ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SHIMOGA | ಹಿಂದೂ ಮಹಾಸಭಾ (HINDU MAHASABHA) ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಮೆರವಣಿಗೆಯ ಹಾದಿ ಉದ್ದಕ್ಕೂ ಅಲಂಕಾರ ಮಾಡಲಾಗಿದೆ. ಹಿಂದೂ ಮಹಾಸಭಾ ಗಣಪತಿ ಕುರಿತು ಪ್ರಮುಖ 10 ವಿಚಾರಗಳು (10 POINTS) ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
10 POINTS
POINT 1 ಹಿಂದೂ ಮಹಾಸಭಾ ಗಣಪತಿಯನ್ನು ಮೊದಲು ಪ್ರತಿಷ್ಠಾಪಿಸಿದ್ದೇ ಶಿವಮೊಗ್ಗದಲ್ಲಿ. ಆ ಬಳಿಕ ರಾಜ್ಯದ ವಿವಿಧೆಡೆ ಹಿಂದೂ ಸಂಘಟನೆಗಳ ಮಹಾಮಂಡಳಿ ಹೆಸರಿನಲ್ಲಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಆರಂಭವಾಗಿದ್ದು.
POINT 2 1938 – 39ರ ಆಸುಪಾಸಿನಲ್ಲಿ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಆರಂಭವಾಯಿತು. 1941ರಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಂದರ್ಭ ವೀರ ಸಾವರ್ಕರ್ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಗ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಸೂಚನೆ ನೀಡಿದ್ದರು.
POINT 3 1945ರಲ್ಲಿ ಮೊದಲ ಭಾರಿ ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನೆರವೇರುತ್ತಿದೆ.
POINT 4 ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭ, ಮಸೀದಿ ಮುಂದೆ ಮಂಗಳವಾದ್ಯ ನುಡಿಸುವಂತಿಲ್ಲ ಎಂಬ ಅಲಿಖಿತ ನಿಯಮವಿತ್ತು. 1947ರಲ್ಲಿ ಮೆರವಣಿಗೆ ಸಂದರ್ಭ, ಧರ್ಮಸಿಂಗ್ ಎಂಬುವವರು ತುತ್ತೂರಿ ಊದುತ್ತಾ ಮಸೀದಿ ಮುಂದೆ ಸಾಗಿದರು. ಆಗ ಗಲಭೆ ಸಂಭವಿಸಿ, ಶಿವಮೂರ್ತಿ ಎಂಬ ಯುವಕನ ಹತ್ಯೆಯಾಯಿತು. ನೆಹರೂ ಸ್ಟೇಡಿಯಂ ಪಕ್ಕದ ವೃತ್ತಕ್ಕೆ ಶಿವಮೂರ್ತಿ ಅವರ ಹೆಸರನ್ನೆ ಇಡಲಾಗಿದೆ.
POINT 5 ಮಸೀದಿ ಮುಂದೆ ಮಂಗಳವಾದ್ಯ ನಡಿಸಬಾರದೇಕೆ ಎಂದು ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮೆರವಣಿಗೆ ಸಂದರ್ಭ ಮಂಗಳವಾದ್ಯ ನುಡಿಸುವುದನ್ನು ತಡೆಯಬಾರದು ಎಂದು 1950ರಲ್ಲಿ ಆದೇಶಿಸಿತು.
POINT 6 1947ರ ಗಲಭೆ ಹೊರತು 50 ವರ್ಷ ಯಾವುದೆ ಅಹಿತಕರ ಘಟನೆ ಸಂಭವಿಸಿರಲಿಲ್ಲ. 51ನೇ ವರ್ಷದ ಗಣಪತಿ ಮೆರವಣಿಗೆ ಸಂದರ್ಭ ಕೆಲವು ಕಿಡಿಗೇಡಿಗಳಿಂದ ಗಲಭೆಯಾಯ್ತು. ಇದರಿಂದ ಬೇಸರಗೊಂಡ ಹಿಂದೂ ಮಹಾಸಭಾದ ಮುಖಂಡರು 7 ವರ್ಷ ಗಣಪತಿಯ ಸಾರ್ವಜನಿಕ ಮೆರವಣಿಗೆ ಮಾಡಲಿಲ್ಲ.
POINT 7 ಗಣಪತಿ ಮೆರವಣಿಗೆ ನಿಲ್ಲಿಸಿದ್ದಕ್ಕೆ ಹಿಂದೂ ಮಹಾಸಭಾದ ಪ್ರಮುಖರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖರಿಗೆ ಸೀರೆ, ಬಳೆಗಳನ್ನು ಕಳುಹಿಸಿದ್ದರು. ಆದರೂ ಪರಿಸ್ಥಿತಿ ತಣ್ಣಗಾಗುವರೆಗೆ ಕಾದ ಸಮಿತಿ, 2003ರಲ್ಲಿ ಸಾರ್ವಜನಿಕ ಮೆರವಣಿಗೆ ಆರಂಭಿಸಿತು.
POINT 8 2003ರಲ್ಲಿ ಸಾರ್ವಜನಿಕ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿತು. ಇದನ್ನು ವಿರೋಧಿಸಿ ಮಹಾಸಭಾದ ವತಿಯಿಂದ ಮೆರವಣಿಗೆಗೆ ಮುಂದಾದಾಗ, ನೊಟೀಸ್ ಜಾರಿ ಮಾಡಲಾಯಿತು. ಮೆರವಣಿಗೆಗೆ ಅನುಮತಿ ಕೊಡಲೇಬೇಕು ಎಂದು ಸಮಿತಿಯವರು ಪಟ್ಟು ಹಿಡಿದರು. ವಿಸರ್ಜನೆಯನ್ನು 13 ದಿನ ಮುಂದಕ್ಕೆ ಹಾಕಲಾಯಿತು. ಆಗ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಮಧ್ಯ ಪ್ರವೇಶಿಸಿ, ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದರು. ‘ಗಣಪತಿ ಕೂರಿಸಿದ ಮೇಲೆ ಮೆರವಣಿಗೆ ನಡೆಯಲೆಬೇಕು. ವಿಸರ್ಜನೆ ಆಗಲೇಬೇಕು. ಮೆರವಣಿಗೆಗೆ ಅನುಮತಿ ಕೊಡಿ’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಆ ಬಳಿಕ ಮೆರವಣಿಗೆ ನಡೆಯಿತು.
POINT 9 ಒಮ್ಮೆ ಗಣಪತಿ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೋಟೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಹಿಂದೂ ಮಹಾಸಭಾದ ಮುಖಂಡರು ಠಾಣೆಗೆ ಹೋಗಿ ಪೂಜೆ ಮಾಡುತ್ತಿದ್ದರು. ಪೊಲೀಸರು ಕೂಡ ಪೂಜೆಯಲ್ಲಿಪಾಲ್ಗೊಳ್ಳುತ್ತಿದ್ದರು.
POINT 10 ಕೋವಿಡ್ ಸಂದರ್ಭ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಿಷೇಧಿಸಲಾಗಿತ್ತು. 2022ರಲ್ಲಿ ಮೆರವಣಿಗೆ ಪುನಾರಂಭವಾಗಿದೆ. ರಾಜಬೀದಿ ಉತ್ಸವಕ್ಕೆ ಅದ್ಧೂರಿ ಅಲಂಕಾರ, ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಗಾಂಧಿ ಬಜಾರ್ ಮುಂದೆ ಮಹಾದ್ವಾರ ಕಣ್ತುಂಬಿಕೊಳ್ಳಲು ಜನವೋ ಜನ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.