ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020
ಜಿಲ್ಲೆಯಲ್ಲಿ ಕರೋನ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ. ಅದರೆ ಈ ನಡುವೆ ಶಿವಮೊಗ್ಗದಲ್ಲಿ ಸೋಂಕಿನಿಂದ ಗುಣಮುಖವಾಗುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಶೇ.50ರಷ್ಟು ಸೋಂಕಿತರು ಗುಣವಾಗಿ ಮನೆ ಸೇರಿದ್ದಾರೆ.
ಮತ್ತಿಬ್ಬರು ಆಸ್ಪತ್ರೆಯಿಂದ ಬಿಡುಗಡೆ
ಸೋಮವಾರ ಮತ್ತೆ ಇಬ್ಬರು ಕರೋನದಿಂದ ಗುಣಮುಖವಾಗಿದ್ದಾರೆ. ಪಿ810 ಮತ್ತು ಪಿ995 ಅವರನ್ನು ಬಿಡುಗಡೆ ಮಾಡಲಾಗಿದೆ.
ಈತನಕ ಬಿಡುಗಡೆ ಆದವರೆಷ್ಟು?
ಶಿವಮೊಗ್ಗ ಜಿಲ್ಲೆಯಲ್ಲಿ ಈತನಕ 26 ಮಂದಿ ಗುಣಮುಖವಾಗಿದ್ದಾರೆ. ಇವರನ್ನೆಲ್ಲ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಎಲ್ಲರು ತಮ್ಮ ಮನೆಗೆ ತಲುಪಿದ್ದು, ಅಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಕಳೆದ ಸೋಮವಾರ 4 ಮಂದಿಯನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ಮತ್ತೆ ಮೂವರು ಗುಣಮುಖವಾಗಿದ್ದರು.
ಮೇ 31ರಂದು ಒಟ್ಟಿಗೆ 17 ಮಂದಿನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇವರು ಕೂಡ ಮನೆಯಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಜೂನ್ 1ರಂದು ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ.
ಶೇ.50ರಷ್ಟು ಗುಣಮುಖ
ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 51. ಈ ಪೈಕಿ 26 ಮಂದಿ ಗುಣವಾಗಿದ್ದಾರೆ. ಅಂದರೆ ಶೇ.50ರಷ್ಟು ಮಂದಿ ಗುಣವಾಗಿ, ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿದ್ದಾರೆ. ಇದು ಶಿವಮೊಗ್ಗದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಮನೆಯಲ್ಲಿ ಕ್ವಾರಂಟೈನ್, ನಿರಂತರ ತಪಾಸಣೆ
ಇನ್ನು, ಸೋಂಕಿನಿಂದ ಗುಣವಾಗಿ, ಆಸ್ಪತ್ರೆಯಿಂದ ಬಿಡುಗಡೆಯಾದರೂ ಮನೆಯಲ್ಲಿ ಕ್ವಾರಂಟೈನ್ ಆಗಬೇಕು. ಈ ವೇಳೆ ನಿರಂತರ ತಪಾಸಣೆ ನಡೆಸಲಾಗುತ್ತದೆ. ಶಿವಮೊಗ್ಗದಲ್ಲಿ ಸೋಂಕಿತರು ಗುಣವಾಗಿ ಮೊದಲ ಬಾರಿಗೆ ಆಸ್ಪತ್ರೆಯಿಂದ ಹೊರಬಂದ ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ನೀಡಿದ ಮಾಹಿತಿಯ ವಿಡಿಯೋ ಇಲ್ಲಿದೆ.
ಮೆಗ್ಗಾನ್ ಆಸ್ಪತ್ರೆ ವೈದ್ಯರು, ಸಿಬ್ಬಂದಿಯ ನಿರಂತರ ಶ್ರಮದಿಂದಾಗಿ ಕರೋನದಿಂದ ಸೋಂಕಿತರು ಗುಣವಾಗುತ್ತಿದ್ದಾರೆ. ಇದು ಶಿವಮೊಗ್ಗದ ಜನರು ನೆಮ್ಮದಿ ಪಡುವಂತೆ ಮಾಡಿದೆ. ಹಾಗೆಂದು ಜನರು ನಿರ್ಲಕ್ಷ ತೋರಿದರೆ ಪರಿಸ್ಥಿತಿ ಕೈ ಮೀರುವ ಅಪಾಯವು ಇದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422