ಶಿವಮೊಗ್ಗದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರೋಡ್‌ ಶೋ, ಹೇಗಿತ್ತು ಮೆರವಣಿಗೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 2 MAY 2023

SHIMOGA : ಬಿಜೆಪಿ ಅಭ್ಯರ್ಥಿ ಎಸ್‌.ಎನ್.ಚನ್ನಬಸಪ್ಪ  ಅವರ ಪರವಾಗಿ ಪ್ರಚಾರ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರೋಡ್‌ ಶೋ (Road Show) ನಡೆಸಿದರು. ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಲಕ್ಷ್ಮೀ ಟಾಕೀಸ್‌ ವರೆಗೆ ಮೆರವಣಿಗೆ ನಡೆಯಿತು.

Amith-Shah-road-show-in-Shimoga-Nehru-Road

ಶಿವಪ್ಪನಾಯಕನ ಪ್ರತಿಮೆಗೆ ನಮನ ಸಲ್ಲಿಸಿ ಅಮಿತ್‌ ಶಾ ಅವರು ರೋಡ್‌ ಶೋಗೆ (Road Show) ಚಾಲನೆ ನೀಡಿದರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತೆ ಮೆರವಣಿಗೆಯಲ್ಲಿ ಭಾಗವಹಿಸಿದರು.

ಜನರತ್ತೆ ಕೈ ಬೀಸಿದರು, ಹೂವು ಹಾಕಿದರು

ವಿಶೇಷ ವಾಹನದಲ್ಲಿ ಗೃಹ ಸಚಿವ ಅಮಿತ್‌ ಶಾ, ಮಾಜಿ ಸಚಿವ ಕೆ.ಎಸ್.ಈ‍ಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಎಸ್.ಎನ್.ಚನ್ನಬಸಪ್ಪ  ಅವರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಹಾದಿ ಉದ್ದಕ್ಕೂ ಅಮಿತ್‌ ಶಾ ಅವರು ಜನರತ್ತ ಕೈ ಬೀಸಿದರು, ನಮಸ್ಕಾರ ಮಾಡಿದರು, ಆಗಾಗ ಜನರತ್ತ ಹೂವು ಎರಚಿದರು.

shivamogga live news whatsappa number

ಕಲಾ ತಂಡಗಳು, ಇಕ್ಕೆಲದಲ್ಲಿ ನಿಂತ ಜನರು

ಅಮಿತ್‌ ಶಾ ಅವರ ರೋಡ್‌ ಶೋ ಹಿನ್ನೆಲೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ  ಭಾಗವಹಿಸಿದ್ದವು. ಚಂಡೆ ಮದ್ದಳೆ, ಡೊಳ್ಳು ಕುಣಿತ ತಂಡಗಳು ಇದ್ದವು. ಇನ್ನು, ಅಮಿತ್‌ ಅವರನ್ನು ಕಣ್ತುಂಬಿಕೊಳ್ಳಲು ಜನರು ರಸ್ತೆ ಇಕ್ಕೆಲದಲ್ಲಿಯು ನಿಂತಿದ್ದರು.

ಇದನ್ನೂ ಓದಿ – ಶಿವಮೊಗ್ಗದ ಪ್ರಮುಖ ರಸ್ತೆಗಳು ಬಂದ್‌, ಎಲ್ಲೆಲ್ಲೂ ಬ್ಯಾರಿಕೇಡ್‌, ಭದ್ರತಾ ಸಿಬ್ಬಂದಿ ನಿಯೋಜನೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment