ಶಿವಮೊಗ್ಗ ಲೈವ್.ಕಾಂ | SHIMOGA | 29 ಮಾರ್ಚ್ 2020
ಕರೋನ ಲಾಕ್’ಡೌನ್ ಎಫೆಕ್ಟ್ ಹೈನುಗಾರಿಕೆಗೂ ತಟ್ಟಿದೆ. ಎರಡು ಹೊತ್ತು ಹಾಲು ಖರೀದಿಸದಿರಲು ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಹಾಲು ಒಕ್ಕೂಟ ನಿರ್ಧರಿಸಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು, ಮಾರ್ಚ್ 29ರ ಸಂಜೆ ಮತ್ತು ಮಾರ್ಚ್ 30ರ ಬೆಳಗ್ಗೆ ರೈತರಿಂದ ಹಾಲು ಖರೀದಿಸದಿರಲು ನಿರ್ಧರಿಸಿದೆ.

ಹಾಲು ಖರೀದಿಸದಿರಲು ಕಾರಣವೇನು?
ಲಾಕ್’ಡೌನ್ ಹಿನ್ನೆಲೆಯಲ್ಲಿ ಹಾಲು ಮಾರಾಟ ಪ್ರಮಾಣ ಕುಸಿತವಾಗಿದೆ. ಹೊರ ರಾಜ್ಯಕ್ಕೆ ಪೂರೈಕೆಯು ನಿಂತು ಹೋಗಿದೆ. ಇದೇ ಕಾರಣಕ್ಕೆ ರೈತರಿಂದ ಹಾಲು ಖರೀದಿ ಮಾಡದೆ ಇರಲು ನಿರ್ಧರಿಸಲಾಗಿದೆ ಎಂದು ಶಿಮುಲ್ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ.
ಎಷ್ಟು ಪ್ರಮಾಣದ ಹಾಲು ಖರ್ಚಾಗುತ್ತಿತ್ತು?
ಪ್ರತಿನಿತ್ಯ ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ರೈತರಿಂದ ಶಿಮುಲ್ ಹಾಲು ಸಂಗ್ರಹಿಸುತ್ತಿದೆ. ನಿತ್ಯ 5.20 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತಿತ್ತು. ಇದರಲ್ಲಿ 2.50 ಲಕ್ಷ ಲೀಟರನ್ನು ನಿತ್ಯ ಮಾರಾಟವಾಗುತ್ತಿತ್ತು. ತೆಲಂಗಾಣ ರಾಜ್ಯಕ್ಕೆ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿತ್ತು. ಉಳಿದ ಹಾಲನ್ನು ಪೌಡರ್ ಮತ್ತಿತರ ಉತ್ಪನಗಳ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿತ್ತು.

ಲಾಕ್’ಡೌನ್ ಬಳಿಕ ಹೇಗಿದೆ ಪರಿಸ್ಥಿತಿ?
ಲೌಕ್ ಡೌನ್ ಬಳಿಕ ಹಾಲು, ಮೊಸರು ಮತ್ತು ಮಜ್ಜಿಗೆ ರೂಪದಲ್ಲಿ 1.90 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಬೇರೆ ಒಕ್ಕೂಟಗಳಿಗೆ ಪೂರೈಕೆ ಮಾಡುತ್ತಿರುವ ಶಿಮೂಲ್. ಹೀಗಿದ್ದೂ, ದಿನನಿತ್ಯ 60 ಸಾವಿರ ಲೀಟರ್ ಶಿಮೂಲ್ ನಲ್ಲೇ ಉಳಿಯುತ್ತಿದೆ. ಈ ಹಿನ್ನಲೆ ಖರೀದಿಸದಿರಲು ನಿರ್ಧಾರಿಸಲಾಗಿದೆ ಎಂದು ಶಿಮುಲ್ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200