ಶಿವಮೊಗ್ಗ ಲೈವ್.ಕಾಂ | SHIMOGA | 9 ಅಕ್ಟೋಬರ್ 2019
ಜಂಬೂ ಸವಾರಿ ಆರಂಭಕ್ಕು ಮುನ್ನ ಆನೆ ತುಳಿದು ಕಲಾವಿದರೊಬ್ಬರ ಕಾಲಿನ ಮೂಳೆ ಮುರಿದಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಗಳವಾದ್ಯ ನುಡಿಸಲು ಭದ್ರಾವತಿಯಿಂದ ಆಗಮಿಸಿದ್ದ ತಂಡದಲ್ಲಿದ್ದ ಸತೀಶ್ ಎಂಬುವವರ ಕಾಲನ್ನು ಆನೆಯೊಂದು ತುಳಿದಿದೆ. ಸಾಗರ್ ಆನೆ ಮೇಲೆ ಅಂಬಾರಿಯನ್ನು ಇರಿಸುವ ಹೊತ್ತಿಗೆ ಎರಡು ಹೆಣ್ಣಾನೆಗಳನ್ನು ಸಾಗರ್ ಆನೆಯ ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಳ್ಳಲಾಯಿತು. ಈ ವೇಳೆ ಹೆಣ್ಣಾನೆಗಳ ತಿರುಗುವ ರಭಸದಲ್ಲಿ ಕಲಾವಿದನ ಕಾಲು ತುಳಿದಿವೆ.
ಆನೆ ತುಳಿತದ ನೋವಿನಿಂದ ಕುಸಿದು ಕುಳಿತ ಕಲಾವಿದ ಸತೀಶ್ ಅವರಿಗೆ ಸ್ಥಳೀಯರು ಸಂತೈಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳು ಸತೀಶ್ ಅವರ ಸ್ಥಿತಿ ಕುರಿತು ಪಾಲಿಕೆ ಉಪಮೇಯರ್ ಚನ್ನಬಸಪ್ಪ ಮತ್ತು ವಿಪಕ್ಷ ನಾಯಕ ರಮೇಶ್ ಹೆಗ್ಡೆ ಅವರ ಗಮನಕ್ಕೆ ತಂದರು. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200