ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
[su_highlight background=”#d70000″ color=”#ffffff”]SHIVAMOGGA LIVE NEWS[/su_highlight]
ಶಿವಮೊಗ್ಗ| ಜಿಲ್ಲೆಯಲ್ಲಿ ವರುಣ ಇನ್ನೂ ಅಬ್ಬರಿಸುತ್ತಿದ್ದಾನೆ. ಭಾರಿ ಮಳೆಗೆ (RAIN DAMAGE) ಜನರು ತತ್ತರಿಸಿ ಹೋಗಿದ್ದಾರೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಜೀವ ಹಾನಿ ಸಂಭವಿಸಿದೆ. ಬೆಳೆ ಹಾನಿಯು ಉಂಟಾಗಿದೆ. ರಸ್ತೆ ಸಂಪರ್ಕವು ಕಡಿತವಾಗಿದೆ.

ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಗಿದೆ?
[su_highlight background=”#000000″ color=”#ffffff”]ಶಿವಮೊಗ್ಗ ನಗರ |[/su_highlight] ಕಳೆದ 24 ಗಂಟೆ ಅವಧಿಯಲ್ಲಿ ಮಳೆ ಪ್ರಮಾಣ ತಗ್ಗಿದೆ. ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇವತ್ತು ಮೋಡ ಕವಿದ ವಾತಾವರಣವಿದೆ. ಜೋರು ಮಳೆಯಾಗುವ ಸಾಧ್ಯತೆ ಇದೆ.
[su_note note_color=”#ffceb9″ text_color=”#000000″ radius=”1″]ಗೋಡೆ ಕುಸಿತ ನಾಲ್ವರಿಗೆ ಗಾಯ
[su_highlight background=”#000000″ color=”#ffffff”]ಶಿವಮೊಗ್ಗ ತಾಲೂಕು |[/su_highlight] ಅಗಸವಳ್ಳಿ ಗೌಳಿ ನಗರದಲ್ಲಿ ಮನೆ ಗೊಡೆ ಕುಸಿದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಬಿಬಿಜಾನ್ (55), ಉಮರ್ (7), ಸಾಧಿಕ್ (6), ಅಬ್ದುಲ್ (17) ಗಾಯಗೊಂಡಿದ್ದಾರೆ. ನಾಲ್ವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.[/su_note]
ಮನೆಗಳಿಗೆ ನುಗ್ಗಿದ ಭದ್ರಾ ನೀರು
[su_highlight background=”#000000″ color=”#ffffff”]ಹೊಳೆಹೊನ್ನೂರು |[/su_highlight] ಇಲ್ಲಿನ ಎನ್.ಡಿ.ಕಾಲೋನಿಯ 9 ಮನೆಗಳಿಗೆ ಭದ್ರಾ ನದಿ ನೀರು ನುಗ್ಗಿದೆ (RAIN DAMAGE). ಹಾಗಾಗಿ ಈ ಮನೆಯ ವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಬಾಲಕರ ಮೆಟ್ರಿಕ್ ಹಾಸ್ಟೆಲ್’ನಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. 26 ಮಂದಿಯನ್ನು ಕಾಳಜಿ ಕೇಂದ್ರದಲ್ಲಿ ರಕ್ಷಿಸಲಾಗಿದೆ.
ತೋಟಗಳು ಜಲಾವೃತ, ಆತಂಕ
ತುಂಗಾ ಮತ್ತು ಭದ್ರಾ ನದಿಯ ದಂಡೆ ಮೇಲಿನ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ಸಿದ್ಲಿಪುರ, ಎಸ್.ಕೆ.ಮಗ್ಗಿ, ಮಂಗೋಟೆ, ನಾಗಸಮುದ್ರ ಗ್ರಾಮಗಳ ಅಡಕೆ ತೋಟಗಳಿಗೆ ನೀರು ನುಗ್ಗಿದೆ. ಭತ್ತದ ಗದ್ದೆಗಳಲ್ಲೂ ನೀರು ನಿಂತಿದೆ.
[su_note note_color=”#f0ffbe” text_color=”#000000″ radius=”1″]ಗೋಡೆ ಕುಸಿತ, ರಸ್ತೆಗೆ ಬಿದ್ದ ಬಂಡೆ
[su_highlight background=”#000000″ color=”#ffffff”]ಹೊಸನಗರ |[/su_highlight] ತಾಲೂಕಿನಲ್ಲಿ ಗಾಳಿ, ಮಳೆ ಜೋರಾಗಿದೆ. ವಿವಿಧೆಡೆ 5 ಮನೆಗಳು ಕುಸಿದು ಬಿದ್ದಿವೆ. ವಿವಿಧೆಡೆ ತೋಟ, ಗದ್ದೆಯಲ್ಲಿ ನೀರು ನಿಂತಿದ್ದು ಕೆರೆಯಂತಾಗಿದೆ. ರೈತರು ನೀರು ಹೊರಗೆ ಹಾಕಲು ಹರಸಾಹಸ ಪಡುತ್ತಿದ್ದಾರೆ. ವಸವೆ ಗ್ರಾಮದಲ್ಲಿ ರಸ್ತೆ ಕೊಚ್ಚಿ ಹೋಗಿದೆ. ಸುಳುಗೋಡು ರಸ್ತೆ ಮೇಲೆ ಬಂಡೆ ಬಿದ್ದಿದ್ದು, ಅದನ್ನು ಕೂಡಲೆ ತೆರವು ಮಾಡಲಾಯಿತು.[/su_note]
ಶಾಲೆಯ ಕಾಂಪೌಂಡ್ ಕುಸಿತ
[su_highlight background=”#000000″ color=”#ffffff”]ಆನಂದಪುರ |[/su_highlight] ಸುತ್ತಮುತ್ತ ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿವೆ. ಗಿಳಾಲಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಕುಸಿದಿದೆ. ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣರು ಗ್ರಾಮದಲ್ಲಿ ಮನೆ ಕುಸಿದಿದೆ. ಇರುವಕ್ಕಿ ಗ್ರಾಮದಲ್ಲಿ ರಾಮಪ್ಪ ಎಂಬುವವರಿಗೆ ಸೇರಿದ ಮನೆ ಕುಸಿದಿದೆ.
ಹೆದ್ದಾರಿ ಮೇಲೆ ಉರುಳಿದ ಮರ
[su_highlight background=”#000000″ color=”#ffffff”]ರಿಪ್ಪನ್ ಪೇಟೆ |[/su_highlight] ಹೆದ್ದಾರಿ ಮೇಲೆ ಮರ ಉರುಳಿ ಕೆಲವು ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಶಬರೀಶನಗರದಲ್ಲಿ ಹೆದ್ದಾರಿ ಮೇಲೆ ಬೃಹತ್ ಮರ ಉರುಳಿತ್ತು. ಇದರಿಂದ ರಿಪ್ಪನ್ ಪೇಟೆ – ತೀರ್ಥಹಳ್ಳಿ ನಡುವೆ ಎರಡು ಗಂಟೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಗ್ರಾಮದಲ್ಲಿ ಅಂತ್ಯಕ್ರಿಯೆ
[su_highlight background=”#000000″ color=”#ffffff”]ಭದ್ರಾವತಿ |[/su_highlight] ಮನೆ ಗೋಡೆ (RAIN DAMAGE) ಕುಸಿದು ಮೃತಪಟ್ಟಿದ್ದ ಕಾಚಿಗೊಂಡನಹಳ್ಳಿ ಗ್ರಾಮದ ಸುಜಾತಾ (55) ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸೋಮವಾರ ರಾತ್ರಿ ಮನೆ ಗೋಡೆ ಕುಸಿದು ಸುಜಾತಾ ಅವರು ಮೃತಪಟ್ಟಿದ್ದರು. ಅವರ ಮಗ ಕೃಷ್ಣಮೂರ್ತಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಮದ್ವತಿಯಿಂದ ಪ್ರವಾಹ
[su_highlight background=”#000000″ color=”#ffffff”]ಶಿಕಾರಿಪುರ |[/su_highlight] ಕುಮದ್ವತಿ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ಅಂಬಾರಗೊಪ್ಪ ಸಂಪರ್ಕ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇಲ್ಲಿನ ಸುತ್ತಮುತ್ತಲ ತೋಟ, ಗದ್ದೆಗೆ ನೀರು ನುಗ್ಗಿದ್ದು ರೈತರು ಆತಂಕಕ್ಕೀಡಾಗಿದ್ದಾರೆ. ಈಸೂರಿನಿಂದ ಹಿತ್ತಲ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಹೆಗ್ಗರೆ ಕೆರೆ ಏರಿ ಒಡೆದು ಹೋಗಿದೆ. ಅಂಬ್ಲಿಗೊಳ ಎಡದಂಡೆ ಕಾಲುವೆ ಒಡೆದು ಗದ್ದೆ, ತೋಟಗಳು ಜಲಾವೃತವಾಗಿವೆ. ಕೊಪ್ಪದ ಕೆರೆಯನ್ನು ಭರ್ತಿಯಾಗಿ ಕೋಡಿ ಬಿದ್ದಿದೆ.
ಇದನ್ನೂ ಓದಿ – ಕಳೆದ 24 ಗಂಟೆಯಲ್ಲಿ ಹೊಸನಗರದ ಗ್ರಾಮವೊಂದರಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















