ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 14 APRIL 2023
SHIMOGA : ಅಪಘಾತದ ವೇಳೆ ಜಗಳವಾಗಿದ್ದು ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ (Attack) ನಡೆಸಲಾಗಿದೆ. ಇಬ್ಬರು ಯುವಕರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಬಸವನಗಂಗೂರು ಸೇತುವೆ ಬಳಿ ಘಟನೆ ಸಂಭವಿಸಿದೆ. ಆದರ್ಶ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಪ್ರಸನ್ನ ಎಂಬುವವರ ಮೇಲೆಯು ಹಲ್ಲೆಯಾಗಿದೆ.
ಏನಿದು ಪ್ರಕರಣ?
ಆದರ್ಶ ಮತ್ತು ಪ್ರಸನ್ನ ಬೈಕಿನಲ್ಲಿ ಸ್ನೇಹಿತನ ಹುಟ್ಟುಹಬ್ಬಕ್ಕೆ ತೆರಳುತ್ತಿದ್ದರು. ಬಸವನಗಂಗೂರು ಸೇತುವೆ ಬಳಿ ಎದುರಿನಿಂದ ಬಂದ ಓಮ್ನಿ ಕಾರು ಮತ್ತು ಬೈಕ್ ಡಿಕ್ಕಿಯಾಗಿದೆ. ಘಟನೆ ಬಳಿಕ ಓಮ್ನಿ ಕಾರು ಚಾಲಕ ಫೋನ್ ಮಾಡಿದ್ದು, ಸುಮಾರು 20 ಮಂದಿ ಬೈಕುಗಳು, ಎರಡು ಟಿಪ್ಪರ್ ಲಾರಿಗಳಲ್ಲಿ ಬಂದಿದ್ದಾರೆ. ಕಬ್ಬಿಣ ರಾಡ್ ಮತ್ತು ಜಾಕ್ ಲಿವರ್‍ನಿಂದ ಹಲ್ಲೆ (Attack) ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಿಂದ ಜೀರೋ ಟ್ರಾಫಿಕ್‌ನಲ್ಲಿ ವಿಶೇಷ ಆಂಬುಲೆನ್ಸ್‌ನಲ್ಲಿ ಡಾ.ವಿನಯ್ ಬೆಂಗಳೂರಿಗೆ ಶಿಫ್ಟ್
ಘಟನೆಯಲ್ಲಿ ಆದರ್ಶ ಎಂಬಾತನಿಗೆ ಗಂಭೀರ ಗಾಯವಾಗಿದೆ. ಪ್ರಸನ್ನ ಎಂಬಾತನ ಮೇಲೂ ಹಲ್ಲೆಯಾಗಿದೆ. ಆದರ್ಶ ಮತ್ತು ಪ್ರಸನ್ನ ಅವರ ಸ್ನೇಹಿತರು, ಪೋಷಕರು ಸ್ಥಳಕ್ಕೆ ಭೇಟಿ ನೀಡಿ ಜಗಳ ಬಿಡಿಸಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
LATEST NEWS
- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP



