ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 2 OCTOBER 2024 : ವಿಮಾನ ನಿಯಮ ಕಾಯ್ದೆ ಉಲ್ಲಂಘಿಸಿದ್ದಕ್ಕೆ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport) ನೊಟೀಸ್ ಜಾರಿ ಮಾಡಿದ್ದು, 20 ಲಕ್ಷ ರೂ. ದಂಡ ವಿಧಿಸಿದೆ. ನೊಟೀಸ್ ತಲುಪಿದೆ 30 ದಿನಗಳ ಒಳಗೆ ದಂಡ ಪಾವತಿಸಬೇಕು ಎಂದು ಆಪರೇಷನ್ಸ್ ವಿಭಾಗದ ನಿರ್ದೇಶಕ ಚಂದ್ರ ಮಣಿ ಪಾಂಡೆ ಆದೇಶಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿಮಾನ ನಿಲ್ದಾಣಕ್ಕೆ ದಂಡ ವಿಧಿಸಿದ್ದೇಕೆ?
» ಕಳೆದ ಜುಲೈ 10 ರಿಂದ 12ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಸಿಎ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭ ನಿರ್ವಹಣೆ ಕೊರತೆ ಗಮನಕ್ಕೆ ಬಂದಿತ್ತು.
» ವಿಮಾನಯಾನಕ್ಕೆ ಅಗತ್ಯ ಮಾನದಂಡ ಮತ್ತು ಸುರಕ್ಷತೆ ಕ್ರಮ ಕೈಗೊಳ್ಳದ ಹಿನ್ನೆಲೆ ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಗತ್ಯ ಸಂಖ್ಯೆಯ ಉಸಿರಾಟದ ಉಪಕರಣಗಳು, ರಕ್ಷಣಾ ಉಡುಪು ಇಲ್ಲ.
» ಅಗ್ನಿಶಾಮಕ ವಿಭಾಗದಲ್ಲಿ 18 ಸಿಬ್ಬಂದಿ ಇದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಹಾಜರಾತಿ ಪುಸ್ತಕದ ಪರಿಶೀಲನೆ ವೇಳೆ 13 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಕ್ರಾಶ್ ಫೈರ್ ಟೆಂಡರ್ (ಸಿಎಫ್ಟಿ) ಫೈರ್ ಇಂಜಿನ್ ನಿರ್ವಹಣೆಗೆ ಸಿಬ್ಬಂದಿಗೆ ಇಲ್ಲ. ಸಿಎಫ್ಟಿ ವಾಹನ ಟೆಸ್ಟ್ಗಳ ರೆಕಾರ್ಡ್ ಇರಲಿಲ್ಲ ಎಂದು ನೊಟೀಸ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಿಂದ ದೆಹಲಿಗೆ ವಿಮಾನ, ಮುಂಬೈಗೆ ಯಾಕೆ ಸಿಕ್ತಿಲ್ಲ ಕ್ಲಿಯರೆನ್ಸ್? ಸಂಸದರು ಹೇಳಿದ್ದೇನು?
» ರನ್ ವೇ ಎಂಡ್ ಸೇಫ್ಟಿ ಏರಿಯಾ (ಆರ್ಇಎಸ್ಎ) ನಿರ್ವಹಣೆ ಸಮರ್ಪಕವಾಗಿಲ್ಲ. ರನ್ ವೇನ ಟ್ರಾನ್ಸ್ವರ್ಸ್ ಭಾಗದಲ್ಲಿ ಮಣ್ಣು ಕುಸಿತ ಸೇರಿದಂತೆ ಕೆಲವು ನ್ಯೂನತೆಗಳಿದ್ದು, ನಿರ್ವಹಣೆ ಸರಿ ಇಲ್ಲ. ರನ್ ವೇ ಭಾಗದಲ್ಲಿ ಕಲ್ಲುಗಳು ಪತ್ತೆಯಾಗಿವೆ. ರನ್ ಅಂಚಿನಲ್ಲಿ ಲೈಟ್ ಪ್ಯಾನಲ್ಗಳ ನಿರ್ವಹಣೆ ಸರಿ ಇಲ್ಲ ಎಂದು ತಿಳಿಸಲಾಗಿದೆ.
ಶೋ ಕಾಸ್ ನೊಟೀಸ್ ನೀಡಲಾಗಿತ್ತು
ನ್ಯೂನತೆಗಳ ಕುರಿತು ವಿಮಾನಯಾನ ನಿರ್ದೇಶನಾಲಯವು ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಆ.1ರಂದು ನೊಟೀಸ್ ಜಾರಿ ಮಾಡಿತ್ತು. ಹತ್ತು ದಿನದ ಬಳಿಕ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ದಿ ನಿಗಮ (ಕೆಎಸ್ಐಐಡಿಸಿ) ಉತ್ತರ ನೀಡಿತ್ತು. ಆದರೆ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿದ ನೊಟೀಸ್ ನೀಡಿದೆ.
ಮೇಲ್ಮನವಿ ಸಲ್ಲಿಸಲು ಅವಕಾಶವಿದೆ
ನೊಟೀಸ್ಗೆ ಮೇಲ್ಮನವಿ ಸಲ್ಲಿಸಲು ಕೆಎಸ್ಐಐಡಿಸಿಗೆ ಅವಕಾಶವಿದೆ ಎಂದು ತಿಳಿಸಲಾಗಿದೆ. ನಾಗರಿಕ ವಿಮಾನಯಾನ ಖಾತೆಯ ಜಂಟಿ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. 30 ದಿನಗಳ ಒಳಗೆ ಒಂದು ಸಾವಿರ ರೂ. ಶುಲ್ಕ ಪಾವತಿಸಿ ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ » ಕರ್ನಾಟಕ ಸಂಘ, ನೂತನ ಕಾರ್ಯಕಾರಿ ಸಮಿತಿಗೆ 15 ಮಂದಿ ಆಯ್ಕೆ