ಶಿವಮೊಗ್ಗ: ಕಳೆದ ರಾತ್ರಿ ದೆಹಲಿಯಲ್ಲಿ ಸ್ಪೋಟ ಸಂಭವಿಸಿದ ಬೆನ್ನಿಗೆ ರಾಜ್ಯದಲ್ಲಿಯು ಅಲರ್ಟ್ (Alert) ಘೋಷಿಸಲಾಗಿದೆ. ಶಿವಮೊಗ್ಗದಲ್ಲಿಯು ಕಟ್ಟೆಚ್ಚರ ವಹಿಸಲಾಗಿದೆ. ರಾತ್ರಿಯಿಂದಲೇ ಶಿವಮೊಗ್ಗದಲ್ಲಿ ತಪಾಸಣೆ ಹೆಚ್ಚಳ ಮಾಡಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ ಸಿಟಿಯಲ್ಲಿ ಪರಿಶೀಲನೆ
ಕಳೆದ ರಾತ್ರಿಯೇ ಶಿವಮೊಗ್ಗ ನಗರದಾದ್ಯಂತ ಬಾಂಬ್ ಪತ್ತೆ ದಳ ಮತ್ತು ಶ್ವಾನದಳ ವಿವಿಧೆಡೆ ಪರಿಶೀಲನೆ ನಡೆಸಿತು. ನಗರದ ಖಾಸಗಿ ಬಸ್ ನಿಲ್ದಾಣ, ಕೆಎಸ್‌ಅರ್‌ಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಿಟಿ ಸೆಂಟರ್ ಮಾಲ್, ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ದಿಢೀರ್ ತಪಾಸಣೆ ನಡೆಸಲಾಯಿತು. ವಾಹನಗಳು, ತಳ್ಳುಗಾಡಿಗಳು, ಲಗೇಜ್‌ಗಳ ತಪಾಸಣೆ ನಡೆಸಲಾಯಿತು.
ರೈಲ್ವೆ ನಿಲ್ದಾಣದಲ್ಲಿ ಅಲರ್ಟ್
ಇನ್ನು, ರೈಲ್ವೆ ನಿಲ್ದಾಣದಲ್ಲಿಯು ಅಲರ್ಟ್ ಪ್ರಕಟಿಸಲಾಗಿದೆ. ನಿಲ್ದಾಣಕ್ಕೆ ಪ್ರವೇಶಿಸುವ ಪ್ರಯಾಣಿಕರು, ಲಗೇಜ್‌ಗಳ ತಪಾಸಣೆ ನಡೆಸುವಂತೆ ರೈಲ್ವೆ ಪೊಲೀಸರಿಗೆ ಸೂಚನೆ ಬಂದಿದೆ. ಈ ಹಿನ್ನೆಲೆ ರೈಲ್ವೆ ಪೊಲೀಸರು ಕಳೆದ ರಾತ್ರಿಯಿಂದಲೇ ತಪಾಸಣೆ ಹೆಚ್ಚಳ ಮಾಡಿದ್ದಾರೆ.

ವಿಮಾನ ನಿಲ್ದಾಣಕ್ಕು ಅಲರ್ಟ್
ಇನ್ನೊಂದೆಡೆ ಶಿವಮೊಗ್ಗ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ತಪಾಸಣೆ ದುಪಟ್ಟುಗೊಳಿಸಲಾಗಿದೆ. ಪ್ರತಿ ವಾಹನ, ಪ್ರಯಾಣಿಕರು ಮತ್ತು ಲಗೇಜ್‌ಗಳನ್ನು ಪೂರ್ಣ ಪರಿಶೀಲಿಸಿಯೆ ಒಳಗೆ ಬಿಡಲು ಸೂಚಿಸಲಾಗಿದೆ.

ದೆಹಲಿ ಸ್ಪೋಟದ ಬೆನ್ನಿಗೆ ದೇಶಾದ್ಯಂತ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿಯು ಕಟ್ಟೆಚ್ಚರ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಕಂಡು ಬಂದಲ್ಲಿ ತಕ್ಷಣ 112 ಅಥವಾ ಕಂಟ್ರೋಲ್ ನಂಬರ್ 9480803300, 08182 261413 ಗೆ ಸಂಪರ್ಕಿಸಬಹುದು.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿ ಶಿಕ್ಷಕನ ದರೋಡೆ, ರೀಲ್ಸ್‌ಗೆ ಲೈಕ್ ಕೊಟ್ಟವನಿಂದಲೇ ಕೃತ್ಯ
Alert
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





