ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಮಾಚೇನಹಳ್ಳಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮೂರು ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದವರು ಈ ಕೋರ್ಸುಗಳಿಗೆ (Course) ಸೇರಬಹುದಾಗಿದೆ. ಈ ಕೋರ್ಸುಗಳನ್ನು ಪೂರ್ಣಗಳಿಸಿದರೆ ಶೇ.100ರಷ್ಟು ಉದ್ಯೋಗವಕಾಶವಿದೆ.
ಇದನ್ನೂ ಓದಿ » ಹೊಸನಗರದಲ್ಲಿ ದೇವರ ಕಾರ್ಯದ ವೇಳೆ ಕಲಹ, ವ್ಯಕ್ತಿಯ ಕೊಲೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರಬೇತಿ ಕೇಂದ್ರದ ಪ್ರಾಂಶುಪಾಲ ದೀಪಕ್ ಕುಮಾರ್, ಎಐಸಿಟಿಇ 2010ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಕೌಶಲಾಭವೃದ್ಧಿ, ಉದ್ಯಮಶೀಲತಾ, ಜೀವನೋಪಾಯ ಇಲಾಖೆ ಅಡಿ ಮಾನ್ಯತೆ ಪಡೆದಿದೆ ಎಂದು ತಿಳಿಸಿದರು.
ಕಾಲೇಜಿನ ಹೈಲೈಟ್ಸ್
- ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್, ಡಿಪ್ಲೋಮಾ ಇನ್ ಮೆಕಟ್ರಾನಿಕ್ಸ್ ಕೋರ್ಸುಗಳಿಗೆ ಪ್ರಸಕ್ತ ಸಾಲಿನ ಪ್ರವೇಶ ಆರಂಭವಾಗಿದೆ.
- ಪ್ರತಿ ಕೋರ್ಸ್‌ಗೆ 60 ಸೀಟ್ ಇರಲಿದೆ. ಒಟ್ಟು 180 ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ. ಮೆರಿಟ್ ಮತ್ತು ರೋಸ್ಟರ್ ಪದ್ಧತಿಯಂತೆ ಆಯ್ಕೆ ನಡೆಯಲಿದೆ. ಶೇ.30ರಷ್ಟು ಸೀಟುಗಳು ವಿದ್ಯಾರ್ಥಿನಿಯರಿಗೆ ಕಾಯ್ದಿರಿಸಲಾಗಿದೆ.
- ಬಾಲಕರಿಗೆ ಸುಸಜ್ಜಿತವಾದ ವಸತಿ ನಿಲಯ ಇದೆ. ವಿದ್ಯಾರ್ಥಿಗಳಿಗೆ ಸ್ಟೈಫಂಡ್ ದೊರೆಯಲಿದೆ. ಎರಡನೆ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೆ 28 ಸಾವಿರ ರೂ. ವಿದ್ಯಾರ್ಥಿ ವೇತನ ದೊರೆಯಲಿದೆ.
- ಮಾಚೇನಹಳ್ಳಿಯಲ್ಲಿ 5.15 ಎಕರೆ ವಿಸ್ತೀರ್ಣದಲ್ಲಿ ಸ್ವಂತ ಕಟ್ಟಡವಿದೆ. ವಿಶಾಲವಾದ ತರಗತಿಗಳು, ಯಂತ್ರಾಗಾರ, ಗ್ರಂಥಾಲಯ, ಸುಸಜ್ಜಿತ ಪ್ರಯೋಗಾಲಯ, ನುರಿತ ಉಪನ್ಯಾಸಕರಿದ್ದಾರೆ.
- ಶೇ.70ರಷ್ಟು ಪ್ರಾಯೋಗಿಕ ಶಿಕ್ಷಣವಿರಲಿದೆ. ಕಡ್ಡಾಯವಾಗಿ ಕೈಗಾರಿಕೆ ತರಬೇತಿ ದೊರೆಯಲಿದೆ.
- ಐ.ಟಿ.ಐ ಮತ್ತು ಪಿಯುಸಿ (ವಿಜ್ಞಾನ) ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್‌ಗೆ ನೇರ ಪ್ರವೇಶ ಕಲ್ಪಿಸಲಾಗುತ್ತದೆ.

2025-26ರ ಸಾಲಿನ ಪ್ರವೇಶ ಪ್ರಾರಂಭವಾಗಿದೆ. ಮೂರು ಕೋರ್ಸುಗಳಿವೆ. ಶೇ.70ರಷ್ಟು ಪ್ರಾಯೋಗಿಕ ತರಬೇತಿ ಇರಲಿದೆ. ಆಸಕ್ತರು ನೇರವಾಗಿ ಕಾಲೇಜಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
– ದೀಪಕ್ ಕುಮಾರ್.ವಿ.ಆರ್, ಪ್ರಾಂಶುಪಾಲರು
ಈ ಕೋರ್ಸುಗಳು ಮಧ್ಯಮ ವರ್ಗದ ಮಕ್ಕಳಿಗೆ ತುಂಬಾ ಅನುಕೂಲ. ಪ್ರಾಯೋಗಿಕವಾಗಿಯೆ ಮಕ್ಕಳು ಕಲಿಯುತ್ತಾರೆ. ಕೈಗಾರಿಕಾ ತರಬೇತಿ ಮುಗಿಸಿದರೆ ಮಾತ್ರ ಕೋರ್ಸ್ ಪೂರ್ಣವಾಗುತ್ತದೆ. ಮೂರನೇ ವರ್ಷದಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತದೆ.
– ನಾಗರಾಜ್.ಹೆಚ್.ಪಿ, ಘಟಕ ಮುಖ್ಯಸ್ಥರು
ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕ ಮಂಜುನಾಥ್ ಉಪಸ್ಥಿತರಿದ್ದರು.

LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು





