ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | ASSAULT | 06 ಮೇ 2022
ಕೆಎಸ್ಆರ್ಟಿಸಿ ಬಸ್ ಒಂದನ್ನು ಹಿಂಬಾಲಿಸಿಕೊಂಡು ಬಂದ ಇಬ್ಬರು ಬಸ್ ನಿಲ್ದಾಣದಲ್ಲಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕಿವಿಗೆ ಹೊಡೆದು, ಕೈ ತಿರುಗಿಸಿದ್ದಾರೆ.
ಚಾಲಕ ಸೋಮಲಿಂಗಪ್ಪ ಹನುಮಂತಪ್ಪ ಯಾದವ್ ಹಲ್ಲೆಗೊಳಗಾದವರು. ಇರ್ಷದ್ ಅಹಮದ್ ಮತ್ತು ಆತನ ಸಹಚರ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಸೋಮಲಿಂಗಪ್ಪ ಅವರು ಮೈಸೂರು – ಶಿವಮೊಗ್ಗ- ಹೊಸಪೇಟೆ ಮಾರ್ಗದ ಕೆಎಸ್ಆರ್ಟಿಸಿ ಬಸ್ ಚಾಲಕರಾಗಿದ್ದಾರೆ. ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಚಲಾಯಿಸಿಕೊಂಡು ಬರುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಬಸ್ ಅಡ್ಡಗಟ್ಟಲು ಯತ್ನಿಸಿದ್ದಾರೆ. ಬಳಿಕ ಚಾಲಕ ಸೋಮಲಿಂಗಪ್ಪ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ.
ಬೈಕಿನಲ್ಲಿ ಬಂದವರಿಗೆ ಕ್ಯಾರೆ ಅನ್ನದೆ ಸೋಮಲಿಂಗಪ್ಪ ಅವರು ಬಸ್ ಚಲಾಯಿಸಿಕೊಂಡು ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ತಂದು ನಿಲ್ಲಿಸಿದ್ದಾರೆ. ಇರ್ಷದ್ ಅಹಮದ್ ಮತ್ತು ಆತನ ಜೊತೆಗಿದ್ದವನು ಬೈಕ್ ತಂದು ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ್ದಾರೆ. ಅಲ್ಲದೆ ಬಸ್ಸಿನಿಂದೆ ಕಳಗಿಳಿದ ಚಾಲಕ ಸೋಮಲಿಂಗಪ್ಪ ಅವರ ಕಿವಿಗೆ ಹೊಡೆದು, ಕೈ ತಿರುಗಿಸಿದ್ದಾರೆ. ಹಲ್ಲೆ (ASSAULT) ನಡೆಯುತ್ತಿದ್ದದ್ದನ್ನು ಗಮನಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿ ಹಲ್ಲೆಕೋರರನ್ನು ಹಿಡಿಯಲು ಯತ್ನಿಸಿದ್ದಾರೆ.
ಹಲ್ಲೆಕೋರರು ಇಬ್ಬರು ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ಇರ್ಷಾದ್ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾಗಿದ್ದ ಚಾಲಕ ಸೋಮಲಿಂಗಪ್ಪ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗ KSRTC ಬಸ್ ನಿಲ್ದಾಣ ಹಿಂಭಾಗ ಯುವಕ ಅರೆಸ್ಟ್
ಇದನ್ನೂ ಓದಿ – ಶಿವಮೊಗ್ಗ – ಭದ್ರಾವತಿ KSRTC ಬಸ್ ಕಂಡಕ್ಟರ್ ಮೇಲೆ ಏಕಾಏಕಿ ಹಲ್ಲೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422