ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 MAY 2023
SHIMOGA : ವಿಧಾನಸಭೆ ಚುನಾವಣೆಯ ಮತ ಎಣಿಕೆ (Counting) ಕಾರ್ಯ ಮೇ 13ರಂದು ನಡೆಯಲಿದೆ. ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆ ಸಿದ್ಧತೆಗಳು ಪೂರ್ಣಗೊಂಡಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ
ಮತ ಎಣಿಕೆ (Counting) ಹಿನ್ನೆಲೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಲಿದೆ. ಮೇ 13ರ ಬೆಳಗ್ಗೆ 6 ಗಂಟೆಯಿಂದ ಮೇ 14ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಮತ ಯಂತ್ರಗಳು ಸ್ಟ್ರಾಂಗ್ ರೂಂನಲ್ಲಿ ಭದ್ರ, ಏನಿದು ಸ್ಟ್ರಾಂಗ್ ರೂಂ? ಹೇಗಿರುತ್ತೆ ವ್ಯವಸ್ಥೆ?
ನಿಷೇಧಾಜ್ಞೆ ಹಿನ್ನೆಲೆ ಸಹ್ಯಾದ್ರಿ ಕಾಲೇಜು ಬಳಿ 5ಕ್ಕಿಂತಲು ಹೆಚ್ಚು ಜನರು ಗುಂಪುಗೂಡುವಂತಿಲ್ಲ. ಮೆರವಣಿಗೆ, ಸಭೆ, ಸಮಾರಂಭ, ವಿಜಯೋತ್ಸವ ಹಾಗೂ ಸಮಾವೇಶಗಳನ್ನು (Prohibition) ನಡೆಸುವಂತಿಲ್ಲ. ಮಾರಕಾಸ್ತ್ರ, ಸ್ಪೋಟಕಗಳನ್ನು ಈ ಭಾಗದಲ್ಲಿ ಕೊಂಡೊಯ್ಯುವಂತಿಲ್ಲ. ಅಣಕು ಶವ ಪ್ರದರ್ಶನ, ಸಂಭ್ರಮಾಚರಣೆ, ಘೋಷಣೆ ಕೂಗುವುದು, ವಾದ್ಯಗಳನ್ನು ಬಾರಿಸುವುದನ್ನು ನಿಷೇಧಿಸಲಾಗಿದೆ.
ಬ್ಯಾರಿಕೇಡ್, ಮೈಕ್ ವ್ಯವಸ್ಥೆ
ಮತ ಎಣಿಕೆ ವೇಳೆ ರಾಜಕೀಯ ಪಕ್ಷಗಳ ಕಾರ್ಯಕರ್ತರು, ವಿವಿಧ ಕ್ಷೇತ್ರದ ಜನರು ಸಹ್ಯಾದ್ರಿ ಕಾಲೇಜು ಬಳಿ ಜಮಾಯಿಸಲಿದ್ದಾರೆ. ಅವರಿಗೆ ಫಲಿತಾಂಶ ತಿಳಿಸಲು ಕಾಲೇಜು ಬಳಿ ಮೈಕ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸುತ್ತಿನ ಮತ ಎಣಿಕೆ ಆಗುತ್ತಿದ್ದಂತೆ ಫಲಿತಾಂಶವನ್ನು ಮೈಕ್ ಮೂಲಕ ಘೋಷಣೆ ಮಾಡಲಾಗುತ್ತದೆ.
ಇನ್ನು, ಜನರನ್ನು ನಿಯಂತ್ರಿಸಲು ಮತ್ತು ಸಹ್ಯಾದ್ರಿ ಕಾಲೇಜು ಮುಂಭಾಗ ವಾಹನ ಸಂಚಾರ ನಿರ್ಬಂಧಿಸಲು ಬ್ಯಾರಿಕೇಡ್ ಅಳವಡಿಸಲಾಗುತ್ತದೆ. ಈಗಾಗಲೇ ಪೊಲೀಸ್ ಇಲಾಖೆ ಬ್ಯಾರಿಕೇಡ್‌ಗಳನ್ನು ತಂದಿರಿಸಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿಮೇ 13ರಂದು ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮೊದಲಿಗೆ ಪೋಸ್ಟಲ್ ಬ್ಯಾಲೆಟ್ ಎಣಿಕೆ ಕಾರ್ಯ ನಡೆಯಲಿದೆ.