ಶಿವಮೊಗ್ಗ ಜಂಬೂ ಸವಾರಿ, ಅಂಬಾರಿಯ ತೂಕವೆಷ್ಟು? ಸಾಗರ ಆನೆ ಮೇಲೆ ಎಷ್ಟು ಭಾರ ಇರುತ್ತೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ ಅಂಬಾರಿ (Ambari) ಹೊರಲು ಸಾಗರ ಆನೆ ಸಜ್ಜಾಗಿದೆ. ನಾಡ ದೇವಿಯ ಬೆಳ್ಳಿ ಮಂಟಪ ಹೊತ್ತು ಸಾಗರ ಆನೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದ್ದಾನೆ.

ನಾಡ ದೇವಿ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ ಮತ್ತು ಮಂಟಪ 450 ಕೆ.ಜಿ ಇದೆ. ಇನ್ನು ಆನೆಗೆ ಹಾನಿ ಆಗದಂತೆ ಮತ್ತು ಅಂಬಾರಿ ಜಾರದಂತೆ ಇರಿಸಲು ವಿಶೇಷವಾದ ಬೆಡ್‌ ಹಾಕಲಾಗುತ್ತದೆ. ಅದರ ಒಟ್ಟು ತೂಕ ಸುಮಾರು 200 ಕೆ.ಜಿ. ಶಿವಮೊಗ್ಗದ ಜಂಬೂ ಸವಾರಿಯಲ್ಲಿ ಸಾಗರ ಆನೆ ಸುಮಾರು 650 ಕೆ.ಜಿ ತೂಕವನ್ನು ಹೊತ್ತು ಇವತ್ತು ಮೆರವಣಿಗೆ ಮಾಡಲಿದ್ದಾನೆ.

ಆರನೆ ಬಾರಿ ಅಂಬಾರಿ ಹೊರಲಿದ್ದಾನೆ

dfoಇನ್ನು, ಜಂಬೂ ಸವಾರಿ ಸಿದ್ಧತೆ ಕುರಿತು ಮಾಹಿತಿ ನೀಡಿರುವ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನ ಪಟಗಾರ, ‘ಸಾಗರ ಆನೆ ಈವರೆಗೂ 15 ಬಾರಿ ಶಿವಮೊಗ್ಗ ದಸರಾದಲ್ಲಿ ಭಾಗವಹಿಸಿದೆ. ಐದು ಬಾರಿ ಅಂಬಾರಿ ಹೊತ್ತಿದೆ. ಈಗ ಆರನೇ ಬಾರಿ ಅಂಬಾರಿ ಹೊರಲು ಸಿದ್ದವಾಗಿದೆ. ಆನೆಗಳಿಗೆ ಸ್ನಾನ ಮಾಡಿಸಿ, ಆಹಾರ ನೀಡಿ ಸಿಂಗಾರ ಮಾಡಲಾಗುತ್ತಿದೆ. ಒಂದು ವಾರ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಿದ್ದೇವೆ. ಎಲ್ಲ ಆನೆಗಳು ಆರೋಗ್ಯವಾಗಿವೆ’ಎಂದು ತಿಳಿಸಿದರು.

021025-Sagara-Elephant-Ambari.webp

ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಜಂಬೂ ಸವಾರಿ, ಆನೆಗಳು ರೆಡಿ, ಅಂಬಾರಿ ಮೆರವಣಿಗೆಗೆ ಹೇಗಿದೆ ತಯಾರಿ?

Ambari

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment