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ ಸಂಭವಿಸಿದೆ. ಹಲವು ಕಡೆ ಮರಗಳು ಬುಡ ಮೇಲಾಗಿದೆ. ರಾತ್ರಿ ಪೂರ್ತಿ ಮಳೆ ಸುರಿಯುವ ಸಂಭವವಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಅಡಕೆ, ತೆಂಗಿನ ಮರಗಳು ಬುಡಮೇಲು

ಗಾಳಿ, ಮಳೆಗೆ ಯಲವಟ್ಟಿಯಲ್ಲಿ ಅಡಕೆ ಮರಗಳು, ತೆಂಗು ಮತ್ತು ಮಾವಿನ ಮರಗಳು ಧರೆಗುರುಳಿವೆ. ಮಂಜುನಾಥ್ ಅವರ ತೋಟದಲ್ಲಿ ಸುಮಾರು 50 ಅಡಕೆ ಮರಗಳು, ನಾಲ್ಕು ತೆಂಗಿನ ಮರ, ಎರಡು ಮಾವಿನ ಮರಗಳು ಧರೆಗುರುಳಿವೆ.

ಟ್ರಾನ್ಸ್​ಫಾರ್ಮರ್‍ ಮೇಲೆ ಫ್ಲೆಕ್ಸ್​

ಶ್ರೀನಿಧಿ ಕಾಂಪ್ಲೆಕ್ಸ್‍ ಮೇಲಿರುವ ಜಾಹೀರಾತಿನ ಫ್ಲೆಕ್ಸ್‍ ಗಾಳಿಗೆ ಹಾರಿ ಬಂದಿದೆ. ಗೋಪಿ ಸರ್ಕಲ್‍ನಲ್ಲಿರುವ ಟ್ರಾನ್ಸ್‍ಫಾರ್ಮರ್‍ ಮೇಲೆ ಬಿದ್ದಿತ್ತು. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು. ಸುರಿವ ಮಳೆ ನಡುವೆ ಮೆಸ್ಕಾಂ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದರು. ಅದರ ವಿಡಿಯೋ ವರದಿ ಇಲ್ಲಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment