ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 12 AUGUST 2024 : ಬೆಳಗಾವಿಯ ರೆಸಾರ್ಟ್ (Resort) ಒಂದರಲ್ಲಿ ಬಿಜೆಪಿ ಮುಖಂಡರು ಸಭೆ ನಡೆಸಿದ್ದರು. ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಇದು ರಾಜ್ಯ ರಾಜಾರಣದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಬಿಜೆಪಿ ಪಾಳಯದಲ್ಲಿಯು ಕುತೂಹಲ ಮೂಡಿಸಿದೆ. ಈ ಮಧ್ಯೆ ರಾಷ್ಟ್ರಭಕ್ತರ ಬಳಗದ ಮುಖಂಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈಶ್ವರಪ್ಪ 4 ಪಾಯಿಂಟ್ ಎಚ್ಚರಿಕೆ
ಅನೇಕ ವರ್ಷ ಹಿರಿಯರು ತಪಸ್ಸು ಮಾಡಿ ಪಕ್ಷ ಕಟ್ಟಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ಸಂಘಟನೆ ಮಾಡುತ್ತಿದ್ದಾರೆ. ಒಂದು ವೇಳೆ ಬೆಳಗಾವಿಯಲ್ಲಿ ಸಭೆ ನಡೆಸಿದವರು ಪಾದಯಾತ್ರೆ ಕೈಗೊಂಡರೆ ಪಕ್ಷದ ಸಂಘಟನೆಗೆ ತೊಡಕಾಗಲಿದೆ. ಪ್ರತಿ ತಾಲೂಕಿನಲ್ಲಿಯು ಬಿಜೆಪಿ ಎರಡು ಭಾಗವಾಗಲಿದೆ. ಅಧಿಕಾರ ಬೇಕು ಎಂಬುವವರು ಒಂದು ಕಡೆ. ಪಕ್ಷ, ಸಿದ್ದಾಂತ ಉಳಿಬೇಕು ಎಂಬುವವರು ಒಂದು ಕಡೆ ಉಳಿಯುತ್ತಾರೆ.
ಬೆಳಗಾವಿಯಲ್ಲಿ ಸಭೆ ನಡೆಸಿದವರು 12 ಮಂದಿ ಮಾತ್ರ ಎಂದು ಉಡಾಫೆ ಬೇಡ. ಅವರಿಗೆಲ್ಲ ಸಂಘಟನೆ ಗಟ್ಟಿ ಆಗಬೇಕು ಎಂಬ ಆಸೆಯಿದೆ. ಅವರೆಲ್ಲ ಕೆಲಸ ಮಾಡುತ್ತಿರುವುದು ಪಕ್ಷಕ್ಕಾಗಿ. ಅಧಿಕಾರ, ಸ್ಥಾನಮಾನಕ್ಕೆ ಅಲ್ಲ. ಕೇಂದ್ರದ ನಾಯಕರು ಆ ಪಾದಯಾತ್ರೆ ಯೋಚನೆ ಮಾಡುತ್ತಿರುವವರನ್ನು ಕರೆದು ಮಾತಾಡಬೇಕು. ಆಗ ಎಲ್ಲ ಕಾರ್ಯಕರ್ತರಿಗು ತೃಪ್ತಿ ಆಗಲಿದೆ.
ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿದ್ದು ಹಲವರಲ್ಲಿ ಆಶ್ಚರ್ಯ ಮೂಡಿಸಿತ್ತು. ಯಡಿಯೂರಪ್ಪ ಮಗ ಎಂಬ ಒಂದೇ ಕಾರಣಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ವಿಧಾನಸಭೆಯಲ್ಲಿ 66 ಸ್ಥಾನಕ್ಕೆ ಕುಸಿದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ 25 ಸೀಟ್ ಗೆದ್ದಿದ್ದೆವು. ಈಗ ಹೊಂದಾಣಿಕೆ ಇದ್ದರೂ 28 ಸೀಟ್ ಗೆಲ್ಲಲು ಸಾಧ್ಯವಾಗಿಲ್ಲ. ಜೆಡಿಎಸ್ ಜೊತೆ ಮೈತ್ರಿಯಾಗದೆ ಇದ್ದಿದ್ದರೆ ಮತ್ತಷ್ಟು ಸ್ಥಾನ ಕಳೆದುಕೊಳ್ಳುತ್ತಿತ್ತು.
ಕೇಂದ್ರದ ನಾಯಕರಿಗೆ ಯಡಿಯೂರಪ್ಪ ಕುಟುಂಬಕ್ಕೆ ಕೈಯಲ್ಲಿ ಪಾರ್ಟಿ ಕೊಡುವಂತ ಮೋಹ ಯಾಕೆ ಎಂಬುದು ತಿಳಿಯುತ್ತಿಲ್ಲ. ಈ ಹಿಂದೆ ಸಾಮೂಹಿಕ ನಾಯಕತ್ವದ ಕುರಿತು ಕೋರ್ ಕಮಿಟಿಯಲ್ಲಿ ಚರ್ಚೆಯಾಗುತ್ತಿತ್ತು. ಸಾಮೂಹಿಕವಾಗಿ ಯೋಚನೆ, ಯೋಜನೆ ಆಗುತ್ತಿತ್ತು. ಈಗ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ತಮ್ಮ ಕುಟುಂಬ, ತಮ್ಮ ಜಾತಿಯಲ್ಲಿ ತಮಗೆ ಬೇಕಾದವರಷ್ಟೇ ಎಲ್ಲೆಡೆ ಇರಬೇಕು ಎಂಬ ಸ್ವಜನ ಪಕ್ಷಪಾತವಿದೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿಯು ನಡೆಯಲಿದೆ ಕರಾವಳಿಯ ಕಂಬಳ ಸ್ಪರ್ಧೆ, ದಿನಾಂಕ ಫಿಕ್ಸ್