ಸಾಗರ ಬಸ್‌ ನಿಲ್ದಾಣದಲ್ಲಿ ಕಳ್ಳತನ, ಮಂಡ್ಯದ ಮಹಿಳೆ ಅರೆಸ್ಟ್‌

ಸಾಗರ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯ ಬ್ಯಾಗ್‌ನಿಂದ 12 ಗ್ರಾಂ ಚಿನ್ನದ ಸರ ಕದ್ದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯಿಂದ ₹1.30 ಲಕ್ಷ ಮೌಲ್ಯದ ಬಂಗಾರದ ಸರ ವಶಕ್ಕೆ ಪಡೆದಿದ್ದಾರೆ.

ಮಂಡ್ಯ ಜಿಲ್ಲೆ ಹುಣಸೂರು ತಾಲೂಕಿನ ಕೆಹೆಚ್‌ಬಿ ಕಾಲೋನಿ ನಿವಾಸಿ ಸುಮಿತ್ರಾ (43) ಬಂಧಿತೆ. ಸೊರಬ ತಾಲೂಕು ಜಡೆ ಗ್ರಾಮದ ಜಯಮ್ಮ ಅವರು ಮಾರಿಕಾಂಬ ಜಾತ್ರೆ ನಿಮಿತ್ತ ಸಾಗರದ ಸಂಬಂಧಿಕರ ಮನೆಗೆ ಬಂದಿದ್ದರು. ಹಬ್ಬ ಮುಗಿಸಿ ಊರಿಗೆ ತೆರಳಲು ಫೆಬ್ರವರಿ 6ರಂದು ಸಾಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ್ದರು.

ಸಾಗರ ಬಸ್‌ ನಿಲ್ದಾಣದಲ್ಲಿ ಕಳ್ಳತನ, ಮಂಡ್ಯದ ಮಹಿಳೆ ಅರೆಸ್ಟ್‌

ಇದನ್ನೂ ಓದಿ : ಸಾಗರ, ಹೊಸನಗರ, ತೀರ್ಥಹಳ್ಳಿ ಜನರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ, ಪ್ರಮುಖ ಸೂಚನೆ ಬಿಡುಗಡೆ

ಸಾಗರ ಬಸ್‌ ನಿಲ್ದಾಣದಲ್ಲಿ ಕಳ್ಳತನ, ಮಂಡ್ಯದ ಮಹಿಳೆ ಅರೆಸ್ಟ್‌

ಬಸ್‌ ನಿಲ್ದಾಣದಲ್ಲಿ ಆಗಿದ್ದೇನು?

ಮಧ್ಯಾಹ್ನ 1 ಗಂಟೆಗೆ ಹೊತ್ತಿಗೆ ಬಸ್ ಬಂದಿತ್ತು. ಬಸ್‌ ಹತ್ತುವಾಗ ರಶ್‌ ಇತ್ತು. ಆ ಸಮಯದಲ್ಲಿ ಜಯಮ್ಮ ಅವರ ಬ್ಯಾಗ್‌ನಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಜಯಮ್ಮ ಅವರು ಸಾಗರ ಟೌನ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ : ಸಾಗರದಲ್ಲಿ ಸ್ವಚ್ಛತೆ ಇಲ್ಲ, ನೀರಿನ ಸಮಸ್ಯೆ ಗಂಭೀರ, ತೀ.ನಾ.ಶ್ರೀನಿವಾಸ್‌ ಆಕ್ರೋಶ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾಗರ ಎಎಸ್‌ಪಿ ಡಾ. ಎನ್.ಜೆ.ಬೆನಕಪ್ರಸಾದ್ ಮೇಲ್ವಿಚಾರಣೆಯಲ್ಲಿ ಇನ್‌ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್ ನೇತೃತ್ವದಲ್ಲಿ ಪಿಎಸ್‌ಐ ಜೆ.ಹೆಚ್.ಶಾಂತರಾಜ್ ಹಾಗೂ ಸಿಬ್ಬಂದಿ ಮೀರಾಬಾಯಿ, ಸನಾವುಲ್ಲ, ಫೈರೋಜ್, ವಿಶ್ವನಾಥ, ಕೃಷ್ಣಮೂರ್ತಿ, ಲೋಕೇಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಸುಮಿತ್ರಾಳನ್ನು ಬಂಧಿಸಿದೆ. ಬಂಗಾರದ ಸರವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್‌ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment