ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರತ್ಯಕ್ಷನಾದ ಸೂರ್ಯ, ದೂರಾಯ್ತು ಪ್ರವಾಹ ಭಯ, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮೂರು ದಿನದಿಂದ ಅಬ್ಬರಿಸಿದ್ದ ಪುಷ್ಯಾ ಮಳೆ ಬಿಡುವು ನೀಡಿದೆ. ಜಿಲ್ಲೆಯಾದ್ಯಂತ ಮಳೆ ಮರೆಯಾಗಿ ಸೂರ್ಯ ಪ್ರತ್ಯಕ್ಷವಾಗಿದ್ದು, ಪ್ರವಾಹದ ಆತಂಕದಲ್ಲಿದ್ದ ಜನರು ಈಗ ನಿರಾಳರಾಗಿದ್ದಾರೆ.

ಬಿಸಿಲಿನಿಂದ ಬೆಚ್ಚನೆ ವಾತಾವರಣ

ಬೆಳಗ್ಗೆಯಿಂದ ಬಿಸಿಲು ಕಾಣಿಸಿಕೊಂಡಿದ್ದು ಬೆಚ್ಚನೆ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ತಾಲೂಕಿನಾದ್ಯಂತ ಬಿಸಿಲು ಕಾಣಿಸಿಕೊಂಡಿದೆ.

ಇದನ್ನೂ ಓದಿ | ಚಕ್ರಾ ವ್ಯಾಪ್ತಿಯಲ್ಲಿ ದಾಖಲೆ ಮಳೆ, ಮಾಸ್ತಿಕಟ್ಟೆಯಲ್ಲೂ ಜೋರು, 24 ಗಂಟೆಯಲ್ಲಿ ಹೊಸನಗರ ತಾಲೂಕಿನಲ್ಲಿ ಎಷ್ಟಾಯ್ತು ಮಳೆ?

ಕಳೆದ 24 ಗಂಟೆ ಅವಧಿಯಲ್ಲಿ 380 ಮಿ.ಮೀ ಮಳೆಯಾಗಿದ್ದ ತೀರ್ಥಹಳ್ಳಿ ತಾಲೂಕಿನಲ್ಲೂ ಮಳೆ ಕಾಣೆಯಾಗಿದೆ. ದಾಖಲೆ ಮಳೆಯಾಗುವ ಆಗುಂಬೆಯಲ್ಲಿಯು ಬಿಸಿಲು ಪ್ರತ್ಯಕ್ಷವಾಗಿದೆ. ಆದರೆ ಘಾಟಿಯ ಅಲ್ಲಲ್ಲಿ ಮಣು ಕುಸಿದ ವರದಿಯಾಗಿದೆ.

ಇದನ್ನೂ ಓದಿ | ಹಳೆ ಶಿವಮೊಗ್ಗಕ್ಕೆ ನುಗ್ಗಿತು ತುಂಗಾ ನದಿ ನೀರು, ಎಲ್ಲೆಲ್ಲಿ ಹಾನಿಯಾಗಿದೆ?

ಹೊಸನಗರ ತಾಲೂಕಿನಲ್ಲೂ ವರುಣ ಬಿಡುವು ನೀಡಿದ್ದಾನೆ. ಹಾಗಾಗಿ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಗದ್ದೆ, ತೋಟಗಳಿಗೆ ನುಗ್ಗಿದ್ದ ನೀರನ್ನು ಹೊರಕ್ಕೆ ಹಾಕಲು ರೈತರು ಹರಸಾಹಸ ಮಾಡುತ್ತಿದ್ದಾರೆ.

ಇದನ್ನೂ ಓದಿ | ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಮೂರೂವರೆ ಅಡಿ ಹೆಚ್ಚಳ, ತುಂಗಾ ಜಲಾಶಯದ ಹೊರಹರಿವು ಎಷ್ಟಿದೆ ಗೊತ್ತಾ?

ಭಾರಿ ಮಳೆಗೆ ಸಾಕ್ಷಿಯಾಗಿದ್ದ ಸಾಗರ ತಾಲೂಕಿನಲ್ಲೂ ಮಳೆ ಮರೆಯಾಗಿ, ಸೂರ್ಯನ ದರ್ಶನವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 77.8 ಮಿ.ಮೀ ಮಳೆಯಾಗಿದೆ. ಈಗ ಮಳೆ ಕಡಿಮೆಯಾಗಿರುವುದರಿಂದ ಪ್ರವಾಹ ಭೀತಿಯಲ್ಲಿದ್ದ ಜನರು ಆತಂಕದಿಂದ ದೂರಾಗಿದ್ದಾರೆ.

201910078 1160313744448534 8497670934895384150 n.jpg? nc cat=105&ccb=1 3& nc sid=730e14& nc ohc=sHo9IUZf8icAX 5M4v0&tn=XgSJ3kUX1No5RJvs& nc ht=scontent.fblr20 1

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment