ಶಿವಮೊಗ್ಗ ಗಾಳಿ, ಮಳೆ: 1 ಕಾರು ಜಖಂ, ಹಾರಿದ ಮನೆಗಳ ಛಾವಣಿ

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಮಳೆಯಾಗಿದೆ. ಶಿವಮೊಗ್ಗ ಗಾಳಿ, ಮಳೆ ಹಲವೆಡೆ ಹಾನಿ ಉಂಟು ಮಾಡಿದೆ.

ಶಿವಮೊಗ್ಗ ಗಾಳಿ, ಮಳೆಗೆ ಹಲವೆಡೆ ಹಾನಿ

ಒಂದು ವಾರದಿಂದ ಈಚಗೆ ಜಿಲ್ಲೆಯಾದ್ಯಂತ ತಾಪಮಾನ ಹೆಚ್ಚಳವಾಗಿತ್ತು. ಕಳೆದ ಎರಡು ದಿನದಿಂದ ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಇದರಿಂದಾಗಿ ಉಷ್ಣಾಂಶ ತುಸು ತಗ್ಗಿತ್ತು. ಇಂದು ಸಂಜೆ ಶಿವಮೊಗ್ಗ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಇದರಿಂದ ವಿವಿಧೆಡೆ ವಾತಾವರಣ ತಂಪೆನಿಸಿದೆ. ಮತ್ತೊಂದೆಡೆ ಗಾಳಿ, ಮಳೆಗೆ ಆಸ್ತಿಪಾಸ್ತಿ ಹಾನಿಯಾಗಿದೆ.

ಶಿವಮೊಗ್ಗ ಗಾಳಿ, ಮಳೆ: 1 ಕಾರು ಜಖಂ, ಹಾರಿದ ಮನೆಗಳ ಛಾವಣಿ

ಎಲ್ಲೆಲ್ಲಿ ಏನೇನು ಹಾನಿಯಾಗಿದೆ?

ಸಿಡಿಲಿಗೆ ಮರಕ್ಕೆ ಬೆಂಕಿ: ಶಿವಮೊಗ್ಗದ ವಿದ್ಯಾನಗರದಲ್ಲಿ ಸಿಡಲು ಬಡಿದು ತೆಂಗಿನ ಮರದಲ್ಲಿ ಬೆಂಕಿ ಹೊತ್ತಿತ್ತು. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಶಿವಮೊಗ್ಗ ಗಾಳಿ, ಮಳೆ: 1 ಕಾರು ಜಖಂ, ಹಾರಿದ ಮನೆಗಳ ಛಾವಣಿ

ಕಾರಿನ ಮೇಲೆ ಬಿದ್ದ ಮರ: ಶಿವಮೊಗ್ಗ ತಾಲೂಕು ಸೋಗಾನೆ ಹೊಸೂರು ಗ್ರಾಮದ ಬೋಜಪ್ಪನ ಕ್ಯಾಂಪ್‌ನಲ್ಲಿ ತೆಂಗಿನ ಮರಗಳು ಧರೆಗುರುಳಿವೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ತೆಂಗಿನ ಮರ ತುಂಡಾಗಿ ಬಿದ್ದಿದ್ದರಿಂದ ಕಾರಿಗೆ ಹಾನಿಯಾಗಿದೆ.

ಶಿವಮೊಗ್ಗ ಗಾಳಿ, ಮಳೆ: 1 ಕಾರು ಜಖಂ, ಹಾರಿದ ಮನೆಗಳ ಛಾವಣಿ

ಹಾರಿ ಹೋದ ಛಾವಣಿ: ಭದ್ರಾವತಿ ತಾಲೂಕು ಹಾನುಮಂತಾಪುರ ಗ್ರಾಮದಲ್ಲಿಯು ಭಾರಿ ಗಾಳಿ, ಮಳೆಯಾಗಿದೆ. ಜೋರು ಗಾಳಿಗೆ ಇಲ್ಲಿನ ಮನೆಗಳ ಛಾವಣಿ ಹಾರಿ ಹೋಗಿವೆ. ತಗಡಿನ ಶೀಟ್‌ಗಳು ಅಕ್ಕಪಕ್ಕದ ಮನೆಗಳ ಮೇಲೆ, ಖಾಲಿ ಜಾಗಕ್ಕೆ ಹಾರಿ ಹೋಗಿ ಬಿದ್ದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದನ್ನೂ ಓದಿ : ಶಿವಮೊಗ್ಗದ ವ್ಯಕ್ತಿಗೆ ಕೇರಳ ಲಾಟರಿಯಲ್ಲಿ 12 ಲಕ್ಷ ಬಹುಮಾನ, ಮುಂದೆ ಕಾದಿತ್ತು ಫಜೀತಿ, ಏನಿದು ಕೇಸ್‌?

ತುಂಡಾದ ಕಂಬಗಳು: ಹೊಳೆಹೊನ್ನೂರಿನ ಕೈಮರ – ಆನವೇರಿ ರಸ್ತೆಯಲ್ಲಿ ಭಾರಿ ಗಾಳಿ, ಮಳೆಗೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಹಾಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ವ್ಯತ್ಯಯವಾಗಿದೆ. ಇದರಿಂದಾಗಿ ಸುತ್ತಾಮುತ್ತಲ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ.

ಶಿವಮೊಗ್ಗ ಗಾಳಿ, ಮಳೆ: 1 ಕಾರು ಜಖಂ, ಹಾರಿದ ಮನೆಗಳ ಛಾವಣಿ

ಅಡಿಕೆ, ತೆಂಗಿನ ಮರಗಳು ತುಂಡಾಗಿವೆ

ಭಾರಿ ಗಾಳಿಯಿಂದಾಗಿ ಶಿವಮೊಗ್ಗ, ಭದ್ರಾವತಿ ತಾಲೂಕಿನ ಹಲವೆಡೆ ಭಾರಿ ಹಾನಿಯಾಗಿದೆ. ತೋಟಗಳಲ್ಲಿ ತೆಂಗಿನ ಮರಗಳು, ಅಡಿಕೆ ಮರಗಳು ತುಂಡಾಗಿ ಬಿದ್ದಿವೆ. ಇದರಿಂದ ರೈತರಿಗೆ ನಷ್ಟವಾಗಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಯುವಕನ ತಲೆಯಲ್ಲಿ ಸಿಲುಕಿದ ಮಚ್ಚು, ಅದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು, ಏನಿದು ಕೇಸ್‌?

ಕಂಬಗಳು ಕಟ್‌, ವೈರ್‌ಗಳು ತುಂಡು

ಹೊಳೆಹೊನ್ನೂರು ಸುತ್ತಾಮುತ್ತಾ ಭಾರಿ ಗಾಳಿಗೆ ವಿದ್ಯುತ್‌ ಕಂಬಗಳು ಉರುಳಿವೆ. ಇದರಿಂದ ಆ ಮಾರ್ಗದಲ್ಲಿ ವಿದ್ಯುತ್‌ ವ್ಯತ್ಯವಾಗಿದೆ. ಹನುಮಂತಾಪುರ ಸೇರಿದಂತೆ ಹಲವಡೆ ವಿದ್ಯುತ್‌ ವೈರ್‌ಗಳು ತುಂಡಾಗಿವೆ.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 26, 2026 at 9:16 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 26, 2026

Leave a Comment