ಶಿವಮೊಗ್ಗದ ಆಟೋಗಳಿಗೆ ಪೊಲೀಸರಿಂದ 3 ಸೂಚನೆ, ಡಿಸ್ ಪ್ಲೇ ಕಾರ್ಡ್ ವಿತರಣೆ, ಏನಿದು? ಕಾರ್ಡಿನಲ್ಲಿ ಏನೇನಿದೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 14 FEBRUARY 2023

SHIMOGA : ಪೊಲೀಸ್ ಇಲಾಖೆ ವತಿಯಿಂದ ನಗರದ ಆಟೋ ಮಾಲೀಕರು ಮತ್ತು ಚಾಲಕರಿಗೆ ಡಿಸ್ ಪ್ಲೇ ಕಾರ್ಡ್ (Auto Display Card) ವಿತರಣೆ ಮಾಡಲಾಯಿತು. ಪೊಲೀಸ್ ಇಲಾಖೆ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಡಿಸ್ ಪ್ಲೇ ಕಾರ್ಡ್ ವಿತರಣೆಗೆ ಚಾಲನೆ ನೀಡಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಚಾಲಕರಿಗೆ ಮೂರು ಸೂಚನೆ

ಇದೆ ವೇಳೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಆಟೋ ಚಾಲಕರಿಗೆ ಮೂರು ಸೂಚನೆ ನೀಡದರು.

AUTO%203

ಸೂಚನೆ 1 : ಆಟೋಗಳಲ್ಲಿ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು ಮತ್ತು ಮೀಟರ್ ಬಳಕೆ ಮಾಡಬೇಕು.

ಸೂಚನೆ 2 : ಎಲ್ಲಾ ಆಟೋ ಚಾಲಕರು, ಮಾಲೀಕರು ಡಿಸ್ ಪ್ಲೇ ಕಾರ್ಡ್ (Auto Display Card) ಪಡೆದುಕೊಳ್ಳಬೇಕು. ಫೆಬ್ರವರಿ 28ರ ಒಳಗೆ ಆಟೋಗಳಲ್ಲಿ ಡಿಸ್ ಪ್ಲೇ ಕಾರ್ಡ್ ಅಳವಡಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಸೂಚನೆ 3 : ಪ್ರಯಾಣಿಕರಿಗೆ ಕಾಣುವ ಹಾಗೆ ಡಿಸ್ ಪ್ಲೇ ಕಾರ್ಡ್ ಅಳವಡಿಸಬೇಕು.

AUTO%201

ಏನಿದು ಡಿಸ್ ಪ್ಲೇ ಕಾರ್ಡ್? ಏನೇನಿರುತ್ತೆ?

ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಸಂಚರಿಸುತ್ತಿರುವ ಆಟೋಗಳಿಗೆ ಡಿಸ್ ಪ್ಲೇ ಕಾರ್ಡ್ ವಿತರಿಸಲಾಗುತ್ತಿದೆ. ಕಾರ್ಡ್ ನಲ್ಲಿ ಆಟೋದ ನಂಬರ್, ಪೊಲೀಸರ ಕ್ರಮ ಸಂಖ್ಯೆ, ಆಟೋ ಮಾಲೀಕರ ಹೆಸರು, ಫೋಟೊ, ವಿಳಾಸ, ಮೊಬೈಲ್ ನಂಬರ್, ದೂರು ನೀಡಲು ಮೊಬೈಲ್ ನಂಬರ್ ಗಳು ಪ್ರಕಟಿಸಲಾಗಿದೆ.

ಡಿಸ್ ಪ್ಲೇ ಕಾರ್ಡಿನ ಎರಡನೆ ಭಾಗದಲ್ಲಿ ಆಟೋ ಚಾಲಕನ ವಿವರ ಮುದ್ರಿಸಲಾಗಿದೆ. ಚಾಲಕನ ಹೆಸರು, ವಿಳಾಸ, ಚಾಲಕನ ಡಿಎಲ್ ನಂಬರ್, ರಕ್ತದ ಗುಂಪು ಇದೆ.

AUTO%202

ಆಟೋ ದರವು ಮುದ್ರಣ

ಡಿಸ್ ಪ್ಲೇ ಕಾರ್ಡಿನಲ್ಲಿ ಆಟೋ ದರವನ್ನು ಮುದ್ರಿಸಲಾಗಿದೆ. ಇದರಿಂದ ಪ್ರಯಾಣಿಕರು ಗೊಂದಲ ನಿವಾರಣೆಯಾಗಲಿದೆ. ಆಟೋ ಚಾಲಕರು ಕೂಡ ಮನಸೋಯಿಚ್ಛೆ ಹಣ ಕೇಳುವುದು ತಪ್ಪಲಿದೆ. ಆಟೋ ಪ್ರಯಾಣದ ಕನಿಷ್ಠ ದರ 40 ರೂ. ನಿಗದಿಯಾಗಿದೆ. ಮೊದಲ ಒಂದೂವರೆ ಕಿ.ಮೀ.ಗೆ ಈ ದರ ಅನ್ವಯ. ನಂತರ ಪ್ರತಿ ಕಿ.ಮೀ.ಗೆ 20 ರೂ. ಏರಿಕೆಯಾಗಲಿದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾಮಾನ್ಯ ದರ ನಿಗದಿಪಡಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಒನ್ ಅಂಡ್ ಹಾಫ್ ದರ ನಿಗದಿಪಡಿಸಲಾಗಿದೆ. ಇದರ ವಿವರ ಡಿಸ್ ಪ್ಲೇ ಕಾರ್ಡಿನಲ್ಲಿ ಇದೆ.

ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಮಾತನಾಡಿ, ಆಟೋ ಡಿಸ್ ಪ್ಲೇ ಕಾರ್ಡ್ ಅಳವಡಿಸಿಕೊಳ್ಳುವುದು ಪ್ರತಿ ಚಾಲಕ, ಮಾಲೀಕನ ಕರ್ತವ್ಯ. ಜಿಲ್ಲಾ ಪೊಲೀಸರೊಂದಿಗೆ ಆಟೋ ಚಾಲಕರು ಕೈ ಜೋಡಿಸಬೇಕು ಎಂದರು.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಿಂದ ಮಾಯವಾದ ಟಾಪ್ 5 ಕಾರ್ಖಾನೆಗಳಿವು, ಈಗ ಜಿಲ್ಲೆಗಿರುವುದು ಒಂದೆ ಆರ್ಥಿಕ ಮೂಲ, ಯಾವುದದು?

ಈ ವೇಳೆ ಸಂಚಾರ ಠಾಣೆ ಇನ್ಸ್ ಪೆಕ್ಟರ್ ಜಯಶ್ರೀ ಎಸ್.ಮಾನೆ, ಪಶ್ಚಿಮ ಸಂಚಾರ ಠಾಣೆ ಪಿಎಸ್ಐ ಶೈಲಜಾ, ಸಂಚಾರ ಠಾಣೆ ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಯಡಿಯೂರಪ್ಪ ತುರ್ತು ಪತ್ರಿಕಾಗೋಷ್ಠಿ, ವಿಮಾನ ನಿಲ್ದಾಣದ ಹೆಸರು ಘೋಷಣೆ, ಯಾರ ಹೆಸರು ಪ್ರಕಟಿಸಿದರು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment