ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಈ ವಾರ ಮತ್ತೆ ಮಳೆ, ಏಕೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS, 9 DECEMBER 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಬೆಂಗಳೂರು : ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಭಾರತದ ಹಲವೆಡೆ ಮತ್ತೆ ಮಾಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಡಿ.10 ರಿಂದ 13ರವರೆಗೆ ದಕ್ಷಿಣ ಭಾರತದ ಹಲವೆಡೆ ಮಳೆಯಾಗಲಿದೆ.

ಡಿ.10ರಂದು ತಮಿಳುನಾಡು, ಪುದುಚೆರಿ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಹಾಗಾಗಿ ಈ ಭಾಗದಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಡಿ.11ರಂದು ತಮಿಳುನಾಡು, ಪುದುಚೆರಿಗೆ ಆರೆಂಜ್‌ ಅಲರ್ಟ್‌, ಆಂಧ್ರದ ಕರಾವಳಿ, ರಾಯಲಸೀಮ ಭಾಗಕ್ಕೆ ಯಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ.

ರಾಜ್ಯದಲ್ಲೂ ಮಳೆ ಮುನ್ಸೂಚನೆ

ಡಿ.12ರಂದು ಕರ್ನಾಟಕದ ಹಲವೆಡೆ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಅಂದು ತಮಿಳುನಾಡು, ಪುದುಚೆರಿಗೆ ಆರೆಂಜ್‌ ಅಲರ್ಟ್‌, ಆಂಧ್ರದ ಕರಾವಳಿ, ರಾಯಲಸೀಮ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ ರಾಜ್ಯಕ್ಕೆ ಯಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ಡಿ.13ರಂದು ತಮಿಳುನಾಡು, ಪುದುಚೆರಿ, ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಭಾಗ ಮತ್ತು ಕೇರಳ ರಾಜ್ಯಗಳಿಗೆ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

rain-in-shimoga-city-near-NCC-Office.

ಮತ್ತೆ ಮಳೆಯಿಂದ ರೈತರು ಹೈರಾಣು

ಫೆಂಗಲ್‌ ಚಂಡಮಾರುತದಿಂದಾಗಿ ಕಳೆದ ವಾರ ಶಿವಮೊಗ್ಗ ಜಿಲ್ಲೆಯ ಹಲವು ಕಡೆ ಭಾರಿ ಮಳೆಯಾಗಿತ್ತು. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದರು. ಕೊಯ್ಲು ಮಾಡಿದ್ದ ಭತ್ತವನ್ನು ಮಳೆಯಿಂದ ರಕ್ಷಿಸುವುದಕ್ಕೆ ಹರಸಾಹಸ ಪಟ್ಟಿದ್ದರು. ಬಹುತೇಕ ಕಡೆ ಹುಲ್ಲು ತೊಯ್ದು ಹೋಗಿದೆ.

ಇದನ್ನೂ ಓದಿ » ಶಿವಮೊಗ್ಗದ ಸರ್ಜಿ ಆಸ್ಪತ್ರೆ ಇನ್ಮುಂದೆ ಪೇಪರ್‌ ಲೆಸ್‌, ಏನಿದು?

ಚಂಡಮಾರುತದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಕೊಯ್ಲು ಆರಂಭವಾಗಿತ್ತು. ಈಗ ವಾಯುಭಾರ ಕುಸಿತದಿಂದಾಗಿ ಮಳೆಯ ಮುನ್ಸೂಚನೆ ಹೊರ ಬೀಳುತ್ತಿದ್ದಂತೆ ರೈತರು ಆತಂಕಕ್ಕೀಡಾಗಿದ್ದಾರೆ. ಕೊಯ್ಲು ಮುಂದೂಡುವತ್ತ ಯೋಚಿಸುತ್ತಿದ್ದಾರೆ. ಇನ್ನು ಈಗಾಗಲೇ ಕೊಯ್ಲು ಮುಗಿಸಿದವರು ಭತ್ತದ ರಕ್ಷಣೆಗೆ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ. 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment